ರಾಜ ರಘುವಂಶಿ ಮಧುಚಂದ್ರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಸ್ಫೋಟಕ ಸುಳಿವು ಕೊಟ್ಟ ಅ 10 ರೂಪಾಯಿ ನೋಟ್.!


news.ashwasurya.in
ಅಶ್ವಸೂರ್ಯ/ಇಂದೋರ್: ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಕೆಲವೊಂದು ಸತ್ಯಗಳು ಬಯಲಾಗುತ್ತಿದೆ.
ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ
10 ರೂಪಾಯಿ ನೋಟಿನಿಂದ ಹವಾಲಾ ದಂಧೆಯ ಸುಳಿವು ಸಿಗ್ತಾ.!? ಆರೋಪಿಗಳ ಮೊಬೈಲ್ ಫೋನ್ನಲ್ಲಿ ಪಾಸ್ವರ್ಡ್ಗಳು, ಹರಿದ ನೋಟುಗಳು ಮತ್ತು ಹವಾಲಾ ವಹಿವಾಟುಗಳ ಪುರಾವೆಗಳು ಕಂಡುಬಂದಿವೆ.ಪ್ರಮುಖ ಆರೋಪಿ ರಾಜ್ ಕುಶ್ವಾಃನ ಮೊಬೈಲ್ ಫೋನ್ನಲ್ಲಿ ಹಳೆಯ 10 ರೂಪಾಯಿ ನೋಟುಗಳ ಚಿತ್ರಗಳು ಕಂಡುಬಂದಿವೆ ಎಂದು ಮೂಲಗಳು ಹೇಳಿವೆ, ಇವುಗಳನ್ನು ಹವಾಲಾ ವಹಿವಾಟಿನಲ್ಲಿ ‘ಸಾಕ್ಷಿ’ಯಾಗಿ ಬಳಸಲಾಗುತ್ತಿದೆ.
ವಿಚಾರಣೆಯ ಸಮಯದಲ್ಲಿ, ಮಾಸ್ಟರ್ ಮೈಂಡ್ ರಾಜ್, ಸೋನಮ್ ಮತ್ತು ಗೋವಿಂದ್ ರಘುವಂಶಿ ಜೊತೆ ವ್ಯವಹಾರ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಸೋನಮ್ ರಾಜ್ ನಿಂದ 50,000 ರೂಪಾಯಿ ಪಡೆದು ಕೊಲೆಗಾರನನ್ನು ಶಿಲ್ಲಾಂಗ್ ಗೆ ಕಳುಹಿಸಲು ಸಹಾಯ ಮಾಡಿದ್ದ ಎನ್ನಲಾಗಿದೆ. ಇದನ್ನು ಹವಾಲಾ ಜಾಲದ ಮೂಲಕ ಪತ್ತೆಹಚ್ಚಲಾಗಿದೆ. ಆರೋಪಿ ಸೋನಮ್ ಸಹೋದರ ಗೋವಿಂದ್ ‘ಶ್ರೀ ಬಾಲಾಜಿ’ ಎಂದು ವ್ಯವಹಾರ ನಡೆಸುತ್ತಿದ್ದು, ಅಲ್ಲಿ ರಾಜ್ ಹಿಂದೆ ಕೆಲಸ ಮಾಡುತ್ತಿದ್ದನು.

ಈ ವ್ಯವಹಾರವು ಹವಾಲಾಗೆ ಸಾಕ್ಷಿಯಾಗಲಿದೆ ಎಂದು ನಂಬಲಾಗಿದೆ. ಜಿತೇಂದ್ರ ರಘುವಂಶಿ ಎಂಬ ಸಂಬಂಧಿಗೆ ಸೇರಿದ ಸ್ಥಳೀಯ ಖಾತೆಗಳ ಮೂಲಕ ಸೋನಮ್ ಮತ್ತು ಗೋವಿಂದ್ ಗೌಪ್ಯ ಸಂಭಾಷಣೆ ನಡೆಸಿದ್ದಾರಂತೆ.!? ಇದರಲ್ಲಿ 6 ಅಂಕಿಗಳ ವಹಿವಾಟುಗಳು ಸೇರಿವೆ. ಕೆಲವು ಖಾತೆಗಳು 14 ಲಕ್ಷ ರೂಪಾಯಿಗಳವರೆಗೆ ಹಿಂಪಡೆಯುವಿಕೆ ಮತ್ತು ಠೇವಣಿಗಳನ್ನು ತೋರಿಸುತ್ತವೆಯಂತೆ.?
ಇಂದೋರ್ ಅಪರಾಧ ವಿಭಾಗವು ಹವಾಲಾಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಡಿಜಿಟಲ್ ಡೇಟಾ ಮತ್ತು ನಗದು ವಹಿವಾಟಿನ ವಿವರಗಳನ್ನು ಇಡಿಗೆ ಸೋನಂ ಕೊಲೆಗೆ ಸಂಚು ರೂಪಿಸಿದ್ದಾಳೆ ಎಂಬುದು 100% ಸತ್ಯ ಎಂದು ಆಕೆಯ ಸಹೋದರ ಗೋವಿಂದ್ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.
ಸತ್ಯವನ್ನು ಕಂಡುಹಿಡಿಯಲು ಸೋನಂ ಮತ್ತು ರಾಜ್ ಕುಶ್ವಾಃ ನನ್ನು ನಾರ್ಕೊ ಪರೀಕ್ಷೆಗಳಿಗೆ ಒಳಪಡಿಸಬೇಕೆಂದು ರಾಜಾ ಅವರ ಕುಟುಂಬ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ, ಗೋವಿಂದ್ ತಮ್ಮ ವ್ಯವಹಾರವನ್ನು ಬಹಳ ವೇಗವಾಗಿ ವಿಸ್ತರಿಸಿದ್ದಾರೆ.

ಎಂದು ಹೇಳಲಾಗುತ್ತದೆ. ಅವರ ಗಳಿಕೆ ಈಗ ಅನುಮಾನದಲ್ಲಿದೆ. ಅವರು ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ತೆರೆಮರೆಯಲ್ಲಿ ಅಕ್ರಮ ವಹಿವಾಟು ನಡೆಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಮತ್ತು ಇಡಿ ಈ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಹಂತಕಿ ಸೋನಮ್ ರಘುವಂಶಿ ಲಕ್ಕಿ ನಂಬರ್ 11.!! ಸೋನಮ್ ರಘುವಂಶಿಗೂ, ಲಕ್ಕಿ ನಂಬರ್ 11ರ ನಂಟೇನು.?
ಹನಿಮೂನ್ಗಾಗಿ ಮೇಘಾಲಯದ ಶಿಲ್ಲಾಂಗ್ಗೆ ಹೋಗಿದ್ದ ಇಂದೋರ್ನ ರಾಜಾ ರಘುವಂಶಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದರ ಮೇಲೊಂದು ಒಂದರಂತೆ ಹಲವು ಕೂತಹಲಕಾರಿ ಸಂಗತಿಗಳು ಬಯಲಾಗುತ್ತಿವೆ.
ಆರೋಪಿ ಸೋನಂ ರಘುವಂಶಿಯನ್ನು
ಪೊಲೀಸ್ ತನಿಖೆಗೆ ಒಳಪಡಿಸಿದ ವೇಳೆ ಸೋನಮ್ಳ ಮತ್ತೊಂದು ಸುಳ್ಳು ಬೆಳಕಿಗೆ ಬಂದಿದೆ. ವಾಸ್ತವವಾಗಿ ಸೋನಮ್ ರಾಜ್ ಮನೆಯಲ್ಲಿ 4 ದಿನಗಳ ಕಾಲ ಇದ್ದರು. ಆದರೆ ಪ್ರಿಯಕರ ರಾಜ್ನ ಫ್ಯಾಮಿಲಿ ಮಾತ್ರ ನಗರದಲ್ಲಿರಲಿಲ್ಲ.
ಎಲ್ಲರೂ ಹೊರಗೆ ಹೋಗಿದ್ದರು. ಇದನ್ನೇ ನೋಡಿಕೊಂಡು ಪ್ರಿಯಕರ ರಾಜ್, ಹಂತಕಿ ಸೋನಮ್ ರಘುವಂಶಿಯನ್ನು ಮನೆಗೆ ಕರೆದೊಯ್ದಿದ್ದಾನೆ. ಇದು ಮಾತ್ರವಲ್ಲದೆ, ಸೋನಮ್ ಅವರ ಅದೃಷ್ಟ ಸಂಖ್ಯೆ ವಾಸ್ತವವಾಗಿ 11 ಎಂದು ತಿಳಿದುಬಂದಿದೆ. 11 ಸಂಖ್ಯೆಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
11 ರ ಜೊತೆ ಸೋನಂ ನಂಟು.!

ಸೋನಮ್ ರಘುವಂಶಿ ಅವರು ಫೆಬ್ರವರಿ 11 ರಂದು ನಿಶ್ಚಿತಾರ್ಥವಾದರು. ಏಪ್ರಿಲ್ 11 ರಂದು, ಅವರು ರಾಜಾ ರಘುವಂಶಿಗಾಗಿ ಮದುವೆಯ ಶೆರ್ವಾನಿ ಖರೀದಿಸಿದರು. ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಮೇ 11 ರಂದು ವಿವಾಹವಾದರು. ಇದಲ್ಲದೆ, ರಾಜಾ ಕಣ್ಮರೆಯಾದ 11 ದಿನಗಳ ನಂತರ ಅವರ ದೇಹವು ಪತ್ತೆಯಾಗಿದೆ. ಸೋನಮ್ ಜೂನ್ 11 ರಂದು ರಾಜಾ ಅವರನ್ನು ಕೊಲ್ಲೋ ಪ್ಲಾನ್ ಮಾಡಿದ್ದರು. ಇದಲ್ಲದೆ, ಸೋನಮ್ ಅವರ ಪ್ರಿಯಕರ ರಾಜ್ ಅವರ ತಂದೆಯ ಮರಣ ವಾರ್ಷಿಕೋತ್ಸವವು 11 ರಂದು ಬರುತ್ತದೆ.!?
ಪತಿ ರಾಜಾ ರಘುವಂಶಿಯ ಹತ್ಯೆ ನಂತರ ಸೋನಂ ಎಲ್ಲಿ ಅಡಗಿಕೊಂಡಿದ್ದಳು?

ಶಿಲ್ಲಾಂಗ್ ಹನಿಮೂನ್ ಪ್ರಕರಣದ ತನಿಖೆಯ ಸಮಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಲವು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ರಾಜಾ ರಘುವಂಶಿಯನ್ನು ಕೊಂದ ನಂತರ, ಸೋನಮ್ ಶಿಲ್ಲಾಂಗ್ನಿಂದ ಇಂದೋರ್ಗೆ ತಲುಪಿದ್ದಳು ಮತ್ತು ಬೇರೆಲ್ಲಿಯೂ ಇರಲಿಲ್ಲ ಎಂದು ತಿಳಿದುಬಂದಿದೆ. ಇಂದೋರ್ನ ದೇವಾಸ್ ನಾಕಾ ಬಳಿಯ ಹೀರಾ ಬಾಗ್ ಕಾಲೋನಿಯಲ್ಲಿರುವ ಹೊಸ ಕಟ್ಟಡದ ಜಿ 1 ಫ್ಲಾಟ್ನಲ್ಲಿ ಅವಳು 14 ದಿನಗಳ ಕಾಲ ಅಡಗಿಕೊಂಡಿದ್ದಳು. ಈ ಫ್ಲಾಟ್ ಅನ್ನು ಆರೋಪಿ ವಿಶಾಲ್ ಚೌಹಾಣ್ ಮೇ 30 ರಂದು ಕಟ್ಟಡದ ಮಾಲೀಕ ಶಿಲೋಮ್ ಜೇಮ್ಸ್ನಿಂದ ಬಾಡಿಗೆಗೆ ಪಡೆದಿದ್ದ ಎಂದು ವರದಿಯಾಗಿದೆ.
ರಾಜಾ ರಘುವಂಶಿ, ಸೋನಂ ರಘುವಂಶಿ
ಸೋನಮ್ ರಘುವಂಶಿ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು, ಇದರಿಂದಲೇ ಆಕೆಯ ಖತರ್ನಾಕ್ ಬುದ್ಧಿಯನ್ನು ಅಳೆಯಬಹುದು.


