
ಬೆಂಗಳೂರು: ಕಾಂಗ್ರೆಸ್ ಯುವ ಮುಖಂಡನ ಹತ್ಯೆ ಪ್ರಕರಣ. ಶಿವಮೊಗ್ಗದಿಂದ ಗಡಿಪಾರಾಗಿದ್ದ ಆರೋಪಿಗಳಿಗೆ ಸುಪಾರಿ ನೀಡಿ ಹತ್ಯೆ.!!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು: ಕಳೆದವಾರ ತಡರಾತ್ರಿ ಸ್ನೇಹಿತನ ಜೋತೆಗೆ ಬೈಕಿನಲ್ಲಿ ಹೋಗುವಾಗ ಹಿಂಬಾಲಿಸಿಕೊಂಡು ಬಂದ ಹಂತಕರ ಗ್ಯಾಂಗ್ ಏಕಾಏಕಿ ದಾಳಿಮಾಡಿ ನಡುರಸ್ತೆಯಲ್ಲೆ ಕಾಂಗ್ರೆಸ್ ಯುವ ಮುಖಂಡನನ್ನು ಕೊಂದು ಮುಗಿಸಿದ್ದರು.!
ಅ ನಂತರದ ಬೆಳವಣಿಗೆಯಲ್ಲಿ ಪೋಲಿಸರು ಹಂತಕರನ್ನು ಹೆಡೆಮುರಿಕಟ್ಟಿ ಬಂಧಿಸಿದ್ದರು. ಹಂತಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.!?
ಹೌದು ಕಾಂಗ್ರೆಸ್ ಮುಖಂಡ ಹೈದರ್ ಅಲಿ ಕೊಲೆ ಪ್ರಕರಣದ ಬಂಧಿತ ಆರೋಪಿಗಳ ವಿಚಾರಣೆ ವೇಳೆ ಒಂದೊಂದಾಗಿ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ.ಹೈದರ್ ಹತ್ಯೆಯ ಹಂತಕರು ಬೇರೆಯಾರು ಅಲ್ಲ ಶಿವಮೊಗ್ಗ ನಗರದಿಂದ ಗಡಿಪಾರ್ ಆಗಿದ್ದ ನಾಲ್ವರು ಆರೋಪಿಗಳನ್ನು (Accused) ಕರೆಸಿ ಹೈದರ್ ಹತ್ಯೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರೋ ಬಗ್ಗೆ ಒಂದಷ್ಟು ಪುರಾವೆಗಳು ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ..!?
ಬಂಧಿತ 7 ಮಂದಿ ಆರೋಪಿಗಳಲ್ಲಿ ಮತೀನ್, ಸದ್ದಾಂ ಸೇರಿ ನಾಲ್ವರು ಆರೋಪಿಗಳು ಶಿವಮೊಗ್ಗದವರಾಗಿದ್ದು, ಆರೋಪಿಗಳ ವಿರುದ್ಧ ಶಿವಮೊಗ್ಗದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆಯಂತೆ.! ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಕಾರಣ ಆರೋಪಿಗಳನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾ ಇಲಾಖೆ ಈ ಆರೋಪಿಗಳನ್ನು ಶಿವಮೊಗ್ಗದಿಂದ ಗಡಿಪಾರು ಮಾಡಲಾಗಿತ್ತು.

“56” ಕಡೆ ಕೊಚ್ಚಿ ಕಾಂಗ್ರೆಸ್ ಮುಖಂಡನ ಭೀಕರ ಹತ್ಯೆ.!!
ಆರೋಪಿಗಳಿಗೆ ಶಿವಮೊಗ್ಗದಿಂದ ಗಡಿಪಾರು ಮಾಡಿದ್ದ ಕಾರಣ ನೆರವಾಗಿ ಹೋಗಿ ತಲುಪಿದ್ದು ಬೆಂಗಳೂರಿಗೆ.ಅಲ್ಲಿಯೆ ವಾಸವಾಗಿದ್ದರು.ಈ ಹಿಂದೆ ಕೊಲೆಯಾದ ಹೈದರ್ ಅಲಿ ಆಪ್ತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಆಗ ಆರೋಪಿಗಳಿಗೆ ಹೈದರ್ ಅಲಿ ಬೆದರಿಕೆ ಹಾಕಿದ್ದ. ಆದ್ದರಿಂದ ಆರೋಪಿಗಳಿಗೆ ಹೈದರ್ ಮೇಲೆ ವೈಷ್ಯಮ್ಯ ಇತ್ತು. ಈ ವಿಚಾರ ತಿಳಿದಿದ್ದ ಪ್ರಕರಣದ ಪ್ರಮುಖ ಆರೋಪಿ ನಯಾಜ್ ಪಾಷಾ ಆರೋಪಿಗಳನ್ನು ಬಳಸಿಕೊಂಡು ಹೈದರ್ ಅಲಿ ಹತ್ಯೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆಂದು ತಿಳಿದು ಬಂದಿದೆ.
ನಾಜ್ ಮತ್ತು ಹೈದರ್ ಅಲಿ ದಶಕಗಳಿಂದ ಒಬ್ಬರ ಮೇಲೆ ಒಬ್ಬರು ಮಚ್ಚು ಮಸೆಯುತ್ತಿದ್ದರು. ಮೃತ ಹೈದರ್, ನಾಜ್‌ನನ್ನ ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾನೆಂಬ ವಿಚಾರ ತಿಳಿದ ಆರೋಪಿ ನಾಜ್, ಹೈದರ್‌ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ.
ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ಶಿವಮೊಗ್ಗದ ಪಾತಕ ಜಗತ್ತು ಸಾಕಷ್ಟು ವಿಸ್ತಾರಗೊಂಡಿದೆ.ರಾಜ್ಯದಲ್ಲಿ ನೆಡೆದ ಕೆಲವು ಭೀಕರ ಹತ್ಯೆಗಳಲ್ಲಿ ಶಿವಮೊಗ್ಗದ ನಟೋರಿಯಸ್ ರೌಡಿಗಳು ತಮ್ಮನ್ನು ಗುರುತಿಸಿಕೊಂಡು ಮಲೆನಾಡ ತವರು ಶಿವಮೊಗ್ಗ ನಗರವನ್ನು ರೌಡಿಗಳ ಕೊಂಪೆಮಾಡಲು ಮುಂದಾದಂತೆ ಕಾಣುತ್ತದೆ.ಪೋಲಿಸ್ ಇಲಾಖೆ ಈ ನಟೋರಿಯಸ್ ರೌಡಿಶೀಟರ್ ಗಳ ನಡುಮುರಿಯದೆ ಹೋದರೆ ರಾಜ್ಯದಲ್ಲಿ ನೆಡೆಯುವ ಇನ್ನಷ್ಟು ರಕ್ತಪಾತದಲ್ಲಿ ಶಿವಮೊಗ್ಗ ರೌಡಿಗಳ ಪಾತ್ರ ಇರುವುದರಲ್ಲಿ ಅನುಮಾನವಿಲ್ಲ..!ಶಿವಮೊಗ್ಗ ನಗರದಲ್ಲಿ ಒಂದಷ್ಟು ನಟೋರಿಯಸ್ ರೌಡಿಗಳು ರಿವೆಂಜಿಗೆ ಬಿದ್ದಿದ್ದಾರೆ.ಒಬ್ಬರ ತಲೆ ಒಬ್ಬರು ಉರುಳಿಸಲು ಹಂತಕರ ಪಡೆ ಸ್ಕೆಚ್ ಹಾಕಿ ಕುಳಿತಂತೆ ಕಾಣುತಿದೆ.! ಇಲ್ಲಿ ಯಾರು ಯಾರ ತಲೆ ಉರುಳಿಸುತ್ತಾರೆ ಎನ್ನುವುದು ಮಾತ್ರ ನಿಗೂಢವಾಗಿದೆ..!!


