Headlines

ತೀರ್ಥಹಳ್ಳಿ: ಮಾಳುರು ಠಾಣಾ ವ್ಯಾಪ್ತಿ, ಹೋಳೆಕೊಪ್ಪ ಗ್ರಾಮದ, ಕಲ್ಕೊಪ್ಪ ತುಂಗೆಯ ತಟದಲ್ಲಿ ಅಕ್ರಮ ಮರಳು ದಂಧೆ..! ಅಕ್ರಮ ಹಣ ಮಾಡಲು ವೈಲೆಂಟ್ ಅದ್ನಾ ಎಸ್‌ಪಿ ಡ್ಯೂಟಿ ಪೊಲೀಸಪ್ಪ.!?

ಮಾಳುರು ಠಾಣೆಯಲ್ಲಿ ಎಸ್‌ಪಿ ಡ್ಯೂಟಿ ಮಾಡುತ್ತಿರುವ ಪೊಲೀಸಪ್ಪನಿಗೆ ಮೈತುಂಬಾ ಹಸಿವು ಬಾಯ್ತುಂಬ ಪುಗಸ್ಸಟ್ಟೆ ಕಾಸಿನ ಮೇಲುಕು ಇವನನ್ನು ದಿಕ್ಕು ತಪ್ಪಿಸಿದೆ. ಹಾಕಿದ ಪವಿತ್ರ ಖಾಕೀಯ ಕರ್ತವ್ಯವನ್ನೆ ಮರತೆವನಂತೆ ಹಣ ಮಾಡಲು ನಿಂತು ಬಿಟ್ಟಿದ್ದಾನೆ.ಪತ್ರಿಕೆ ಇವನ ಅಷ್ಟೂ ಮಾಹಿತಿಯನ್ನು ಕಲೆಹಾಕಲು ಮುಂದಾಗಿದೆ.ಈತ ಕರ್ತವ್ಯಕ್ಕೆ ಬಂದು ಬೆರಳೆಣಿಕೆ ವರ್ಷ ಆಗಿದ್ದರು ತೀರ ಪಳಗಿದವನಂತೆ ಆಡುತ್ತಿದ್ದಾನೆ.ಇವನು ಅಕ್ರಮವಾಗಿ ಹಣಮಾಡುವ ಖಯಾಲಿ ಯಾವ ಮಟ್ಟಕ್ಕಿದೆ ಎನ್ನುವುದನ್ನು ಮುಂದಿನ ವರದಿಯಲ್ಲಿ ತಿಳಿಸುತ್ತೇನೆ‌. ಪುಗಸ್ಸಟ್ಟೆ ಹಣ ಕೈಸೇರುತ್ತಿದ್ದಂತೆ ಸಂತೋಷ ಪಡುವ ಇತ ಅಕ್ರಮ ದಂಧೆಕೋರರಿಗೆ ಗ್ರೀನ್ ಸಿಗ್ನಲ್ ತೋರಿಸುತ್ತಾನೆ.ಮಾಳುರು ಠಾಣೆಯಲ್ಲಿ ಪಿಎಸ್‌ಐ ಆಟಕ್ಕುಂಟೂ ಲೆಕ್ಕಕ್ಕೆ ಇಲ್ಲದಂತಾಗಿದೆ.ಆ ಮಟ್ಟಕ್ಕಿದೆ ಎಸ್‌ಪಿ ಡ್ಯೂಟಿ ಮಾಡುತ್ತಿರವ ಪೊಲೀಸಪ್ಪನ ರೇಂಜ್.!ಇನ್ನಾದರು ಹಾಕಿದ ಪವಿತ್ರ ಖಾಕೀಗೆ ದ್ರೋಹ ಮಾಡದೆ ಅಕ್ರಮ ಮರಳು ದಂಧೆಕೋರರನ್ನು ಮಟ್ಟಹಾಕಿ.ಅಕ್ರಮ ಮರಳು ಸಾಗಟದ ದಂಧೆಕೋರರ ಜೆಸಿಬಿಯ ಬಗೆತದಿಂದ ಬಳಲಿರುವ ತುಂಗೆಗೆ ಒಂದಷ್ಟು ನೆಮ್ಮದಿ ಮತ್ತು ಗ್ರಾಮದ ಜನತೆಗೆ ದೂಳು ಮತ್ತು ಟಿಪ್ಪರ್ ಮತ್ತು ಪಿಕಪ್ ವಾಹನದ ಕರ್ಕಶ ಧ್ವನಿಯಿಂದ ಮುಕ್ತಿ ಸಿಗಲಿ….ಇನ್ನಾದರು ನಿದ್ರೆಗೆ ಜಾರಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಕೊಳ್ಳಲಿ, ಇಲ್ಲವಾದಲ್ಲಿ ಸಂಬಂದ ಪಟ್ಟ ಅಧಿಕಾರಿಗೆ ಮರಳು ಮಾಫಿಯಾ ದವರಿಂದ ಹರಿದು ಬರುವ ಹಣದ ಕುರಿತು ಬರೆಯ ಬೇಕಾಗುತ್ತದೆ.

Leave a Reply

Your email address will not be published. Required fields are marked *

Optimized by Optimole
error: Content is protected !!