ಮುನ್ನೆಲೆಗೆ ಬಂದ ಕ್ಯಾಸನೂರು ಪಾರಂಪರಿಕ ಅಡಿಕೆ ತಳಿ ರಕ್ಷಿಸಿ.
ಅಶ್ವಸೂರ್ಯ/ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಕಾಡುಗಳಲ್ಲಿ ಹಲವಾರು ಕಾಯಿಲೆಗಳಿಗೆ ಬೇಕಾದ ಅಮೂಲ್ಯ ಗಿಡಮೂಲಿಕೆಗಳು ಆಗಿವೆ ಎಂಬುದು ಎಷ್ಟು ಸತ್ಯವೋ ಇಲ್ಲಿನ ಮೂಲ ನಿವಾಸಿಗಳ ಪಾರಂಪರಿಕ ಬೆಳೆಗಳು ಇಂದಿಗೂ ರೈತರ ಜೀವನಕ್ಕೆ ಆಧಾರವಾಗಿದೆ
ಆದರಲ್ಲಿ ಕ್ಯಾಸನೂರು ಅಡಿಕೆ ತಳಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಮಲೆನಾಡಿನ ಬೇಸಾಯ ಪದ್ಧತಿ, ಇಲ್ಲಿನ ಜನಜೀವನ ಕ್ರಮ ನೋಡಲಷ್ಟೇ ಸೂಜುಗ, ಇಲ್ಲಿ ಬಗರ್ ಹುಕುಂ, ಅರಣ್ಯ, ಕೆಪಿಸಿ, ಅರಣ್ಯ ಒತ್ತುವರಿ ಹೆಸರಿನಲ್ಲಿ ರೈತರ ದಶಕಗಳಿಂದ
ಸಮಸ್ಯೆಗಳ ನಡುವೆ ಜೀವನ ಸಾಗಿಸುತ್ತಿದ್ದ ರೈತರಿಗೆ ಜೀವ ತುಂಬಿದ್ದು “ಅಡಿಕೆ ಬೆಳೆ” ಎನ್ನಬಹುದು. ಅಡಿಕೆ ಎಂಬುದು ಇಲ್ಲಿನ ರೈತರ ಜೀವನಾಡಿಯಾಗಿ ಮಲೆನಾಡಿನಲ್ಲಿ ಇಂದು ವಾಣಿಜ್ಯ ಬೆಳೆಯಾಗಿ ಬಹುತೇಕ ಹದ ಮತ್ತು ಒಣ ಭೂಮಿಯನ್ನು ಅಡಿಕೆ ಬೆಳೆ ಅವರಿಸಿದೆ.
ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಅಡಿಕೆ ಬೆಳೆಯನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಬೆಳೆಯಲಾಯಿತು ಎಂಬುದು ಈಗ ಇತಿಹಾಸ ಹಾಗೂ ಮಲೆನಾಡಿಗೆ ಹೆಗ್ಗಳಿಕೆಗೂ ಕಾರಣವಾಗಿದೆ. ಅಡಿಕೆಗಳಲ್ಲಿ ಹಲವಾರು ರೀತಿಯ ತಳಿಗಳು ಇದ್ದರೂ ಸಹ ಮೊದಲ ಅಡಿಕೆ ಬೆಳೆಯಿಂದ ಇಂದಿಗೂ ಸಹ ತನ್ನ ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟದ ಗುಣದೊಂದಿಗೆ ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿರುವ ತಳಿ ಎಂದರೇ ಅದು “ಕ್ಯಾಸನೂರು ತಳಿ” ಯಾಗಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು ಇಂದು ಅಡಿಕೆ ಪ್ರಮುಖ ವಾಣಿಜ್ಯ ಬೆಳೆ ಮತ್ತು ರೈತರ ಆದಾಯದ ಪ್ರಮುಖ ಮೂಲವಾಗಿ ಅಡಿಕೆ ಬೆಳೆ ರೂಪಾಂತರಗೊಂಡಿದೆ.ಆದರೆ ಇಂದಿಗೂ ಸಹ ಅಡಿಕೆ ಬೆಳೆಗಳ ತಳಿಗಳ ಬಗ್ಗೆ ಸರ್ಕಾರ ಯಾವುದೇ ಸಂಶೋಧನೆ ಕೈಗೊಳ್ಳದೇ ಇರುವುದು ಬೇಸರ ತಂದಿದೆ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸಂರಕ್ಷಣೆ ಮಾಡಲಿ .ಕೇಂದ್ರ ಸರ್ಕಾರ ಅಡಿಕೆ ಸಂಶೋಧನಾ ಕೇಂದ್ರವನ್ನು ಕ್ಯಾಸನೂರು ಗ್ರಾಮದಲ್ಲಿಯೇ ಸ್ಥಾಪಿಸಬೇಕು ಎಂದು ಕ್ಯಾಸನೂರು ಅಡಿಕೆ ಸಸಿಗಳ ಬೆಳೆಗಾರ ಮಂಜಪ್ಪ ಬೇಸರ ವ್ಯಕ್ತಪಡಿಸುತ್ತಾರೆ.
ಏನಿದು ಕ್ಸಾಸನೂರು ಅಡಿಕೆ ತಳಿ:
ರೈತರು ಯಾವುದೇ ಅಡಿಕೆ ತಳಿಗಳು ಇದ್ದರೂ ಇಂದಿಗೂ ಸಹ “ಕ್ಯಾಸನೂರು ತಳಿ” ಅಡಿಕೆ ಸಸಿಗೆ ಬಹು ಬೇಡಿಕೆ ಇದೆ. ಮಲೆನಾಡಿನ ಸುತ್ತಮುತ್ತಲೂ ಅಷ್ಟೇ ಅಲ್ಲದೇ ಬಯಲುಸೀಮೆಯಲ್ಲೂ ಸಹ ಈ ತಳಿ ತನ್ನ ವಿಸ್ತಾರ ಹೊಂದಿದೆ. ವಾಸ್ತವವಾಗಿ ಆಧುನಿಕ ಉದ್ಯಮ ಯುಗದಲ್ಲಿಯೂ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಿ ಇಂದಿಗೂ ಸಸಿ ಬೆಳೆದು ಸ್ಪರ್ಧಾತ್ಮಕ ದರದಲ್ಲಿ ನೀಡುತ್ತಿರುವ ಇಲ್ಲಿನ ಸ್ಥಳೀಯರ ಕಾರ್ಯ ಮೆಚ್ಚುವಂತದ್ದು ಎನ್ನಬಹುದು.
ಕ್ಯಾಸನೂರು ಅಡಿಕೆ ತಳಿ ಸಂರಕ್ಷಣೆಗೆ ಸರ್ಕಾರ ಅನುದಾನ ಮೀಸಲಿಡಬೇಕು. ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ವಿಶೇಷ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು. ಕ್ಯಾಸನೂರು ಗ್ರಾಮವನ್ನು ದೇಸಿ ಅಡಿಕೆ ಸಂರಕ್ಷಣಾ ತಾಣ ಎಂದು ಘೋಷಣೆ ಮಾಡಿ ಸಾವಯವ ಕೃಷಿಗೆ ಒತ್ತು ನೀಡಿ ಕ್ಯಾಸನೂರು ತಳಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
ವಿಕಾಸ್ ಕ್ಯಾಸನೂರು
ಪಾರಂಪರಿಕ ಅಡಿಕೆ ತಳಿ ಸಂರಕ್ಷಕರು.