ಚಿಕ್ಕಮಗಳೂರಿನ ನಾನ್ ವೆಜ್ ಹೋಟೆಲ್‍ ಒಂದರಲ್ಲಿ ಕುರಿ ಮಾಂಸದ ಹೆಸರಿನಲ್ಲಿ ದನದ ಮಾಂಸದ ಬಿರಿಯಾನಿ.!! : ಇಬ್ಬರು ಆರೋಪಿಗಳ ಬಂಧನ.

ಕುರಿ ಮಾಂಸದ ಹೆಸರಿನಲ್ಲಿ ದನದ ಮಾಂಸದ ಬಿರಿಯಾನಿ ತಯಾರಿಸುತ್ತಿದ್ದ ಚಿಕ್ಕಮಗಳೂರಿನ ಬೆಂಗಳೂರು ಹೋಟೆಲ್!!

ಚಿಕ್ಕಮಗಳೂರಿನ ನಾನ್ ವೆಜ್ ಹೋಟೆಲ್‍ ಒಂದರಲ್ಲಿ ಕುರಿ ಮಾಂಸದ ಹೆಸರಿನಲ್ಲಿ ದನದ ಮಾಂಸದ ಬಿರಿಯಾನಿ.!!

ಚಿಕ್ಕಮಗಳೂರು: ಮಾಂಸಾಹಾರಿ ಹೋಟೆಲ್ ಒಂದರಲ್ಲಿ ಕುರಿ ಮಾಂಸದ ಬದಲು ದನದ ಮಾಂಸವನ್ನು ಬಳಸುತ್ತಿರುವುದು ಕಂಡು ಬಂದಿದ್ದು ಸಾಕ್ಷಿ ಸಮೇತವಾಗಿ ಪೊಲೀಸರು ಹೋಟೆಲ್ ಮೇಲೆ ದಾಳಿಮಾಡಿದ್ದಾರೆ ಘಟನೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಗರದ ಐ.ಜಿ. ರಸ್ತೆಯಲ್ಲಿರುವ ಬೆಂಗಳೂರು ಹೋಟೆಲ್ ಹಾಗೂ ಎವರೆಸ್ಟ್ ಹೋಟೆಲ್‍ನಲ್ಲಿ ದನದ ಮಾಂಸ ಇದ್ದಾಗಲೇ ಪೊಲೀಸರು ದಾಳಿಮಾಡಿ ರೆಡ್ ಹ್ಯಾಂಡಾಗಿ ಸೀಜ್ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಎರಡು ಹೋಟೆಲ್‍ನಲ್ಲಿ ಬಿರಿಯಾನಿ ಸವಿದ ಕೇಲವು ಮಂದಿ ಸ್ಥಳಿಯರು ಅನುಮಾನಗೊಂಡು ದನದ ಮಾಂಸವೆ ಹೌದು ಎಂದು ಸಾಬೀತು ಪಡಿಸಿಕೊಂಡಮೇಲೆ ಪೊಲೀಸರಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಅಧಾರದ ಮೇಲೆ ದಾಳಿ ಮಾಡಿದ ನಗರ ಪೊಲೀಸ್ ಠಾಣೆಯ ಪೋಲಿಸರ ತಂಡ ಐದು ಕೆಜಿ ದನದ ಮಾಂಸ ಹಾಗೂ ಅದರಿಂದ ತಯಾರಿಸಿದ್ದ ಬಿರಿಯಾನಿಯನ್ನೂ ವಶಪಡಿಸಿ ಕೊಂಡಿದ್ದಾರೆ.
ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಕೇಂದ್ರ ಸ್ಥಾನ ಈ ಕಾರಣದಿಂದ ಪ್ರವಾಸೋದ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಹೋಟೆಲ್ ಉದ್ಯಮದ ಜೋತೆಗೆ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡು ಬದುಕುದೂಡುತ್ತಿವೆ. ಅದರಲ್ಲೂ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್ ರೆಸಾರ್ಟ್, ಹೋಂಸ್ಟೇ ಮಾಲೀಕರು ದಿನನಿತ್ಯ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್‍ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ಇನ್ನಿತರ ನಾನ್ ವೆಜ್‌ ಅಡುಗೆ ಮಾಡುತ್ತಿದ್ದಾರೆ.

ಒಂದು ಕೆಜಿ ಕುರಿ ಮಾಂಸಕ್ಕೆ 700-750 ರೂಪಾಯಿ ಇದೆ. ಆದರೆ ದನದ ಮಾಂಸ ಕೆಜಿಗೆ 200-300 ರೂಪಾಯಿಗೆ ಬಿಕರಿಯಾಗುತ್ತದೆ.ಹೀಗಾಗಿ ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಶ್ರಣದ ಅಡುಗೆಯನ್ನು ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿ 5 ಕೆ.ಜಿ. ದನದ ಮಾಂಸ ಹಾಗೂ ದನ್ ಮಾಂಸದಿಂದಲೆ ತಯಾರಾದ ಬಿರಿಯಾನಿಯನ್ನು ವಶಕ್ಕೆ ಪಡೆದುಕೊಂಡು ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!