ಶಿವಮೊಗ್ಗ ನಗರದ ನೂತನ ವಿಮಾನ ನಿಲ್ದಾಣಕ್ಕೆ ಪ್ರಥಮ ವಿಮಾನ ಬೆಂಗಳೂರಿನಿಂದ ಹೊರಟು ಬಂದು ಇಳಿದ ನಂತರದ ಕಾರ್ಯಕ್ರಮದ ನಡುವೆ ಸಂತೆಕಡೂರು ದನಿ ಧ್ವನಿ ಏರಿಸಿ ಪ್ರತಿಭಟಿಸಿದ್ಯಾಕೆ.!?

ಕಾಂಗ್ರೆಸ್ ಯುವ ಮುಖಂಡ ಸಂತೆಕಡೂರ್ ವಿಜಯ್ ಕುಮಾರ್ ( ದನಿ )

  • ಧ್ವನಿ ಎತ್ತಿದ ದನಿಯ ವೀಡಿಯ

ಶಿವಮೊಗ್ಗ ನಗರದ ನೂತನ ವಿಮಾನ ನಿಲ್ದಾಣಕ್ಕೆ ಪ್ರಥಮ ವಿಮಾನ ಬಂದು ಇಳಿದ ಕ್ಷಣದಲ್ಲಿ ಕಾರ್ಯಕ್ರಮದ‌ ನಡುವೆ ಸಂತೆಕಡೂರು ದನಿ ಧ್ವನಿ ಏರಿಸಿ ಪ್ರತಿಭಟಿಸಿದ್ಯಾಕೆ.!?

ಮಲೆನಾಡ ತವರು ನಗರಿ ಶಿವಮೊಗ್ಗದ ಸೋಗಾನೆಯ ನೂತನ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ಬೆಂಗಳೂರಿನಿಂದ ಆರಂಭಗೊಂಡು ಶಿವಮೊಗ್ಗ ನಗರದ ನೂತನ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುವ ಮುಖಾಂತರ ಆರಂಭಗೊಂಡಿದೆ. ಈ ಸಂಧರ್ಭದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜಿಲ್ಲಾ ಹಾಪ್‌ಕಾಮ್ಸ್‌ನ ನಿರ್ದೇಶಕರು ಹಾಗೂ ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷರೂ ಹಾಗೂ ಕಾಂಗ್ರೆಸ್ ಪಕ್ಷದ ಯುವ ನಾಯಕ ಸಂತೆಕಡೂರ್ ಅರ್ ವಿಜಯ್ ಕುಮಾರ್ (ದನಿ) ವಿಮಾನ ನಿಲ್ದಾಣಕ್ಕೆ ಜಾಗ ನೀಡಿದ ರೈತರನ್ನು ಆಭಿನಂದಿಸಿ ಗೌರವಿಸುವ ಸಂಧರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಕಾರಣ ಈ ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣಕ್ಕಾಗಿ ತಮ್ಮ ಜೀವನಾಡಿಯಾಗಿದ್ದ ಭೂಮಿಯನ್ನು ತ್ಯಾಗ ಮಾಡಿದ ನಿಜವಾದ ರೈತರನ್ನು ಗೌರವಿಸುವ ಬದಲು ಇವರನ್ನು ಕಡೆಗಣಿಸಿ. ವಿಮಾನ ನಿಲ್ದಾಣಕ್ಕೆ ಒಂದಿಂಚು ಭೂಮಿಯನ್ನೇ ನೀಡದ ಬಿಜೆಪಿ ಕಾರ್ಯಕರ್ತರನ್ನು ಸನ್ಮಾನಿಸಲಾಗಿದೆ. ಇದು ನಿಜವಾದ ಸಂತ್ರಸ್ಥ ರೈತರನ್ನು ಅವಮಾನಿಸಿದಂತಾಗಿದೆ ಎಂದು ಸಂತೆಕಡೂರ್ ವಿಜಯ್ ಕುಮಾರ್ ( ದನಿ ) ಕಾರ್ಯಕ್ರಮದ ನಡುವೆ ಧ್ವನಿ ಎತ್ತಿ ಕೂಗಿದ್ದಾರೆ ಇವರಂತೆ ಇನ್ನಷ್ಟೂ ಮಂದಿ ಸ್ಥಳೀಯರು ಧ್ವನಿ ಸೇರಿಸಿ ಸಾಥ್ ನೀಡಿದ್ದಾರೆ..

ಈ ವೇಳೆ ವೇದಿಕೆ ಬಳಿ ಇದ್ದ ಜಿಲ್ಲಾ ಹಾಪ್‌ಕಾಮ್ಸ್‌ನ ನಿರ್ದೇಶಕರು ಹಾಗೂ ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷರೂ ಆದ ಆರ್.ವಿಜಯಕುಮಾರ್ ಆಕ್ಷೇಪ ವ್ಯಕ್ತಪಡಿಸಿ ನಿಜವಾದ ರೈತರನ್ನು ಸನ್ಮಾನಿಸದೇ ಬ್ರೋಕರ್ ಕೆಲಸ ಮಾಡುವ ಬಿಜೆಪಿ ಕಾರ್ಯಕರ್ತರನ್ನು ಸನ್ಮಾನಿಸಿರುವುದು ಎಷ್ಟರ ಮಟ್ಟಿಗೆ ಸರಿ. ಇದೇನು ಬಿಜಿಪಿ ಕಾರ್ಯಕ್ರಮವೇ ಎಂದು ಪ್ರಶ್ನಿಸಿದ್ದಾರೆ.

ಸನ್ಮಾನಿತ ಕೃಷ್ಣಪ್ಪ ಹಾಗೂ ಗೋವಿಂದರಾಜು ಅವರು ವಿಮಾನ ನಿಲ್ದಾಣಕ್ಕಾಗಿ ಒಂದಿಂಚು ಭೂಮಿಯನ್ನು ನೀಡಿಲ್ಲ. ಇವರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಆಕ್ಷೇಪಿಸಿದರು. ತಕ್ಷಣವೇ ತಿಳಿಯಾಗಿ ಕಾರ್ಯಕ್ರಮ ಮುಂದುವರೆಯಿತು ಒಟ್ಟಿನಲ್ಲಿ ಮೊದಲ ವಿಮಾನ ಶಿವಮೊಗ್ಗಕ್ಕೆ ಬಂದ ಮೊದಲ ದಿನವೆ ಪ್ರತಿಭಟನೆಯನ್ನು ಎದುರಿಸಿದೆ.

ಭೂಮಿ ಕಳೆದುಕೊಂಡ 303 ರೈತರಿಗೆ ಸೈಟು, ಕೆಲಸ ಕೊಡುವ ಭರವಸೆ ನೀಡಿದ್ದರು. ಈ ಹಿಂದಿನ ಶಾಸಕರ ಬಳಿ ಕೇಳಿದಾಗ ರೈತರಿಗೆ ಕೆಲಸ ಕೊಡಲು ಅಸಾಧ್ಯ ಎಂದಿದ್ದರಂತೆ. ಈಗ ಹೌಸ್‌ ಕೀಪಿಂಗ್‌ಗೆ 18 ಮಹಿಳೆಯರನ್ನು ನೇಮಸಿಕೊಂಡಿದ್ದಾರೆ. ಇವರೆಲ್ಲ ಶಿಕಾರಿಪುರದವರಂತೆ..!?. ಅವರಷ್ಟು ವಿದ್ಯಾರ್ಹತೆ ಇಲ್ಲಿನ ಸ್ಥಳೀಯರಲ್ಲಿ ಇರಲಿಲ್ಲವೆ. ಇವತ್ತು ಇಬ್ಬರನ್ನು ಕರೆದು ಸನ್ಮಾನಿಸಿದ್ದಾರೆ. ಅವರದ್ದು ಒಂದೇ ಒಂದು ಗುಂಟೆ ಜಾಗವು ಹೋಗಿಲ್ಲ.

ಅರುಣ್‌ ಕುಮಾರ್‌‌.ಎಸ್, ಭೂಮಿ ಕಳೆದುಕೊಂಡವರು

ಭೂಮಿಯನ್ನೇ ಕಳೆದುಕೊಳ್ಳದವರನ್ನು ಕರೆದು ಸನ್ಮಾನ ಮಾಡಿದ್ದಾರೆ. ರೈತ ಮುಖಂಡ ಕೆ.ಟಿ.ಗಂಗಾಧರ್‌, ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ವಿಜಯ್‌ ಕಮಾರ್‌, ವೇದಾ ವಿಜಯ್‌ ಕುಮಾರ್‌ ಅವರಿಗೆ ಸನ್ಮಾನ ಮಾಡಬೇಕಿತ್ತು. ಭೂಮಿ ಕಳೆದುಕೊಂಡ ರೈತರ ಪರವಾಗಿ ಹೋರಾಟ ಮಾಡಿದ್ದು ಅವರು. ಈ ಸನ್ಮಾನವನ್ನು ನಾವು ಖಂಡಿಸುತ್ತೇವೆ.

ಗಣೇಶ್‌, ಕಾಚಿನಕಟ್ಟೆ ನಿವಾಸಿ

ಯಾಕೆ ಈ ರೀತಿಯಾದ ಬೆಳವಣಿಗೆ ನೆಡೆದಿದೆ ರೈತರಲ್ಲದವರನ್ನೂ ಸನ್ಮಾನಿಸಲು ಕಾರಣವೇನು? ಅದರಲ್ಲೂ ತಮ್ಮ ‌ಬದುಕಿನ ಉಸಿರಾಗಿದ್ದ ಭೂಮಿಯನ್ನೆ ಒಳ್ಳೆಯ ಕಾರ್ಯಕ್ಕೆ ಕಿಂಚಿತ್ತು ಯೋಚನೆ ಮಾಡದೆ ಕೊಟ್ಟಂತಹ ರೈತರನ್ನು ಆಭಿನಂದಿಸುವಂತಹ ಸಂಧರ್ಭದಲ್ಲಿ ಜಾಗವನ್ನೆ ಕೊಡದ ಇಬ್ಬರು ಮಹಾನುಭಾವರನ್ನು ಸನ್ಮಾನಿಸಲು ಕಾರಣ ಅ ದೇವರಿಗೆ ಗೊತ್ತು..?

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!