ಲೋಕಾಯುಕ್ತ ದಾಳಿ: 5 ಬಾರಿ ಸಸ್ಪೆಂಡ್ ಆದ್ರೂ ಬುದ್ಧಿ ಬಾರದ ಪಿಡಿಒ ಶೋಭರಾಣಿ.! ಮತ್ತೆ 20 ಸಾವಿರ ಲಂಚದ ಹಣಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದ ಕಥೆ.!!
ಅಶ್ವಸೂರ್ಯ/ನೆಲಮಂಗಲ:ನೆಲಮಂಗಲ ತಾಲ್ಲೂಕಿನ ಟಿ ಬೇಗೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 20 ಸಾವಿರ ಲಂಚ ಪಡೆಯುವಾಗ ಪಿಡಿಒ, ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಘಟನೆ ನೆಡೆದಿದೆ. ಈಗಾಗಲೇ ಟಿ.ಬೇಗೂರಿನಲ್ಲಿ 3 ಬಾರಿ ಸೇರಿ ಒಟ್ಟು 5 ಬಾರಿ ಅಮಾನತು ಆಗಿ ಈ ಪಿಡಿಒ ವಿರುದ್ಧ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಯುತ್ತಿದ್ದು ಅಮಾನತು ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಮತ್ತೆ ಟಿ.ಬೇಗೂರು ಗ್ರಾಮ ಪಂಚಾಯಿತಿಯಲ್ಲಿಯೇ ಪ್ರತಿಷ್ಠಾಪಿತರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇದೀಗ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.
ಶೋಭರಾಣಿ ಲೋಕಾಯುಕ್ತರ ಬೀಸಿದ ಬಲೆಗೆ ಪಿಡಿಒ ಶೋಭರಾಣಿ ಬಿದ್ದಿದ್ದಾರೆ. ಶುಕ್ರವಾರ ಸಂಜೆ ಜಮೀನಿನ ಖಾತೆ ಸಂಬಂಧ ರಮೇಶ್ ಎಂಬುವವರ ಬಳಿ 20 ಸಾವಿರ ಲಂಚ ಪಡೆಯುವಾಗ ಪಿಡಿಒ ಶೋಭಾರಾಣಿ ನೇರವಾಗಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಮಧ್ಯವರ್ತಿ ಮೂಲಕ ಲಂಚ ಸ್ವೀಕಾರ
ಲಂಚದ ಬೇಡಿಕೆಯನ್ನು ಪಿಡಿಒ ಇಟ್ಟಿದ್ದರು. ಮಧ್ಯವರ್ತಿ ರುದ್ರಪ್ಪ ಪಂಚಾಯಿತಿ ಕಚೇರಿಗೆ ರಮೇಶ್‌ನನ್ನು ಕರೆತಂದು ಲಂಚದ ಹಣ ಪಡೆಯುವಾಗ, ಲೋಕಾಯುಕ್ತರು ಬೆಂಗಳೂರು ಗ್ರಾಮಾಂತರ ಎಸಿ ಪವನ್ ನಲ್ಲೂರು ನೇತೃತ್ವದ ತಂಡ ಕಚೇರಿಗೆ ದಾಳಿ ಮಾಡಿದೆ. ತಕ್ಷಣ ಹಣ ಮತ್ತು ಪಿಡಿಒ ಶೋಭರಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಲೋಕಾಯುಕ್ತ ಬಲೆಗೆ ಬೀಳುತ್ತಿದಂತೆ ಪಿಡಿಒ ಹೈಡ್ರಾಮ ಮಾಡಿದ್ದು, ಅಧಿಕಾರಿಗಳು ಕರೆದುಕೊಂಡು ಹೋಗುವಾಗ ಆರೋಗ್ಯ ಸರಿಯಿಲ್ಲ ಎಂಬ ನಾಟಕವಾಡಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ, ಅವರನ್ನು ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.