ಪುಣೆ ಅತ್ಯಾಚಾರ ಪ್ರಕರಣ: ಆರೋಪಿ ಬಂಧನಕ್ಕಾಗಿ ಪೊಲೀಸರ 75 ಗಂಟೆಗಳ ರೋಚಕ ಕಾರ್ಯಚರಣೆ ಹೇಗಿತ್ತು.?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಪುಣೆ : ಪುಣೆಯ ಸ್ವರ್ಗೇಟ್ ಡಿಪೋದಲ್ಲಿ ನಿಂತಿದ್ದ ಸರ್ಕಾರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪುಣೆ ಅಪರಾಧ ವಿಭಾಗದ ಪೊಲೀಸರು ಕ್ಷಿಪ್ರ ಕಾರ್ಯಚರಣೆಯೊಂದಿಗೆ ಶುಕ್ರವಾರ ಬಂಧಿಸಿದ್ದಾರೆ. ಅತ್ಯಚಾರ ಪ್ರಕರಣ ನಡೆದು 75 ಗಂಟೆಗಳ ಒಳಗೆ ಆರೋಪಿಯ ಬಂಧನವಾಗಿದ್ದು ಪೊಲೀಸರ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ. ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದ್ದು ಆರೋಪಿಯ ತೀವ್ರ ವಿಚಾರಣೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಅತ್ಯಚಾರಿ ಆರೋಪಿಯನ್ನು ಬಂಧಿಸಿರುವ ಹಿಂದೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ರೋಚಕ ಕ್ಷಣಗಳು ಹೇಗಿತ್ತು.
ಅತ್ಯಾಚಾರಿ ಆರೋಪಿಗಾಗಿ ಕಬ್ಬಿನ ಗದ್ದೆಯಲ್ಲಿ ದ್ರೋಣ್ ಮುಖಾಂತರ ಶೋಧ ಕಾರ್ಯ ಮಾಡಿದ ಪೊಲೀಸರು
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪುಣೆ ಪೊಲೀಸರ ತಂಡ ಆರೋಪಿಯನ್ನು ಪತ್ತೆ ಹಚ್ಚಲು ಎಲ್ಲಾ ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸಾಕಷ್ಟು ಪೊಲೀಸ್ ತಂಡಗಳನ್ನು ನಿಯೋಜಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿ ತನ್ನ ಗ್ರಾಮಕ್ಕೆ ತೆರಳಿದ್ದಾನೆ ಎಂಬುದನ್ನು ಪತ್ತೆ ಮಾಡಿತ್ತು. ಪುಣೆ ಜಿಲ್ಲೆ ಮತ್ತು ಅದರಾಚೆಗೆ ಡ್ರೋನ್ಗಳು ಮತ್ತು 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ 13 ಪೊಲೀಸ್ ತಂಡ ಆರೋಪಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆಗೆ ಇಳಿದಿದ್ದವು.!ಗುರುವಾರ ರಾತ್ರಿ 10:30 ಕ್ಕೆ ಆರೋಪಿ ದತ್ತಾತ್ರಯ ರಾಮದಾಸ್ ಗಡೆ ತನ್ನ ಸಂಬಂಧಿಕರ ಮನೆಯಲ್ಲಿ ಇರುವುದನ್ನು ಖಾತ್ರಿ ಮಾಡಿಕೊಂಡ ಪೊಲೀಸರು ತಕ್ಷಣವೇ ಗ್ರಾಮಕ್ಕೆ ತೆರಳಿದ್ದಾರೆ.
ಆರೋಪಿ ತನ್ನ ಮನೆ ತಲುಪುವ ಮೊದಲು ಅಂಗಡಿಯೊಂದರಲ್ಲಿ ನೀರಿನ ಬಾಟೆಲ್ ಒಂದನ್ನು ಖರೀದಿ ಮಾಡಿದ್ದ, ನಂತರ ತನ್ನ ಶರ್ಟ್ ಬದಲಾಯಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.ಪೊಲೀಸರು ಸ್ನೀಫರ್ ನಾಯಿಗಳನ್ನು ಆರೋಪಿಯ ಪತ್ತೆಗಾಗಿ ಬಳಸಿಕೊಂಡಿದ್ದರು.ದ್ತಾತ್ರಯ ರಾಮದಾಸ್ ಗಡೆ ಪೊಲೀಸರು ಬಂದಿರಯವ ಮಾಹಿತಿ ತಿಳಿದು ಎಸ್ಕೇಪ್ ಆಗಲು ಹೊಲವೊಂದರಲ್ಲಿ ಅಡಗಿ ಕುಳಿತಿದ್ದ. ಆತನ ಪತ್ತೆಗಾಗಿ ಡ್ರೋನ್ ಹಾರಿಸಲಾಗಿತ್ತು. ಗ್ರಾಮಸ್ಥರು ಈತ ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿರುವದನ್ನು ಗಮನಿಸಿ. ತಕ್ಷಣವೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ನಂತರ ಆತನನ್ನು ಬಂಧಿಸಿ ಪುಣೆಗೆ ಕರೆದೊಯ್ಯಲಾಗಿದೆ.
36 ವರ್ಷದ ದತ್ತಾತ್ರೇಯ ರಾಮದಾಸ್ ಗಡೆ ವಿರುದ್ಧ ಈ ಹಿಂದೆಯೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪುಣೆ ಮತ್ತು ನೆರೆಯ ಅಹಲ್ಯಾನಗರ ಜಿಲ್ಲೆಯಲ್ಲಿ ಕನಿಷ್ಠ ಆರು ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಆರೋಪ. ಇತನ ಮೇಲಿದೆ. ಆರೋಪಿ ರಾಮದಾಸ್ ಗಡೆ ಪ್ರಕರಣ ಒಂದಕ್ಕೆ ಸಂಭಂಧಿಸಿದಂತೆ ಜೈಲಿನಲ್ಲಿದ್ದವನು 2019 ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಈತ ಫೆ. 25ರ ಮುಂಜಾನೆ ಮಹಿಳೆ ಪ್ಲಾಟ್ಫಾರ್ಮ್ನಲ್ಲಿ ಪೈಥಾನ್ಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದ ಸಂಧರ್ಭದಲ್ಲಿ ಒಬ್ಬ ವ್ಯಕ್ತಿ ಮಹಿಳೆಯ ಬಳಿಗೆ ಬಂದು ಸಹೋದರಿ ಎಂದು ಕರೆದು ಬಸ್ ಮತ್ತೊಂದು ಪ್ಲಾಟ್ಫಾರ್ಮ್ಗೆ ಬಂದಿದೆ ಎಂದು ಹೇಳಿದ್ದಾನೆ. ಆಕೆಯನ್ನು ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಶಿವಶಾಹಿ ಎಸಿ ಬಸ್ಸಿನ ಬಳಿಗೆ ಕರೆದೊಯ್ದಿದ್ದಾನೆ.ಅ ಮಹಿಳೆ ನಂತರ ಬಸ್ಸಿನೊಳಗಿನ ದೀಪಗಳು ಉರಿಯದ ಕಾರಣ ಮೊದಲು ಬಸ್ ಹತ್ತಲು ಹಿಂಜರಿದಳು, ಆದರೆ ಆ ವ್ಯಕ್ತಿ ಅದು ಸರಿಯಾದ ಬಸ್ ಎಂದು ಹೇಳಿ ಹತ್ತಿಸಿ ಒಳಗೆ ಹೋಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ. ಅಲ್ಲದೇ ಈ ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾನೆ. ತನ್ನ ಮೇಲಾದ ಅತ್ಯಾಚಾರಕ್ಕೆ ಸಂಭವಿಸಿದಂತೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.