ಕಾಸರಗೋಡು: ಅಂಗಡಿಗೆ ನುಗ್ಗಿ ಯುವತಿಗೆ ಬೆಂಕಿ ಹಚ್ಚಿದ ಪ್ರಕರಣ : ಚಿಕಿತ್ಸೆ ಫಲಿಸದೆ ಯುವತಿ ಸಾವು.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ ಕಾಸರಗೋಡು :ನೀಚನೊಬ್ಬ ಅಂಗಡಿಗೆ ನುಗ್ಗಿ ಬೆಂಕಿ ಯುವತಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆಯಲ್ಲಿ ದೇಹದ ಭಾಗ ಸಾಕಷ್ಟು ಸುಟ್ಟು ಹೋಗಿದ್ದರಿಂದ ಯುವತಿ ಚಿಕಿತ್ಸೆ ಫಲಿಸದೆ ಸಾವಿನಂಚಿಗೆ ಸರಿದಿದ್ದಾಳೆ.!
ಯುವತಿ ಪೊಲೀಸರಿಗೆ ದೂರು ನೀಡಿದ ವೈಷಮ್ಯದಿಂದ ನೀಚನೊಬ್ಬ ಅಂಗಡಿಗೆ ನುಗ್ಗಿ ಯುವತಿಗೆ ಬೆಂಕಿ ಹಚ್ಚಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ
ಬೇಡಡ್ಕ ನಿವಾಸಿ ರಮಿತಾ ( 22) ಮೃತ ಯುವತಿ. ತಮಿಳುನಾಡು ಮೂಲದ ರಾಮಕೃತ (57) ಬೆಂಕಿ ಹಚ್ಚಿದ ಆರೋಪಿ.
ಮೃತ ರಮಿತಾ ಬೇಡಡ್ಕದ ಮನ್ನಡ್ಕ ಎಂಬಲ್ಲಿ ಅಂಗಡಿ ನಡೆಸುತ್ತಿದ್ದಳು. ಆರೋಪಿ ರಾಮಕೃತ ಪಾನಮತ್ತನಾಗಿ ಬಂದು ಆಕೆಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದನಂತೆ. ಇವನ ದಿನನಿತ್ಯದ ಕಿರುಕುಳದಿಂದ ಬೆಸತ್ತ ರಮಿತಾ ಬೇಡಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದಳು.
ಇದೇ ಕಾರಣಕ್ಕೆ ರಿವೆಂಜ್‌ಗೆ ಬಿದ್ದ ನೀಚ ವೈಷಮ್ಯದಿಂದ ಎ.8 ರಂದು ಸಂಜೆ 3 ಗಂಟೆಯ ಸುಮಾರಿಗೆ ಅಂಗಡಿಯೊಳಗೆ ನುಗ್ಗಿದ ಆರೋಪಿ ಯುವತಿಯ ಮೇಲೆ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದಾನೆ.ಈ ಕೃತ್ಯ ನಡೆಸಿ ಪರಾರಿಯಾಗಲೆತ್ನಿಸಿದ್ದ ಆರೋಪಿಯನ್ನು ಸ್ಥಳೀಯ ನಾಗರಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತೀವ್ರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.