

ಮಹಿಳೆಗೆ ಹೆದರಿಸಿ ಬೆತ್ತಲೇ ವೀಡಿಯೋ ರೆಕಾರ್ಡ್ ಮಾಡಿಕೊಂಡ ಅರ್ಚಕನಿಂದ ಬ್ಲಾಕ್ ಮೇಲ್..!
news.ashwasurya.in
ಮಹಿಳೆಯನ್ನು ಹೆದರಿಸಿ ಬೆತ್ತಲೇ ವೀಡಿಯೋ ರೆಕಾರ್ಡ್ ಮಾಡಿಕೊಂಡ ಅರ್ಚಕನೊಬ್ಬ ಬ್ಲಾಕ್ ಮೇಲ್ ಮಾಡಿದ ಘಟನೆಯೊಂದು ಬಯಲಾಗಿದೆ….!
ಅಶ್ವಸೂರ್ಯ/ಬೆಂಗಳೂರು: ಕೇರಳದ ತ್ರಿಶೂರ್ನ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್ನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲಾಕ್ಮೇಲ್ ಮಾಡಿದ ಆರೋಪದ ಮೇಲೆ ಅರ್ಚಕನನ್ನು ಬಂಧಿಸಲಾಗಿದೆ. ಆದರೆ, ಪ್ರಕರಣದ ಮುಖ್ಯ ಆರೋಪಿ, ದೇವಾಲಯದ ಮುಖ್ಯ ಅರ್ಚಕ ಉನ್ನಿ ದಾಮೋದರನ್ ದೂರು ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ.ಪೊಲೀಸರು ಇತನ ಬಂಧನಕ್ಕಾಗಿ ಭಲೇ ಬಿಸಿದ್ದಾರೆ.

ಪ್ರಕರಣದ ಹಿನ್ನೆಲೆ:
ಗೀತಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ಎನೊ ತೊಂದರೆಯಾಗಿ ತಮಗೆ ಮಾಟಮಂತ್ರದ ದೋಷವಿದೆ ಎಂದು ನಂಬಿ ಕೇರಳದ ಪೆರಿಗೊಟ್ಟುಕ್ಕಾರ ದೇವಾಲಯಕ್ಕೆ ಪೂಜೆಗಾಗಿ ಭೇಟಿ ನೀಡಿದ್ದರು. ಈ ವೇಳೆ ದೇವಾಲಯದ ಅರ್ಚಕ ಅರುಣ್ ಜೊತೆ ಪರಿಚಯವಾಯಿತು. ಅರುಣ್, 24 ಸಾವಿರ ರೂಪಾಯಿ ನೀಡಿದರೆ ವಿಶೇಷ ಪೂಜೆ ಮಾಡಿ ನಿಮ್ಮ ಮೇಲಾದ ಮಾಟಮಂತ್ರವನ್ನು ತೆಗೆಯುವ ಭರವಸೆ ನೀಡಿದ್ದ. ಬಳಿಕ ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು, ನಿಗದಿತ ದಿನದಂದು ದೇವಾಲಯಕ್ಕೆ ಬರಲು ಸೂಚಿಸಿದ್ದ.
ಕೆಲವು ದಿನಗಳ ಬಳಿಕ, ಅರುಣ್ ತಡರಾತ್ರಿಯಲ್ಲಿ ಮಹಿಳೆಗೆ ನಿರಂತರ ವಾಟ್ಸ್ಆ್ಯಪ್ ಕರೆಗಳನ್ನು ಮಾಡಲಾರಂಭಿಸಿದ. ಈ ಕರೆಗಳಲ್ಲಿ ಆತ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. “ನಿಮಗೆ ಮಾಡಿರುವ ಮಾಟಮಂತ್ರ ತೆಗೆಯಬೇಕಾದರೆ ನೀವು ಬೆತ್ತಲಾಗಬೇಕು” ಎಂದು ಒತ್ತಾಯಿಸಿದ್ದಾನೆ.ಮಹಿಳೆ ಇದನ್ನು ನಿರಾಕರಿಸಿದಾಗ, “ಬೆತ್ತಲಾಗದಿದ್ದರೆ, ನಿಮ್ಮ ಇಬ್ಬರು ಮಕ್ಕಳು ಸಾಯುವಂತೆ ರಿಟರ್ನ್ ಪೂಜೆ ಮಾಡುತ್ತೇನೆ” ಎಂದು ಬೆದರಿಕೆ ಒಡ್ಡಿದ್ದಾನೆ..!
ಅರುಣ್ನ ಬೆದರಿಕೆಗೆ ಗಾಬರಿಯಾದ ಮಹಿಳೆ.ಅರ್ಚಕನ ಒತ್ತಾಯಕ್ಕೆ ಮಣಿದು ಬೆತ್ತಲೆಯಾದಾಗ, ಆತ ಆ ಕ್ಷಣವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.ಇದನ್ನೇ ಬಂಡವಾಳ ಮಾಡಿಕೊಂಡು ಮಹಿಳೆಯನ್ನು ಕೇರಳಕ್ಕೆ ಕರೆಸಿದ್ದಾನೆ. “ನೀವು ಬಂದರೆ ರೂಂ ಬುಕ್ ಮಾಡುತ್ತೇನೆ” ಎಂದು ಹಿಂಸೆ ನೀಡಿದ್ದಾನೆ. ನೀಚನ ಒತ್ತಡಕ್ಕೆ ಸಿಲುಕಿ, ಮಹಿಳೆ ಕೇರಳಕ್ಕೆ ಹೋಗಿದ್ದಾಳೆ
ಕೇರಳದಲ್ಲಿ, ಅರುಣ್ ಮತ್ತು ಮುಖ್ಯ ಅರ್ಚಕ ಉನ್ನಿ ದಾಮೋದರನ್ ಇಬ್ಬರೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾರಿನೊಳಗೆ ಇಬ್ಬರೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ದೂರು ಮತ್ತು ಪೊಲೀಸ್ ಕಾರ್ಯಾಚರಣೆ

ಇಬ್ಬರ ಹಿಂಸೆಗೆ ಬೇಸತ್ತ ಮಹಿಳೆ, ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತಡರಾತ್ರಿ ಅರುಣ್ ಕಳುಹಿಸಿದ ಸಂದೇಶಗಳ ಸ್ಕ್ರೀನ್ಶಾಟ್ಗಳು ಮತ್ತು ರೂಂಗೆ ಬರಲು ಒತ್ತಾಯಿಸಿದ ಕರೆಯ ರೆಕಾರ್ಡಿಂಗ್ಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಅರುಣ್ನನ್ನು ಬಂಧಿಸಿದ್ದಾರೆ. ಆದರೆ, ಮುಖ್ಯ ಆರೋಪಿ ಉನ್ನಿ ದಾಮೋದರನ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ.
ಪ್ರಕರಣದ ಗಂಭೀರತೆ

ಪ್ರತಿಷ್ಠಿತ ದೇವಾಲಯದ ಅರ್ಚಕರಿಂದಲೇ ಇಂತಹ ನೀಚ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯ ಧೈರ್ಯದಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.ಬಂಧಿತ ಅರುಣ್ನನ್ನು ವಿಚಾರಣೆಗೊಳಪಡಿಸಲಾಗುತ್ತಿದ್ದು, ಉನ್ನಿ ದಾಮೋದರನ್ನನ್ನು ಶೀಘ್ರ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ತನಿಖೆ ಮುಂದುವರಿದಿದ್ದು ಇವರಿಂದ ಬೇರೆ ಮಹಿಳೆಯರಿಗೂ ಅನ್ಯಾಯ ಆಗಿರಬಹುದಾ.? ಎನ್ನುವ ಆನುಮಾನ ಕೆಲವರನ್ನು ಕಾಡತೋಡಗಿದೆ..ಪೊಲೀಸರ ತನಿಖೆಯಿಂದ ನೀಚ ಅರ್ಚಕರ ಮುಖವಾಡದ ಬದುಕು ಬಯಲಾಗಲಿದೆ…


