ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್‌ ಅವರನ್ನು ಪಕ್ಷದಿಂದ ಸೈಡಿಗೆ ನೂಕಿದ್ದು. ಕೆ ಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ಸಿಗದಂತೆ ಮಾಡಿದ್ದು ಸಂತೋಷ್‌: ಸ್ವ ಪಕ್ಷದ ವಿರುದ್ಧ ಮತ್ತೆ ಕಿಡಿಕಾರಿದ ರೇಣುಕಾಚಾರ್ಯ!

ಮಾಜಿ ಸಚಿವ ಎಮ್ ಪಿ ರೇಣುಕಾಚಾರ್ಯ

ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್‌ ಅವರನ್ನು ಪಕ್ಷದಿಂದ ಸೈಡಿಗೆ ನೂಕಿದ್ದು. ಕೆ ಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ಸಿಗದಂತೆ ಮಾಡಿದ್ದು ಸಂತೋಷ್‌: ಸ್ವ ಪಕ್ಷದ ವಿರುದ್ಧ ಮತ್ತೆ ಕಿಡಿಕಾರಿದ ರೇಣುಕಾಚಾರ್ಯ!

ಬಿ ಎಲ್ ಸಂತೋಷ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಮಾಜಿ ಸಚಿವ ಮತ್ತು ಬಿಜೆಪಿಯ ಪ್ರಬಲ ನಾಯಕ ಹೊನ್ನಾಳಿಯ ಹೊರಿ ಎಂದೆ ಬಿಂಬಿತರಾಗಿರುವ ಎಂಪಿ ರೇಣುಕಾಚಾರ್ಯ ಮತ್ತೆ ಗುಮ್ಮಿದ್ದಾರೆ. ಖಾಸಗಿ ಟಿವಿ ವಾಹಿನಿಗೆ ಸಂದರ್ಶನ ನೀಡಿರುವ ರೇಣುಕಾಚಾರ್ಯ, ತನ್ನ ಮನದಲ್ಲಿದ್ದ ಮಾತನ್ನು ಹೊರ ಹಾಕಿದ್ದಾರೆ, ತಾನೇ ಮುಖ್ಯಮಂತ್ರಿ ಆಗಬೇಕೆಂದು ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಿದರು. ಸಿಎಂ ಪಟ್ಟದ ಮೇಲೆ ಕಣ್ಣಿಟ್ಟು ಸುಮಾರು ಎಪ್ಪತ್ತೆರಡು ಹೊಸ ಮುಖಗಳಿಗೆ ಟಿಕೆಟ್‌ ಕೊಟ್ಟಿದ್ದರು. ಎಲ್ಲಾ ಹಿರಿಯ ನಾಯಕರನ್ನು ಟಿಕೆಟ್ ಕೊಡದೆ ಬದಿಗೆ ಸರಿಸಿದರು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಿರುವ ಬಿ.ಎಲ್ ಸಂತೋಷ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, ಬಿ.ಎಸ್. ಯಡಿಯೂರಪ್ಪನವರನ್ನು ಕಡೆಗಣಿಸಿ ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಲೆಯೆತ್ತದ ರೀತಿ ಮಾಡಿದ್ದಾರೆ. ಪಕ್ಷದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದೇ ಸಂತೋಷ್ ಎಂದು ಕಿಡಿಕಾರಿದರು. ಬಿಜೆಪಿಯ ಪ್ರಾಮಾಣಿಕ ನಾಯಕ ಜಗದೀಶ್‌ ಶೆಟ್ಟರ್ ಪಕ್ಷಕ್ಕಾಗಿ ಹಗಲಿರುಳು ದುಡಿದಂತವರು. ಅವರ ತಂದೆ ಶಿವಪ್ಪ ಜನಸಂಘದ ಕಾಲದಿಂದಲೂ ಪಕ್ಷವನ್ನು ಕಟ್ಟಿ ಬೆಳಿಸಿದವರು. ಜಗದೀಶ್ ಶೆಟ್ಟರ್ ಅವರು ಶಾಸಕರಾಗಿ, ಸಚಿವರಾಗಿ ವಿರೋಧ ಪಕ್ಷದ ನಾಯಕರಾಗಿ,ನಂತರ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದಂತವರು, ಅಂಥವರಿಗೆ ಟಿಕೆಟ್ ನೀಡಲಿಲ್ಲ ಕಡೆಗಣಿಸಿ ಕೂರಿಸಿದರು ಇನ್ನೂ ಕುರುಬ ಜನಾಂಗದಿಂದ ಪಕ್ಷದ ಪ್ರತಿನಿಧಿಯಾಗಿದ್ದ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರನ್ನು ಟಿಕೆಟ್ ಕೊಡದೆ ಬದಿಗೆ ಕೂರಿಸಿದರು. ಇನ್ನೂ ತನ್ನ ಕ್ಷೇತ್ರದಲ್ಲಿ ತನ್ನದೆ ವರ್ಚಸ್ಸನ್ನು ಹೊಂದಿದ್ದ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದಂತಹ ಅನುಭವಿ ಪ್ರಬಲ ನಾಯಕ ಲಕ್ಷ್ಮಣ್ ಸವದಿ ಅವರಿಗೂ ಸಂತೋಷ್ ಟಿಕೆಟ್ ಸಿಗದಂತೆ ಮಾಡಿದರು. ಯಡಿಯೂರಪ್ಪನವರನ್ನು ವಿರೋಧಿಸುವಂತವರಿಗೆ ಮಾತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಮತ್ತು ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುವ ಅವಕಾಶ ಮಾಡಿಕೊಡಲಾಗುತ್ತಿತ್ತು.!
ತಾನು ಮುಖ್ಯಮಂತ್ರಿ ಆಗಬೇಕೆನ್ನುವ ಏಕೈಕ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಸಂತೋಷ್‌ ಗುಂಪುಗಾರಿಕೆ ಮಾಡಿದ್ದರು. ರಾಜ್ಯದಲ್ಲಿ ತನ್ನದೇ ಪಡೆಯನ್ನು ಕಟ್ಟಿಕೊಳ್ಳಲು ಹೊಸಮುಖಗಳಿಗೆ ಟಿಕೆಟ್‌ ಕೊಡಿಸಿದ್ದರು ಈ ರೀತಿ ಯಾಕೆ ಮಾಡಬೇಕಿತ್ತು. ತನ್ನದೇ ನಡೆಯಬೇಕೆಂಬ ಉದ್ದೇಶದಿಂದ ಹೀಗೆಲ್ಲಾ ಮಾಡಿದ್ದಾರೆ. ಬೊಮ್ಮಾಯಿ ಅವರು ಸಿಎಂ ಆದರೂ ಅವರಿಗೆ ಸರಿಯಾಗಿ ಆಡಳಿತ ಮಾಡಲು ಬಿಡಲಿಲ್ಲ. ಕೈಕಟ್ಟಿಹಾಕಿ ಕೂರಿಸಿದರು ಎಂದರು.
ನಾನು ಯಾವ ಕಾರಣಕ್ಕೂ ಜಾತಿವಾದಿ ಅಲ್ಲ. ಯಡಿಯೂರಪ್ಪ ಅವರನ್ನು ಸಹ ನಾನು ಜಾತಿಯ ಕಾರಣಕ್ಕೆ ಬೆಂಬಲಿಸುವುದಿಲ್ಲ. ನಾನೊಬ್ಬ ಜಾತ್ಯತೀತ ವ್ಯಕ್ತಿ. ನನಗೆ ಜಾತಿಯ ಆವಶ್ಯಕತೆ ಇಲ್ಲ ನಾನು ಹೋರಾಟ ಮಾಡಿಕೊಂಡೆ ಈ ಮಟ್ಟಕ್ಕೆ ಬೆಳೆದು ಬಂದವನು ನಾನು ಹೊನ್ನಾಳಿ ಕ್ಷೇತ್ರದಲ್ಲಿ ಗೆದ್ದಾಗಲೇಲ್ಲ ಜಾತಿ ಅಧಾರದ ಮೇಲೆ ಗೆದ್ದವನಲ್ಲ. ವಿಶ್ವ ಹಿಂದೂ ಪರಿಷತ್ತಿನಲ್ಲಿದ್ದುಕೊಂಡು ಹೋರಾಟ ಮಾಡಿಕೊಂಡೆ ಮೇಲೆ ಬಂದಿದ್ದೀನಿ. ನನ್ನ ರಾಜಕೀಯ ಬೆಳವಣಿಗೆಗೆ ಯಡಿಯೂರಪ್ಪ ನವರು ನನಗೆ ಗಾಡ್‌ ಫಾದರ್‌, ಬಿಜೆಪಿ ತಾಯಿ ಇದ್ದಂತೆ. ಈಗಲೂ ಹೇಳ್ತೆನೆ. ಯಡಿಯೂರಪ್ಪ ಅವರಿಗೆ ನಾಯಕತ್ವ ಕೊಟ್ಟರೆ ಮಾತ್ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಈ ಮಾತನ್ನು ಅಮಿತ್‌ ಷಾ ಅವರಿಗೂ ಹೇಳುತ್ತೇವೆ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ. ಅವರು ಜನರನ್ನು ಎದುರಿಸಿ ಬಂದವರಲ್ಲ. ಅವರೊಂದು ಗ್ಯಾಂಗ್‌ ಕಟ್ಟಿಕೊಂಡಿದ್ದಾರೆ. ಯಾರೂ ಕೂಡ ಜನರಿಂದ ಆಯ್ಕೆಯಾದವರಲ್ಲ. ಪಾರ್ಟಿ ಕಟ್ಟಿದವರಲ್ಲ ಎಂದು ಸಂತೋಷ್‌ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ ಮಾಜಿ ಸಚಿವ ಹೊನ್ನಾಳಿ ಕ್ಷೇತ್ರದ ಬಿಜೆಪಿಯ ಜನಪ್ರಿಯ ಪ್ರಬಲ ನಾಯಕ ಎಮ್ ಪಿ ರೇಣುಕಾಚಾರ್ಯ

ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!