
ಬಳ್ಳಾರಿ: ಸೋಲಿಲ್ಲದ ಸರದಾರ ಸಾಕ್ಷ್ಯಚಿತ್ರ ಬಿಡುಗಡೆ”

news.ashwasurya.in
ಅಶ್ವಸೂರ್ಯ/ಬಳ್ಳಾರಿ: ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜು (ಬಿ.ಪಿ.ಎಸ್.ಸಿ) ಸಭಾಂಗಣದಲ್ಲಿ ಸನ್ಮಾನ್ಯ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಅವರ ಕುರಿತು ಅನ್ನಪೂರ್ಣ ಕ್ರಿಯೇಷನ್ಸ್ ಸಿರಿಗೆರೆ ಇವರು ರಚಿಸಿರುವ “ಸೋಲಿಲ್ಲದ ಸರದಾರ” ಸಾಕ್ಷ್ಯಚಿತ್ರವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ವಿಧಾನಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಅವರು ಒಂದೇ ಕ್ಷೇತ್ರದಿಂದ ಸತತವಾಗಿ ಸುಮಾರು ಎಂಟು ಬಾರಿ ಗೆಲ್ಲುವ ಮೂಲಕ “ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್”ಗೆ ಸೇರಿದ್ದಾರೆ.
ನಮಗೆಲ್ಲ ಮಾದರಿಯಾಗಿ ಇಲಾಖೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಮಗ್ರವಾಗಿ ಮಾರ್ಗದರ್ಶನ ನೀಡುವ ಗುರುಗಳಾಗಿ ಸಿಕ್ಕಿರುವುದು ನನ್ನ ಪುಣ್ಯ…

ಅವರ ಸೇವೆ ಅಪಾರ ರಾಜಕೀಯವಾಗಿ ಇನ್ನಷ್ಟು ಕಾಲ ಸುದೀರ್ಘ ಸೇವೆ ಸಲ್ಲಿಸಲಿ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರು ಶುಭಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಸನ್ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಅವರು, ಬಿ.ಪಿ.ಎಸ್.ಸಿ ಯ ಅಧ್ಯಕ್ಷರಾದ ಶ್ರೀ ಡಾII ಮಹಿಪಾಲ್, ಅನ್ನಪೂರ್ಣ ಕ್ರಿಯೇಷನ್ಸ್ ನಿರ್ದೇಶಕ ಸಿರಿಗೇರಿಯ ಶ್ರೀ ಯರಿಸ್ವಾಮಿ ಸೇರಿದಂತೆ ಅನೇಕ ಗಣ್ಯರು, ಮುಖಂಡರು ಭಾಗವಹಿಸಿದ್ದರು.

