ಬಿ ಆರ್ ರಾಘವೇಂದ್ರ ಶೆಟ್ಟಿ, ಅಧ್ಯಕ್ಷರು, ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘ.ತೀರ್ಥಹಳ್ಳಿ
ಇಂದು ತೀರ್ಥಹಳ್ಳಿಯ ಪಟ್ಟಣದ ತುಂಗಾ ತೀರದ ತಟದಲ್ಲಿರು ಮಾಧವ ಮಂಗಲ ಸಭಾ ಭವನದಲ್ಲಿ ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘದ ಆಶ್ರಯದಲ್ಲಿ ಸಂಘದ ಷೇರುದಾರರು ಮತ್ತು ಸಾರ್ವಜನಿಕರಿಗಾಗಿ ಮಣಿಪಾಲಿನ ನುರಿತ ವೈದ್ಯರುಗಳಿಂದ ಬೃಹತ್ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ತೀರ್ಥಹಳ್ಳಿಯ ಎಲ್ಲರೂ ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ
ತೀರ್ಥಹಳ್ಳಿ ಸೆಪ್ಟೆಂಬರ್,12.: ಇಂದು ನಮ್ಮ ಸಹಕಾರಿ ವತಿಯಿಂದ 7 ನೇ ವರ್ಷದ ಸರ್ವಸದಸ್ಯರ ಸಭೆ ಮತ್ತು ಮಣಿಪಾಲ್ ಕೆ.ಎಮ್.ಸಿ.ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೀರ್ಥಹಳ್ಳಿಯ ಕೊಪ್ಪ ರಸ್ತೆಯ ತುಂಗಾತೀರದ ಮಾಧವ ಮಂಗಲ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಆರೋಗ್ಯ ಮೇಳದಲ್ಲಿ ಷೇರುದಾರರು ಮತ್ತು ಸಾರ್ವಜನಿಕರಿಗೆ ಚರ್ಮರೋಗ ತಪಾಸಣೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ ತಪಾಸಣಿ ಸಮುದಾಯ ದಂತ ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣೆ ಮತ್ತು ಕೀಲು ಮತ್ತು ಮೂಳೆ ತಪಾಸಣಿ ಹಾಗೂ ಮಹಿಳೆಯರಿಗೆ ಗರ್ಭಕೋಶ ತಪಾಸಣೆಯನ್ನು ಮಣಿಪಾಲ್ ಕೆ.ಎಮ್.ಸಿ.ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತವಾಗಿ ಏರ್ಪಡಿಸಲಾಗಿದೆ.
ತಾವೂಗಳೆಲ್ಲರು ನಮ್ಮ ಸಹಕಾರಿಯ ಹಿತೈಷಿಗಳಾಗಿದ್ದು ಕಳೆದ ಬಾರಿಯೂ ನಿಮ್ಮೆಲ್ಲರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿರವು ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಈ ಬಾರಿಯೂ ತಾವುಗಳು ಈ ಸರ್ವಸದ್ಯರ ಸಭೆಗೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿರದಲ್ಲಿ ಭಾಗವಹಿಸುವುದರ ಮೂಲಕ ಆರೋಗ್ಯ ತಪಾಸಣೆಯ ಉಪಯೋಗವನ್ನು ಪಡೆದುಕೊಂಡ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ನಿಮ್ಮಲ್ಲಿ ತುಳುನಾಡು ಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಬಿ ಆರ್ ರಾಘವೇಂದ್ರ ಶೆಟ್ಟಿ ಮತ್ತು ಸಂಘದ ಸದಸ್ಯರು ಕೊರಿದ್ದಾರೆ
ಸುಧೀರ್ ವಿಧಾತ, ಶಿವಮೊಗ್ಗ