
ಬೆಂಗಳೂರು: ಜೈಲಿನಿಂದ ಬೇಲ್ ಪಡೆದು ಹೊರಗೆಬಂದ ಆರೋಪಿಯನ್ನು ಅಟ್ಟಾಡಿಸಿ ಕೊಂದ ಹಂತಕರು, ಜೈಲಿನಿಂದ ಹೊರಬಂದವ ತಿರುಗಿ ಹೋಗಿದ್ದು ಸ್ಮಶಾನಕ್ಕೆ.!!


news ashwasurya.in
ಅಶ್ವಸೂರ್ಯ/ಬೆಂಗಳೂರು : ಪ್ರಕರಣ ಒಂದಕ್ಕೆ ಸಂಭಂಧಿಸಿದಂತೆ ಜೈಲಿಗೆ ಹೊದವ ಬೇಲ್ ಮೇಲೆ ಹೊರಗೆ ಬಂದಿದ್ದ.ಆತನನ್ನು ಮಾತುಕತೆಗೆ ಅಂತಾ ಕರೆಸಿ.. ಏರಿಯಾ ತುಂಬಾ ಅಟ್ಟಾಡಿಸಿ ಕೊಚ್ಚಿ ಕೊಂದಿದ್ದಾರೆ ಹಂತಕರು.! ಜೈಲಿನಿಂದ ಜೀವಂತ ಬಂದವ ಸ್ಮಶಾನಕ್ಕೆ ಶವವಾಗಿ ಹೋಗಿದ್ದಾನೆ.!

ಜೈಲಿನಿಂದ ಶುಕ್ರವಾರವಾಷ್ಟೇ ಬಿಡುಗಡೆ ಆಗಿ ಮನೆಗೆ ಬಂದಿದ್ದ..ಮನೆಗೆ ಬಂದಯ ನಿರಾಳನಾಗಿ ಕುಳಿತವನಿಗೆ ಮೊಬೈಲ್ ಕರೆಯೊಂದು ಬಂದಿತ್ತು.. ಆತನಿಂದ ಹಲ್ಲೆಗೆ ಒಳಗಾಗಿದ್ದವನೇ ಕಾಲ್ಮಾಡಿ ಮಾತುಕತೆಗೆ ಅಂತಾ ಕರೆದು ತನ್ನ ಸಹಚರನ ಜೊತೆಗೂಡಿ ಕೊಚ್ಚಿ ಕೊಲೆ ಮಾಡಿದ್ದಾರೆ.. ಹೀಗೆ ಹತ್ಯೆಗೈದಿದ್ದ ಹಂತಕರನ್ನು ಕಾಲಿಗೆ ಗುಂಡೇಟು ಹೊಡೆದು ಜೆಜೆ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಗುಂಡೇಟು ತಿಂದು ಅರೆಸ್ಟ್ ಆಗಿರುವ ಇಬ್ಬರು ಹಂತಕರು.. ದೀಪು (28) ಹಾಗೂ ಅರುಣ್ (27).. ಇಬ್ಬರೂ ಜೆಜೆ ನಗರ ಠಾಣೆ ವ್ಯಾಪ್ತಿಯ ಪುಡಿ ರೌಡಿಗಳು.

ನಿನ್ನೆ ರಾತ್ರಿ ಜೆ.ಜೆ.ನಗರದ ಜನತಾ ಕಾಲೋನಿಯಲ್ಲಿ ವಿಜಯ್ (26) ಎಂಬಾತನನ್ನು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹತ್ಯೆಯಾಗಿರೋ ವಿಜಯ್ ಹಾಗೂ ಅರುಣ್ ಮಧ್ಯೆ ವೈರತ್ವವಿತ್ತು ಮೊದಲಿನಿಂದಲೂ ಹೊಡೆದಾಟವಿತ್ತು.. ಇಬ್ಬರೂ ಒಬ್ಬರಿಗೊಬ್ಬರು ದ್ವೇಷವನ್ನು ಸಾಗಿಸಿಕೊಂಡೆ ಬಂದಿದ್ದರು. ಅರುಣ್ ಹಾಗೂ ವಿಜಯ್, ಕೆಲ ತಿಂಗಳುಗಳ ಹಿಂದೆ ಜಗಳ ಮಾಡಿಕೊಂಡಿದ್ದರು.

ಜಗಳದ ವೇಳೆ ಅರುಣ್ಗೆ ಕೊಲೆಯಾದ ವಿಜಯ್ ಚಾಕುವಿನಿಂದ ಇರಿದಿದ್ದ.. ಅರುಣ್ ಆಸ್ಪತ್ರೆ ಸೇರಿದ್ದ. ಆಫ್ ಮರ್ಡರ್ ಕೇಸ್ ನಲ್ಲಿ ವಿಜಯ್ ಜೈಲಿಗೆ ಹೋಗಿದ್ದ.. ಚಾಕು ಚುಚ್ಚಿಸಿಕೊಂಡು ಹಲ್ಲೆಗೆ ಒಳಗಾಗಿದ್ದ ಅರುಣ್ ಗಲಾಟೆ ನಂತರ ವಿಜಯ್ ಮೇಲೆ ಸೇಡು ತಿರಿಸಿಕೊಳ್ಳುಲು ಸ್ಕೆಚ್ ಹಾಕಿ ಕುಳಿತಿದ್ದನಂತೆ ..
ವಿಜಯ್ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಅರುಣ್ ಕಾಯುತ್ತಿದ್ದಂತ ಸಮಯದಲ್ಲೇ ಶುಕ್ರವಾರವಷ್ಟೇ ಜೈಲಿನಿಂದ ವಿಜಯ್ ಬಿಡುಗಡೆ ಆಗಿದ್ದ.. ಈ ಬಗ್ಗೆ ಮಾಹಿತಿ ಪಡೆದಿದ್ದ ಆರೋಪಿ ಅರುಣ್ ಬಿಡುಗಡೆಯಾಗಿದ್ದ ವಿಜಯ್ನನ್ನ ರಾಜಿ ಸಂಧಾನಕ್ಕೆಂದು ಜನತಾ ಕಾಲೋನಿ ಬಳಿಗೆ ಅರುಣ್ ಕರೆಸಿಕೊಂಡಿದ್ದಾನೆ.. ರಾತ್ರಿ ಮಾತುಕತೆಗೆಂದು ಬಂದ ವಿಜಯ್ನನ್ನು ಅರುಣ್ ಮತ್ತು ದೀಪು ಏರಿಯಾ ತುಂಬಾ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಆರೋಪಿಗಳ ಕೃತ್ಯ ಇಡೀ ಏರಿಯಾವನ್ನೇ ಬೆಚ್ಚಿ ಬೀಳಿಸಿತ್ತು.. ಬಳಿಕ ಹತ್ಯೆಮಾಡಿದ್ದ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಗಳು ರಾಜರಾಜೇಶ್ವರಿ ನಗರದ ಸಮೀಪದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು.
ಇನ್ನು ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜೆ.ಜೆ.ನಗರ ಠಾಣೆ ಪೊಲೀಸರಿಗೆ, ಆರೋಪಿಗಳು ಅಡಗಿರುವ ಮಾಹಿತಿ ಸಿಕ್ಕಿದೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೋಲಿಸರ ತಂಡ ಆರೋಪಿಗಳನ್ನು ಬಂಧಿಸಲು ಹೋಗಿದ್ದಾರೆ ಅ ವೇಳೆ ಆರೋಪಿಗಳಿಬ್ಬರೂ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ತಕ್ಷಣವೇ ಅಪಾಯದ ಸುಳಿವರಿತ ಪೊಲೀಸ್
ಇನ್ಸಪೆಕ್ಟರ್ ಕೆಂಪೇಗೌಡ ಅವರು
ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ..
ಆದರೂ ಆರೋಪಿಗಳು ಮಾರಕಾಸ್ತ್ರಗಳಿಂದ ಮತ್ತೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೈದಿದ್ದಾರೆ.ತಕ್ಷಣವೇ ಪೊಲೀಸ್ ಇನ್ಸಪೆಕ್ಟರ್ ಕೆಂಪೇಗೌಡ
ಬಳಿಕ ಇಬ್ಬರ ಕಾಲಿಗೂ ಇನ್ಸ್ಪೆಕ್ಟರ್ ಕೆಂಪೇಗೌಡ ಅವರು ಇಬ್ಬರ ಕಾಲಿಗೂ ಗುಂಡು ಹೊಡೆದು ಕೆಡವಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಗುಂಡೇಟು ಬಿದ್ದ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..


