Headlines

ಶಿವಮೊಗ್ಗ ಜಿಲ್ಲಾ ಅಬಕಾರಿ ಕಛೇರಿಯಲ್ಲಿ ಮಹಾ ಭ್ರಷ್ಟ ಪ್ರಸನ್ನ.!ವರ್ಗಾವಣೆ ಅದರು ಮತ್ತದೆ ಸ್ಥಳದಲ್ಲಿ ಠಿಕಾಣಿ.!ಮೊದಲೇ ಶನಿ ಇದ್ದು ಹೊದ ಮನೆಗೆ ಮತ್ತೆ ಶನಿ‌ ಹೊಕ್ಕಂತಾಯಿತು..!

ಅಶ್ವಸೂರ್ಯ/ಶಿವಮೊಗ್ಗ : ಈತ ಪ್ರಸನ್ನ… ಹಾಲಿ ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆಯಲ್ಲಿ ಕಛೇರಿ ಅಧೀಕ್ಷನಾಗಿ (Office Superintendent) ಕರ್ತವ್ಯ ನಿರ್ವಹಿಸುತ್ತಿದ್ದು.ಸಧ್ಯಕ್ಕೆ ಈತನೇ ಅಬಕಾರಿ ಡಿಸಿ ಲೇವಲ್ ಗೆ ಬಲಿತು ಕೊಂಡಿದ್ದಾನೆ.? ಈತ ಮೂಲತ ಭದ್ರಾವತಿಯವನಂತೆ.? ಈತ ಕಳೆದ ಹದಿನೈದು ವರ್ಷದಿಂದ ಅಬಕಾರಿ ಇಲಾಖೆಯಲ್ಲಿ ಜಬಡಿ ನುಂಗುತ್ತಿದ್ದಾನೆಂದು ಅಬಕಾರಿ ಇಲಾಖೆಯ ಕಛೇರಿಯ ಗೊಡೆಗಳೆ ಸಾರಿ ಸಾರಿ ಹೇಳುತ್ತಿವೆ.!ಮೊದಲು ಗುಮಾಸ್ತನಾಗಿ ಅಬಕಾರಿ ಇಲಾಖೆಗೆ ಎಡತಾದವನು ಅದ್ಯಾವ ಮೂಲದಿಂದ ಬಡ್ತಿ ಪಡೆದು ಕಛೇರಿ ಅಧೀಕ್ಷಕನಾದನೋ ಅಲ್ಲಿಗೆ ಅಬಕಾರಿ‌ ಇಲಾಖೆಯ ಹಣದ ಹಸಿವು ಹೈ ಲೇವಲ್ ಗೆ ರೀಚಾಗಿ ಹೊಯಿತು.! ಈ ಹಿಂದೆ ಇದ್ದ ಅಬಕಾರಿ ಡಿಸಿ ಒಳ್ಳೆಯ ವ್ಯಕ್ತಿ ಕ್ಯಾಪ್ಟನ್ ಅಜೀತ್ ಕುಮಾರ್ ಕಛೇರಿಯಲ್ಲಿ ಸುಮ್ಮನೆ ಕುಳಿತು ಅಸ್ತ್ರಗಳನ್ನೆಲ್ಲ ಇವನಿಗೆ ಯಾವಾಗ ಕೊಟ್ಟರೋ ಅಂದೆ ಅಬಕಾರಿ ಇಲಾಖೆಯಲ್ಲಿ ಹಣದ ದಾಹ ತೀರದಂತಾಯಿತು. ಪ್ರಸನ್ನ ಕೂಡ ಎಲ್ಲಾ ವಿಭಾಗದಲ್ಲೂ ಮೂಗು ತೂರಿಸಿ ಹಣ ಕಮಾಯಿಸಲು ಮುಂದಾದ.! ದಿನದಿಂದ ದಿನಕ್ಕೆ ಹಣದದಾಹದಲ್ಲಿ ಅಬಕಾರಿ ಇಲಾಖೆಯ ನಿಯಮಗಳನ್ನೆ ಗಾಳಿಗೆ ತೂರಿ ಕಛೇರಿಯಲ್ಲಿ ಕುಳಿತೆ ಸಾಕಷ್ಟು ಅದ್ವಾನ ಮಾಡತೋಡಗಿದ.ಹೊಸನಗರದಲ್ಲಿ ಒಂದು CL-7 ಬಾರ್ಗೆ ಪರವಾನಿಗೆ ನೀಡಿದ್ದಾರೆ ಮೊದಲು ಇದೇ CL-7 ಬಾರ್‌ಗೆ ಪರವಾನಿಗೆ ಕೇಳಿದಾಗ ಕೊಡಲು ಸಾಧ್ಯವಿಲ್ಲ ಎಂದು ಹಿಂಬರ ನೀಡಿದ್ದರಂತೆ.? ಆದರೆ ಯಾವಾಗ ಅಬಕಾರಿ ಇಲಾಖೆಯ ಹೆಂಡದ ಘಮಲಿನ ಜೋತೆಗೆ ಹೊಸನಗರ CL-7 ಬಾರ್‌ನ ಪರವಾನಿಗೆ ಸಂಬಂಧಿಸಿದಂತೆ ಗರಿ ಗರಿ‌ ನೋಟಿನ ಘಮಲು ಮುಗಿಗೆ ಬಡಿಯುತ್ತಿದ್ದಂತೆ ನಿಯಮಗಳನ್ನು ಗಾಳಿಗೆ ತೂರಿ ಹೊಸನಗರ CL-7 ಬಾರ್ಗೆ ಪರವಾನಿಗೆ ಸಿಕ್ಕೆ ಬಿಟ್ಟಿತ್ತು.! ಬಾರಿನ ಮಾಲಿಕರಿಂದ ಪ್ರಸಾದ ಸ್ವೀಕರಿಸಿದ ಪ್ರಸನ್ನ ಪ್ರಸನ್ನನಾಗಿ ಲೈಸೆನ್ಸ್ ( ಪರವಾನಿಗೆ) ಕೊಡಿಸಿಯೆ ಬಿಟ್ಟಿದ್ದ.!ತನ್ನ ಕೈಯಾರ ಕೊಟ್ಟಿದ್ದ ಹಿಂಬರಕ್ಕೆ ಎಳ್ಳು ನೀರು ಬಿಟ್ಟಿದ್ದನಂತೆ.!?

ಇತ ತನ್ನ ಕರ್ತವ್ಯದ ಹಾದಿಯಲ್ಲಿ ಸಾಕಷ್ಟು ರಂಕುಗಳನ್ನು ಮಾಡಿದ್ದಾನೆ.!ತೀರ್ಥಹಳ್ಳಿ ನಗರ ಮತ್ತು ಆಗುಂಬೆ ರಸ್ತೆಯ CL-7 ಬಾರ್‌,ಹೊನಸಗದ್ದೆ MSIL,ಬೆಜ್ಜವಳ್ಳಿ‌, ಹೊದಲಗಳಲ್ಲಿ ಪರವಾನಿಗೆ ನೀಡಲು ನಿಯಮಗಳನ್ನೆ ಗಾಳಿಗೆ ತೂರಿದ್ದಾರೆ ಅದರಲ್ಲೂ ಶಿವಮೊಗ್ಗ. ನಗರದ ಸಾಗರ ರಸ್ತೆಯ CL-7 ಬ್ಲೂಮೂನ್ ಬಾರ್ ಕಥೆ ಏನು.? ಬಾರ್‌ನ ಬಿಲ್ಡಿಂಗ್ ಗೆ ತಳಪಾಯವೆ ಇಲ್ಲ.!! ಪಾರ್ಕಿಂಗ್ ಮಾತು ಹಾಗಿರಲಿ ಯಾವ ರೀತಿಯಲ್ಲಿ ಈ ಬಿಲ್ಡಿಂಗ್ ಅಬಕಾರಿ ಇಲಾಖೆಯ ನಿಯಮಗಳಿಗೆ ಒಳ ಪಟ್ಟಿದೆ ಎಂದು ಮಾನ್ಯ ಅಬಕಾರಿ ಡಿಸಿ ಮತ್ತು ಕಛೇರಿ ಅಧೀಕ್ಷಕ ಪ್ರಸನ್ನ ಅವರೆ ಹೇಳ ಬೇಕಿದೆ.! ಇವರುಗಳು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿದ ಅದ್ವಾನಗಳು ಲೆಕ್ಕವೆ ಇಲ್ಲಾ.!ಪ್ರಸನ್ನನದು ಯಾವ ಲೇವಲ್ ಅಂದರೆ ಇತ್ತೀಚಿಗೆ ಸುಮಾರು ಒಂದು ವರ್ಷದ ಹಿಂದೆ ಗಾಂಜಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ಅಬಕಾರಿ ಇಲಾಖೆಗೆ ಎಡತಾದಾಗ ಈ ಪ್ರಕರಣವನ್ನು ನಿಭಾಯಿಸ ಬೇಕಾಗಿದ್ದು Excise Superintendent ಅಥವಾ
Excise Deputy Superintendent ಆದರೆ ಇವರನ್ನು ಬಿಟ್ಟು ಕಛೇರಿ ಅಧೀಕ್ಷಕನೆ ನಿಭಾಯಿಸುತ್ತಾನೆ ಎಂದರೆ.! ಇವನು ಯಾರು.? ಪುಗಸ್ಸಟ್ಟೆ ಅಕ್ರಮ ಹಣ ಆವಕಾಶ ಸಿಕ್ಕರೆ ಎಲ್ಲವನ್ನೂ ಮಾಡಿ ಬಿಡಿಸೊತ್ತಾ.? ಕಛೇರಿ ಅಧೀಕ್ಷಕನದು ಇದೆ ಹಾದಿಯಾ.? ದಿನದಿಂದ ದಿನಕ್ಕೆ‌ಇವನ ಹಣದ ದಾಹ ಮಿತಿ ಮೀರಿ ಎಲ್ಲೆಂದರಲ್ಲಿ ಮೂಗು ತೂರಿಸುವ ಕೈಯಾಲಿ ಇರುವ ಈತನ ಹಣದ ದಾಹ ಇನ್ನೂ ತೀರಿಲ್ಲಾ.!

ಭದ್ರಾವತಿ ಅಬಕಾರಿ ಇಲಾಖೆಯಲ್ಲಿ ಗುಮಾಸ್ತನಾಗಿದ್ದ ಪ್ರಸನ್ನ ಯಾವಾಗ ಶಿವಮೊಗ್ಗ ಅಬಕಾರಿ ಕಛೇರಿಗೆ ನಿರೀಕ್ಷಕನಾಗಿ ಬಡ್ತಿ ಪಡೆದು ಲಗ್ಗೆ ಇಟ್ಟ ಕ್ಷಣದಿಂದ ಇಲ್ಲಿಯವರೆಗೂ ಅದಷ್ಟು ಮೆಂದು-ತಿಂದು ದುಂಡಗಾಗಿದ್ದಾನೊ.!? ಇನ್ನೂ ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಹಣದ ಹಾದಿಯಲ್ಲಿ ಹೊರಟಿದ್ದ ಪ್ರಸನ್ನನಿಗೆ ಬ್ರೇಕ್ ಬಿದ್ದಿದೆ. ಇವನನ್ನು ಶಿವಮೊಗ್ಗ ಅಬಕಾರಿ ಇಲಾಖೆಯಿಂದ ಬೆಂಗಳೂರಿನ ಅಬಕಾರಿ ಆಯುಕ್ತರ ಕಛೇರಿಗೆ ವರ್ಗಾಯಿಸಲಾಗಿದೆ.
ತನಗೆ ವರ್ಗಾವಣೆ ಆಗಿದ್ದರು ರೀಲಿವ್ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳದೆ ಮತ್ತದೆ ಜಾಗದಲ್ಲಿ ಯಾವ ಹಿನ್ನಲೆಯಲ್ಲಿ ಕುಳಿತಿದ್ದಾನೆ ಎನ್ನುವುದು ಅರ್ಥವಾಗುತ್ತಿಲ್ಲ.ಮಾತೆತ್ತಿದರೆ ಅವರಿಗೆ ಅಷ್ಟು ಕೊಟ್ಟೆ ಇವರಿಗೆ ಇಷ್ಟು ಕೊಟ್ಟೆ.! ಹಣ ಎಷ್ಟೇ ಖರ್ಚಾದರು ಸರಿ ಮತ್ತೆ ಇಲ್ಲಿಗೆ ವಾಪಸ್ ವರ್ಗಾವಣೆ ಮಾಡಿಸಿಕೋಳ್ತಿನಿ ಅಂತ ಬಡಾಯಿಸುವ ಇವನನ್ನು ಶಿವಮೊಗ್ಗ ಜಿಲ್ಲಾ ಅಬಕಾರಿ ಡಿಸಿ ಯವರು ಈ ಕೂಡಲೇ ಇವನನ್ನು ರೀಲಿವ್ ಮಾಡಿ ಬೆಂಗಳೂರಿಗೆ ಬಿಳ್ಕೋಡಬೇಕಿದೆ.ಇಲ್ಲಾ ಎಂದರೆ ಮೊದಲೇ ಶನಿ ಇದ್ದು ಹೋದ ಮನೆಗೆ ಮತ್ತೆ ಶನಿ ಹೊಕ್ಕಂತಾಗಬಹುದು.?
ಪತ್ರಿಕೆ ಸಾಕಷ್ಟು ದಾಖಲಾತಿಯನ್ನು ಕಲೆಹಾಕಿದೆ ಇನ್ನಷ್ಟು ದಾಖಲಾತಿ ಕಲೆಹಾಕಲು ಮುಂದಾಗಿದೆ.ಇವನು ಅಬಕಾರಿ ಇಲಾಖೆಯ ನಿಯಮಗಳನ್ನು ಪಾಲಿಸದೆ ಮಾಡಿದ ಅದ್ವಾನಗಳ ಸಂಪೂರ್ಣ ಮಹಾ ವರದಿಯನ್ನು ಭಾಗ-2 ರ ಮುಖಾಂತರ ಸದ್ಯದಲ್ಲಿಯೇ ನಿಮ್ಮ ಮುಂದಿಡಲಿದ್ದೇವೆ.ಇನ್ನೂ ಬ್ಲೂಮೂನ್ ಮಹೇಶನ ಕಥೆ ಏನು ನಿರೀಕ್ಷಿಸಿ…?ಅಬಕಾರಿ ಇಲಾಖೆಯಲ್ಲಿ ಒಳ್ಳೆಯ ಸಂಭಳವಿದ್ದು ಇಲಾಖೆಯ ವಿವಿಧ ಸೌಲಭ್ಯಗಳನ್ನು ಪಡೆದಿರು ಕಛೇರಿ ಅಧೀಕ್ಷಕ ಪ್ರಸನ್ನ ಇಲಾಖೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಲು ಇಷ್ಟು ಸಾಕಾಗಿತ್ತು.ಆದರೆ ತೃಪ್ತಿ ಎಂಬ ಪದದ ಪರಿಚಯವೇ ಇಲ್ಲದ ಈ ಮಹಾ ಭ್ರಷ್ಟ ಶಿವಮೊಗ್ಗ ಜಿಲ್ಲಾ ಅಬಕಾರಿ ಕಛೇರಿಯನ್ನೆ ಅಮದನಿಯ ಅಡ್ಡೆ ಮಾಡಿಕೊಂಡಿದ್ದಾನೆ.
ಇಷ್ಟಕ್ಕೂ ಈ ಲಂಚಬಾಕನನ್ನು ದೂರದೂರಿಗೆ ವರ್ಗಾಯಿಸಿದರೂ ರೀಲಿವ್ ಮಾಡಿಕೊಂಡು ಹೋಗದೆ ಮತ್ತದೆ ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆತೂರಿ ಮಾಡಬಾರದ್ದನ್ನು ಮಾಡಿದರೆ ವರ್ಗಾವಣೆ ಆದರೂ ರೀಲಿವ್ ಮಾಡದೆ ಇಲ್ಲಿ ಇಟ್ಟುಕೊಂಡ ತಪ್ಪಿಗೆ ಶಿವಮೊಗ್ಗ ಜಿಲ್ಲಾ ಅಬಕಾರಿ ಡಿಸಿ ಅವರೆ ಹೊಣೆಯಾಗುತ್ತಾರೆ.ಇಲ್ಲ ಇವನನ್ನು ನಂಬಿ ಇಲ್ಲೆ ಕೂರಿಸಿಕೊಂಡರೆ ಮಾಡದ ತಪ್ಪಿಗೆ ಒಂದಷ್ಟು ದಿನ ನೀವೆ ಮನೆಗೆ ಹೊಗಬವುದಾದರೆ ಅದರಂತ ದುರಂತ ಮತ್ತೊಂದಿಲ್ಲ…ಇನ್ನೂ ಕಛೇರಿ ಅಧೀಕ್ಷಕ ಪ್ರಸನ್ನನ ಬಗ್ಗೆ ಸಾಕಷ್ಟು ಬರೆಯುವುದಿದೆ.ಸಂಕ್ಷಿಪ್ತ ವರದಿಗಾಗಿ ನಿರೀಕ್ಷಿಸಿ ಭಾಗ-2 ರಲ್ಲಿ….ಶಿವಮೊಗ್ಗ ಅಬಕಾರಿ ಇಲಾಖೆಯಲ್ಲಿ ಪ್ರಸನ್ನನ ಕಾರುಬಾರು.!ಕಛೇರಿ ನಿರೀಕ್ಷಕ ಪ್ರಸನ್ನ ನಿರೀಕ್ಷೆಗೂ ಮೀರಿ ಆಸ್ತಿಮಾಡಿ ಬಿಟ್ನಾ.!? ಎಲ್ಲಾ ದಾಖಲೆಗಳೊಂದಿಗೆ ನಿಮ್ಮ ‌ಮುಂದೆ….

ಭಾಗ-2 ರಲ್ಲಿ…..

Leave a Reply

Your email address will not be published. Required fields are marked *

Optimized by Optimole
error: Content is protected !!