Headlines

ಪೈವಳಿಕೆ: ಆಟೋ ಚಾಲಕನ ಮತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ಬಾಲಕಿ, ಚಾಲಕ ನಾಪತ್ತೆಯಾದ ರಾತ್ರಿ ಬಾಲಕಿ ಮನೆ ಸಮೀಪ ಸುತ್ತಾಡುತ್ತಿದ್ದ ಇಬ್ಬರು ವ್ಯಕ್ತಿಗಳಿದ್ದ ಬೈಕ್ ಯಾರದ್ದು.!?

ಪೈವಳಿಕೆ: ಆಟೋ ಚಾಲಕನ ಮತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ಬಾಲಕಿ, ಚಾಲಕ ನಾಪತ್ತೆಯಾದ ರಾತ್ರಿ ಬಾಲಕಿ ಮನೆ ಸಮೀಪ
ಸುತ್ತಾಡುತ್ತಿದ್ದ ಇಬ್ಬರು ವ್ಯಕ್ತಿಗಳಿದ್ದ ಬೈಕ್ ಯಾರದ್ದು.!?

ASHWASURYA/SHIVAMOGGA

ashwasurya

ಅಶ್ವಸೂರ್ಯ/ಕುಂಬಳೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ನಿವಾಸಿಯಾದ 15 ವರ್ಷದ ಅಪ್ರಾಪ್ತ ಬಾಲಕಿ ಹಾಗೂ ಆಟೋ ಚಾಲಕನಾದ ಮಂಡೆಕಾಪು ನಿವಾಸಿ ಪ್ರದೀಪ್ (42) ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚಲು ಪೊಲೀಸರು ತೀವ್ರ ತನಿಖೆಯನ್ನು ಆರಂಭಿಸಿದ್ದಾರೆ.
ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರ ಸಾವು ಆತ್ಮಹತ್ಯೆ ಯಾಗಿದೆಯೆಂದು ದೃಢೀಕರಿಸಲಾಗಿದೆ. ಆದರೆ ಆತ್ಮಹತ್ಯೆಗೆ  ಕಾರಣವೇನೆಂದು ತಿಳಿಯಲು ಪೊಲೀಸರು ತನಿಖೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಬಾಲಕಿ ನಾಪತ್ತೆಯಾದ ಫೆಬ್ರವರಿ12ರಂದು ಮುಂಜಾನೆ 1.45ರ ವೇಳೆ ಆಕೆಯ ಮನೆ ಸಮೀಪದಲ್ಲಿರುವ  ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳಿದ್ದ ಒಂದು ಬೈಕ್ ಹಲವು ಬಾರಿ ಅತ್ತಿತ್ತ ಸಂಚರಿಸಿರುವುದಾಗಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ಬೈಕ್ ಯಾರದ್ದೆಂದೂ, ಅದರಲ್ಲಿದ್ದವರು ಯಾರೆಂಬ ಬಗ್ಗೆ ಕೆಲವು ಸೂಚನೆಗಳು ಪೊಲೀಸರಿಗೆ ಲಭಿಸಿದೆ.

1.45ರ ವೇಳೆ ಬೈಕ್ ಬಾಲಕಿಯ ಮನೆ ಸಮೀಪದ ರಸ್ತೆಯಲ್ಲಿ ಸುತ್ತಾಡಿರುವ ಸಂಧರ್ಭದಲ್ಲಿ ಅದರಲ್ಲಿದ್ದ  ಇಬ್ಬರಲ್ಲಿ ಒಬ್ಬ ಪ್ರದೀಪ್ ಆಗಿದ್ದು.  ಮತ್ತೊಬ್ಬ ಪ್ರದೀಪ್‌ನ ಸ್ನೇಹಿತನಾಗಿರಬಹುದು.? ಆದರೆ ಅದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಕುರಿತಾಗಿ ಸಮಗ್ರ ತನಿಖೆ ನಡೆಯುತ್ತಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವೇಳೆ ಬಾಲಕಿ ನಾಪತ್ತೆಯಾದ ದಿನ ಆಕೆಯ ಮೊಬೈಲ್‌ನ ವಾಟ್ಸಪ್‌ಗೆ ಬಂದ ಹಾಗೂ ಹೋದ ಸಂದೇಶಗಳು ನಿರ್ಣಾಯಕವೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಮೊಬೈಲ್‌ನ ಡಿಸ್‌ಪ್ಲೇ ಹಾನಿಗೊಳಿಸಿದ ಸ್ಥಿತಿಯಲ್ಲಿರುವು ಅ ಕಾರಣದಿಂದ ಅದನ್ನು ಪರಿಶೀಲಿಸಲು  ಸಾಧ್ಯವಾಗಲಿಲ್ಲ. ಇದರಿಂದ ಬಾಲಕಿ ಹಾಗೂ ಪ್ರದೀಪ್‌ನ ಮೊಬೈಲ್ ಫೋನ್‌ಗಳನ್ನು ಸೈಬರ್ ಸೆಲ್‌ಗೆ ಹಸ್ತಾಂತರಿಸಲಾಗಿದೆ.  ವಾಟ್ಸಪ್‌ನಿಂದ ಸಂದೇಶಗಳನ್ನು ಪತ್ತೆಹಚ್ಚಲು ಸಾಧ್ಯವಾದರೆ ಸಾವಿಗೆ  ಸಂಬಂಧಿಸಿದ ಕಾರಣಗಳು ತಿಳಿಯಬಹುದೆಂದು ತನಿಖಾ ತಂಡ ಅಂದಾಜಿಸಿದೆ.

ಇದೇ ವೇಳೆ ಬಾಲಕಿ ಹಾಗೂ ಯುವಕನ ನಾಪತ್ತೆಗೆ ಸಂಬಂಧಿಸಿ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಯಾವುದೇ ಲೋಪವುಂಟಾಗಿಲ್ಲವೆಂದು ಹೈಕೋರ್ಟ್ ಅಂದಾಜಿಸಿದೆ. ಬಾಲಕಿಯ ಹೆತ್ತವರು ನೀಡಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಪರಿಗಣಿಸಿ ತನಿಖಾಧಿಕಾರಿಯನ್ನು ಕರೆದು ಕೇಸಿನ ಡೈರಿ ಪರಿಶೀಲಿಸಿದ ಬಳಿಕ ನ್ಯಾಯಾಲಯ ಇಂತಹ ನಿರ್ಧಾರಕ್ಕೆ ಬಂದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!