Headlines

ಪೆಬ್ರವರಿ18ಕ್ಕೆ ಹಸೆಮಣೆ ಏರಬೇಕಿದ್ದ ಯುವತಿ ಜನವರಿ18ಕ್ಕೆ ಮಸಣಕ್ಕೆ.!!

ಪೆಬ್ರವರಿ18ಕ್ಕೆ ಹಸೆಮಣೆ ಏರಬೇಕಿದ್ದ ಯುವತಿ ಜನವರಿ18ಕ್ಕೆ ಮಸಣಕ್ಕೆ.!!

news.ashwasurya.in

ಅಶ್ವಸೂರ್ಯ/ಮಂಡ್ಯ : ಫೆಬ್ರವರಿ 18 ರಂದು ಹಸೆಮಣೆ ಏರಬೇಕಿದ್ದ ಹುಡುಗಿ ಕಳೆದ ಶನಿವಾರ 18ನೇ ತಾರೀಖಿನಂದು ಬೆಳಿಗ್ಗೆ ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟು ಮಸಣ ಸೇರಿದ ದುರ್ಘಟನೆ ಶನಿವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ, ಹಲಗೂರು ಸಮೀಪದ ಹೆಚ್. ಬಸಾಪುರ ಗೇಟ್ ಬಳಿ ನೆಡೆದಿದೆ.?
ಮೂಲತಃ ಬಾಳೆ ಹೊನ್ನಿಗ ವಾಸಿ ಕೃಷ್ಣೇಗೌಡರ ಮಗಳಾದ ಬಿ.ಕೆ.ಶರಣ್ಯಗೆ ಇನ್ನೂ 26 ರ ವಯಸ್ಸು ಅದೇನು ಗ್ರಹಚಾರವೋ ಶರಣ್ಯ ಕಾರ್ಯನಿಮಿತವಾಗಿ ಹಲಗೂರಿಗೆ ತಮ್ಮ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಳವಳ್ಳಿ ಕಡೆಯಿಂದ ಅತಿ ವೇಗವಾಗಿ ಬಂದ ಬೈಕು ಡಿಕ್ಕಿ ಹೊಡೆದ ಪರಿಣಾಮ ಮುದ್ದಾದ ಹುಡುಗಿ ಶರಣ್ಯ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

ವಿಧಿ ಆಟವೆ ವಿಚಿತ್ರ ಬರಲಿರುವ ಫೆಬ್ರವರಿ 18ರಂದು ಇವರ ವಿವಾಹ ನಿಶ್ಚಯವಾಗಿತ್ತು ಆಕೆಯ ದುರಾದೃಷ್ಟ ಹಸೆಮಣೆ ಏರಬೇಕಿದ್ದ‌ ಶರಣ್ಯ ಜನವರಿ 18ರಂದು ಮಸಣದೇಡೆ ಹೆಜ್ಜೆ ಹಾಕಿರುವುದು ದುರಂತವೆ ಹೌದು.! ಮನೆಯ ಮುದ್ದಾದ ಮಗಳನ್ನು ಕಳೆದುಕೊಂಡ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿತ್ತು.

ಈ ಸಂಬಂಧವಾಗಿ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಸಬ್ ಇನ್ಸ್ಪೆಕ್ಟರ್ ಬಿ. ಮಹೇಂದ್ರ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!