ಅಂದು ಮಂತ್ರಿ ಸ್ಥಾನವನ್ನೇ ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ಹುಡುಕಿಕೊಂಡು ಬಂತು ಪ್ರಧಾನಿ ಹುದ್ದೆ.!!
ಅಶ್ವಸೂರ್ಯ/ಶಿವಮೊಗ್ಗ: ಜಗತ್ತಿನ ಅರ್ಥವ್ಯವಸ್ಥೆಯ ಭೂಪಟದಲ್ಲಿ ಭಾರತದ ಭವಿಷ್ಯವನ್ನೇ ಬದಲಿಸಿ ಭದ್ರ ಬುನಾದಿ ಹಾಕಿದ ಮಾಜಿ ಪ್ರಧಾನಿ ಮಾಜಿ ವಿತ್ತ ಸಚಿವರಾದ ಡಾ. ಮನಮೋಹನ್ ಸಿಂಗ್ ಅವರಿಗೆ 1962ರಲ್ಲೇ ಅಂದಿನ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ತಮ್ಮ ಸರ್ಕಾರದಲ್ಲಿ ಹಣಕಾಸು ಮಂತ್ರಿ ಆಗುವಂತೆ ಆಹ್ವಾನಿಸಿದ್ದರು. ಆದರೆ ಮನಮೋಹನ್ ಸಿಂಗ್ ಒಪ್ಪಿರಲಿಲ್ಲ. ಕಡೆಗೆ ಮಂತ್ರಿ ಸ್ಥಾನವನ್ನು ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಮನೆಬಾಗಿಲಿಗೆ ಪ್ರಧಾನಿ ಸ್ಥಾನವೇ ಹುಡುಕಿಕೊಂಡು ಬಂತು.
ಆಗಷ್ಟೇ ಸ್ವಾತಂತ್ರ್ಯ ಪಡೆದಿದ್ದ ಭಾರತಕ್ಕೆ ಭದ್ರ ಬುನಾದಿ ಹಾಕಲು ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿದ್ದವರ ಹುಡುಕಾಟದಲ್ಲಿದ್ದರು. ಆಗ ನೆಹರು ಅವರ ಕಣ್ಣಿಗೆ ಬಿದ್ದವರೇ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಓದಿಕೊಂಡು ಬಂದಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ತಮ್ಮ ಸರ್ಕಾರದಲ್ಲಿ ವಿತ್ತ ಸಚಿವರಾಗುವಂತೆ ಆಹ್ವಾನಿಸಿದರು. ಆದರೆ ಮನಮೋಹನ್ ಸಿಂಗ್ ಒಪ್ಪುವ ಮನಸ್ಸು ಮಾಡಲಿಲ್ಲ.!
ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಡಾ. ಮನಮೋಹನ್ ಸಿಂಗ್ ಇಬ್ಬರೂ ಶ್ರೇಷ್ಠ ನಾಯಕರಾಗಿದ್ದರು. ನೆಹರೂ ಮುಕ್ತವಾಗಿ ಯುವಕ ಡಾ.ಮನಮೋಹನ್ ಸಿಂಗ್ ಅವರನ್ನು ತಮ್ಮ ಸರ್ಕಾರದಲ್ಲಿ ವಿತ್ತ ಸಚಿವರಾಗುವಂತೆ ಆಹ್ವಾನಿಸಿದರು ಆದರೆ ಅಷ್ಟೇ ನಯವಾಗಿ ಮನಮೋಹನ್ ಸಿಂಗ್ ಒಲಿದು ಬಂದ ಮಂತ್ರಿ ಸ್ಥಾನವನ್ನು ನಿರಾಕರಿಸಿದರು. ತನಗೆ ನೆಚ್ಚಿನ ಉಪನ್ಯಾಸಕ ವೃತ್ತಿಯೇ ಹೆಚ್ಚು ತೃಪ್ತಿದಾಯಕ ಎಂದರು. ಅದಕ್ಕಿಂತ ಮಿಗಿಲಾಗಿ ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬರಲಾರೆ ಎಂದು ನೆಹರು ಅವರಿಗೆ ಹೇಳಿದ್ದರು.ನಂತರ ಡಾ. ಮನಮೋಹನ್ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆದರು.
ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾದರು. ಕಡೆಗೆ 2014ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾಗ ಪ್ರಧಾನ ಮಂತ್ರಿ ಸ್ಥಾನವೇ ಇವರನ್ನು ಹರಿಸಿ ಬಂತು. ಸೋನಿಯಾ ಗಾಂಧಿ ಪ್ರಧಾನಿ ಸ್ಥಾನವನ್ನು ತ್ಯಾಗಮಾಡಿದಾಗ ಆ ಮಹತ್ತರವಾದ ಹುದ್ದೆಗೆ ನೀವೇ ಸೂಕ್ತ ಎಂದು ಹೇಳಿದಾಗ ಡಾ. ಮನಮೋಹನ್ ಸಿಂಗ್ ನಿರಾಕರಿಸಲು ಸಾಧ್ಯವಾಗಿರಲಿಲ್ಲ. ಅನಂತರ 10 ವರ್ಷ ಪ್ರಧಾನಿಯಾಗಿ ಹಲವು ಮಹತ್ವದ ಕಾನೂನುಗಳನ್ನು ತಂದು ಆಧುನಿಕ ಭಾರತಕ್ಕೂ ಮುನ್ನೋಟವನ್ನು ಕಟ್ಟಿಕೊಟ್ಟವರು ಡಾ.ಮನಮೋಹನ್ ಸಿಂಗ್ ಅವರು…