ಭದ್ರಾವತಿ : ಕ್ರಿಮಿನಲ್ ನಸ್ರು ಅಲಿಯಾಸ್ ನಸ್ರುಲ್ಲಾ ಕಾಲಿಗೆ ಪೊಲೀಸರ ಗುಂಡೇಟು.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಭದ್ರಾವತಿ : ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಮೇಲೆ ಗಾಂಜಾ ಪ್ರಕರಣ ದಾಖಲಾಗಿತ್ತು.ಆತನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.!
ಈ ವೇಳೆ ಆರೋಪಿ ಪೊಲೀಸ್ ಸಿಬ್ಬಂದಿ ಮೌನೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ತಕ್ಷಣವೇ ಎಚ್ಚೇತ್ತುಕೊಂಡ ಪಿಎಸ್ಐ ಚಂದ್ರಶೇಖರ್ ನಾಯ್ಕ್
ತಮ್ಮ ಸರ್ವಿಸ್ ರಿವಲ್ವಾರ್‌ನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿಯ ಕಾಲಿಗೆ ಗುಂಡು ಹೊಡೆದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಪೋಲಿಸರ ಗುಂಡೇಟು ಬಿದ್ದ ವ್ಯಕ್ತಿ
ಆರೋಪಿ ನಸ್ರು ಅಲಿಯಾಸ್ ನಸ್ರುಲ್ಲಾ ಎಂದು ತಿಳಿದುಬಂದಿದೆ. ನಸ್ರು ಗಾಂಜಾ ಮಾರಾಟ ಪ್ರಕರಣದಲ್ಲಿ ಆರೋಪಿ ಯಾಗಿದ್ದು ಭದ್ರಾವತಿ ನಗರದ ವಿವಿಧ ಠಾಣೆಗಳಲ್ಲಿ FIR ದಾಖಲಾಗಿದೆಯಂತೆ.
ಭದ್ರಾವತಿ ನಗರದ ಅನ್ವರ್ ಕಾಲೋನಿ ನಿವಾಸಿಯಾದ ನಸ್ರು ವಿರುದ್ಧ
ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿತ್ತು.ಈ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಇತನಿರುವ ಮಾಹಿತಿ ತಿಳಿದ ಪೊಲೀಸರ ತಂಡ ಬಂಧಿಸಲು ತೆರಳಿದ್ದ ಸಂಧರ್ಭದಲ್ಲಿ ಈ ಘಟನೆ ನೆಡೆದಿದೆ.