ಶಿವರಾತ್ರಿ ಕಾರ್ಯಕ್ರಮ ರಾಜಕೀಯಕ್ಕೆ ಬಳಸಿಕೊಂಡ ಇಶಾ ಫೌಂಡೇಶನ್‌ನ ಗುರು ಜಗ್ಗಿ ವಾಸುದೇವ್ ಬಿ.ಜೆ.ಪಿ ಫಲಾನುಭವಿ : ವೈ.ಬಿ.ಚಂದ್ರಕಾಂತ್
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಕೊಯಮತ್ತೂರಿನ ಇಶಾ ಫೌಂಡೇಷನ್ ವತಿಯಿಂದ ಶಿವರಾತ್ರಿ ಜಾಗರಣೆಯಂದು ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್‌ನ ಗುರು ಜಗ್ಗಿ ವಾಸುದೇವ್ ಅವರು ಕಾಂಗ್ರೇಸ್ ಪಕ್ಷದ ಸರ್ಕಾರದ ಬಗ್ಗೆ ಟೀಕೆ ಮಾಡಿ, ಬಿ.ಜೆ.ಪಿ. ಸರ್ಕಾರವನ್ನು ಹೊಗಳಿರುವುದು ನೋಡಿದರೆ ಬಿ.ಜೆ.ಪಿ. ಯಿಂದ ಗುರು ಜಗ್ಗಿ ವಾಸುದೇವ್ ಅವರು ಬಹುದೊಡ್ಡ ಫಲಾನುಭವಿ ಆದಂತ್ತಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಆರೋಪಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದಾಗಿ ದೇಶದಲ್ಲಿ ಯಾವುದೆ ಬಾಂಬ್ ಬ್ಲಾಸ್ಟ್‌ನಂತಹ ದುಷ್ಕೃತ್ಯಗಳು ನಡೆದಿರುವುದಿಲ್ಲ. ಅದೆ ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ನಡೆದಿವೆ ಎಂದು ಗುರು ಜಗ್ಗಿ ವಾಸುದೇವ್ ಅವರು ಬಿ.ಜೆ.ಪಿ. ವಕ್ತಾರರಂತೆ ಹೇಳುವ ಮೂಲಕ ಇಶಾ ಫೌಂಡೇಷನ್‌ನಲ್ಲಿ ಶಿವರಾತ್ರಿಯಂದು ನಡೆಸಿದ ಕಾರ್ಯಕ್ರಮ ದೇವತಾ ಕಾರ್ಯಕ್ರಮವಾಗದೆ ಅದೊಂದು ರಾಜಕಿಯ ಪಕ್ಷಕ್ಕೆ ಮತ್ತು ರಾಜಕೀಯ ಪಕ್ಷದ ನಾಯಕನ ಪರವಾಗಿ ಬಹುಪರಾಕ್ ಹೇಳುವ ಕಾರ್ಯಕ್ರಮದಂತೆ ನಡೆಸಲಾಗಿದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಎದುರೇಟು ನೀಡಿದ್ದಾರೆ.
ಈಶಾ ಫೌಂಡೇಷನ್‌ನ ಗುರು ಜಗ್ಗಿ ವಾಸುದೇವ್ ಅವರು ಈ ಹಿಂದೆಯೂ ಕಾಂಗ್ರೇಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಬಗ್ಗೆಯೂ ಕೀಳಾಗಿ ಮಾತನಾಡಿದ್ದರು. ಇದೆ ಗುರು ಜಗ್ಗಿ ವಾಸುದೇವ್ ಅವರ ಮೇಲೆ ಯಾವೆಲ್ಲಾ ಆರೋಪಗಳು ಇವೆ ಎನ್ನುವುದು ಇಡಿ ಪ್ರಪಂಚಕ್ಕೆ ತಿಳಿದಿದೆ. ಯಾರೇ ಆಗಲಿ ತಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಲಾಗದವರು ಇತರೆ ಜನರಿಗೆ ಹೇಗೆ ನ್ಯಾಯ ಕೊಡಿಸಲು ಸಾಧ್ಯ. ಶಿವರಾತ್ರಿ ಜಾಗರಣೆ ನೆಪದಲ್ಲಿ ಸಾವಿರಾರು ಭಕ್ತರನ್ನು ಆಹ್ವಾನಿಸಿ. ಅಂತಹ ಕಾರ್ಯಕ್ರಮದಲ್ಲಿ ಜಾಗರಣೆ ಕಾರ್ಯಕ್ರಮ ನಡೆಸುವ ಬದಲಿಗೆ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿದವರ ಪರವಾಗಿ ಬಹುಪರಾಕ್ ಹೇಳುವ ಕಾರ್ಯಕ್ರಮನ್ನು ನಡೆಸಿರುವುದನ್ನು ಏನೆಂದು ಕರೆಯಬೇಕೆಂದು ಕಾಂಗ್ರೆಸ್ ಪಕ್ಷದ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಟೀಕಿಸಿದ್ದಾರೆ.
ದೇಶವನ್ನು 65 ವರ್ಷಗಳ ಕಾಲ ದಕ್ಷತೆಯಿಂದ ಮುನ್ನೆಡೆಸಿದ ಕಾಂಗ್ರೇಸ್ ಪಕ್ಷವನ್ನು ಮತ್ತು ಪಕ್ಷದ ಆಡಳಿತವನ್ನು ಟೀಕಿಸುವ ಮೊದಲು ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ದೇಶದ ಸಂಸತ್ತಿಗೆ ನುಗ್ಗಿದಂತಹ ದಾಳಿಕೋರರು ಗುರು ಜಗ್ಗಿ ವಾಸುದೇವ್ ಅವರ ಸಂಬಂಧಿಕರೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲೇಥೋರದಲ್ಲಿ ಕ್ವಿಂಟಾಲ್ ಗಟ್ಟಲೆ ಸ್ಪೋಟಕವನ್ನು ಸ್ಪೋಟಿಸಿ ಭಾರತದ 40 ಮಂದಿ ಹೆಮ್ಮೆಯ ಸೈನಿಕರ ಮಾರಣ ಹೋಮ ನಡೆಯಿತಲ್ಲ ಇದಕ್ಕೆ ಯಾರು ಹೊಣೆ, ಈ ಘಟನೆ ನಡೆದು 5 ವರ್ಷಗಳೆ ಕಳೆದರೂ ದುಷ್ಕೃತ್ಯ ನಡೆಸಿದಂತಹ ಒಬ್ಬನೆ ಒಬ್ಬ ಆರೋಪಿಯನ್ನು ಬಂಧಿಸದಿರುವುದಕ್ಕೆ ಕಾರಣವೇನೆಂದು ಕೇಂದ್ರದ ಬಿ.ಜೆ.ಪಿ. ಸರ್ಕಾರ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಪ್ರಶ್ನಿಸಿ ನೋಡಿ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಇಶಾ ಪೌಂಡೇಷನ್‌ನ ಗುರು ಜಗ್ಗಿ ವಾಸುದೇವ್ ಅವರಿಗೆ ಸವಾಲ್ ಹಾಕಿದ್ದಾರೆ.
- ವೈ.ಬಿ. ಚಂದ್ರಕಾಂತ್ ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರರು