ಶಿವಮೊಗ್ಗದ ವಾದಿ ಏ ಹುದಾ ದಲ್ಲಿ ಹತ್ಯೆಯಾದ ಹೆಣ್ಣಿನ ಜೋತೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ “ಕೂಲಿಂಗ್ ಗ್ಲಾಸ್” ಗಿರಾಕಿ ಯಾರು.?
ಅಶ್ವಸೂರ್ಯ/ಶಿವಮೊಗ್ಗ: ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ ವಾದಿ ಏ ಹುದಾ ನಲ್ಲಿ ಆನಂದಪುರ ಮೂಲದ ಮುಸ್ಲಿಂ ಯುವತಿ ರುಕ್ಸನಾಳನ್ನು ಆಕೆಯ ಗಂಡ ಯೂಸುಫ್ ಹರಿತವಾದ ಆಯುಧದಿಂದ ಮನಬಂದಂತೆ ಹಲ್ಲೆಮಾಡಿ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿರುವ ಸುದ್ದಿ ತಮಗೆಲ್ಲ ತಿಳಿದದ್ದೆ.ಈ ಹತ್ಯೆಗೆ ಕಾರಣ ತಿಳಿದಾಗ ಈ ಪ್ರಕರಣದಲ್ಲಿ ಮೃತ ಹೆಣ್ಣು ಅನೈತಿಕ ಸಂಬಂಧ ಹೊಂದಿದ್ದಳೆಂಬ ಅನುಮಾನದ ಹಿನ್ನಲೆಯಲ್ಲಿ ವಿಷಯ ತಿಳಿದ ಆಕೆಯ ಗಂಡ ಈ ಹತ್ಯೆಯನ್ನು ಮಾಡಿ ಮುಗಿಸಿದ್ದ ಎಂದುತಿಳಿಬಂದಿತ್ತು.! ಆಕೆ ಸಾಗರ ಮೂಲದ ವ್ಯಕ್ತಿ ಯೊಬ್ಬನೊಂದಿಗೆ ಸಂಬಂಧ ಹೊದ್ದಿದ್ದಳಂತೆ.!? ಆತ ಕಾಕಿ ತೊಟ್ಟ ಮಹಾನ್ ಘಾತುಕ ವ್ಯಕ್ತಿ ಎಂದು ತಿಳಿದು ಬಂದಿದೆ ಹಾಗದಾರೆ ಅವನು ಬಸ್ ಚಾಲಕನಾ.? ಬಸ್ ಕಂಡಕ್ಟರ್ ಇರಬಹುದಾ..? ಅಥವಾ ಪೊಲೀಸ್ ಇಲಾಖೆಯವಾನ..? ಹಾಗಾದರೆ ಪೋಸ್ಟ್ ಮನ್ ಇರಬಹುದಾ.? ಯಾರು.? ಕಾಕೀ ತೊಟ್ಟ ಮಹಾನ್ ಕಾಮುಕನಾರು..? ಇತನಿಗೆ ಸಂಸಾರವಿದ್ದು ಇನ್ನೊಂದು ಸುಂದರವಾದ ಸಂಸಾರವನ್ನು ಹಾಡುಗೇಡವಲು ಕಾರಣವೇನು.? ಈ ಹಿಂದೆ ಕೂಡ ಎರಡು ಮಕ್ಕಳಿರುವ ವಿಚ್ಚೇದಿತ ಹೆಂಗಸಿನ ಜೋತೆಗೆ ಎರಡನೇ ಇನಿಂಗ್ಸ್ ಆರಂಭಿಸಲು ಮುಂದಾಗಿದ್ದ.ಅದು ಹೇಗೊ ಆತನ ಹೆಂಡತಿಗೆ ತಿಳಿದು ಹಿಗ್ಗಾ ಮುಗ್ಗಾ ಬಡಿದಿದ್ದರು.ಇತ್ತೀಚೆಗೆ ಕಣ್ಣಿಗೆ ಕಾಣುವಂತೆ ಮೂರನೇ ಇನಿಂಗ್ಸ್ ಆರಂಭಿಸಲು ಹೋಗಿ ಆಕೆಯ ಸಾವಿಗೆ ಕಾರಣ ಕರ್ತಾನಾಗಿದ್ದಾನೆ ಅಮಾಯಕ ಯುವತಿ ಒಬ್ಬಳು ಇತನ ನೀಚತನಕ್ಕೆ ಬಲಿಯಾಗಿದ್ದಾಳೆ.? .ಇವನು ತನಗೆ ಸಿಕ್ಕ ಸರ್ಕಾರಿ ಕೆಲಸವನ್ನು ಸರಿಯಾಗಿ ನಿಭಾಯಿಸುವುದಕ್ಕಿಂತ. ಕಂಡ ಕಂಡ ಹೆಣ್ಣುಮಕ್ಕಳ ಕೆಡವಿಕೊಳ್ಳುವುದರಲ್ಲೆ ನಿರತನಾಗಿರುತ್ತಾನೆ ಎಂದರೆ ನೀವು ನಂಬಲೆ ಬೇಕು. ಇತನಿಗೆ ಕೂಲಿಂಗ್ ಗ್ಲಾಸ್ ನ ಖಯಾಲಿ ಕೂಲಿಂಗ್ ಗ್ಲಾಸ್ ಇರಲೇ ಬೇಕು ತಾನೊಬ್ಬ ಸಿನಿಮಾ ಹೀರೋ ಅನ್ನುವಂತೆ ಫೋಸ್ ಕೊಡುವ ಇತನ ಹೀನಾ ಚರಿತ್ರೆ ಹೆಸಿಗೆ ಹುಟ್ಟಿಸುತ್ತದೆ.! ಹೆಂಡತಿ ರುಕ್ಸನಾಳನ್ನು ಹತ್ಯೆಮಾಡುವ ಮುನ್ನ ಆಕೆಯ ಗಂಡ ಮೊಬೈಲ್ ನಲ್ಲಿ ಕಾಲ್ ರೆಕಾರ್ಡ್ ಹಾಕಿ ಹೊರ ಹೋಗಿದ್ದಾನೆ. ಗಂಡ ಮನೆಯ ಹೊಸಲು ದಾಟುತ್ತಿದ್ದಂತೆ ಮಡದಿ ಆಕೆಯ ಪ್ರೀಯತಮನಿಗೆ ಕಾಲ್ ಮಾಡಿ ಒಂದಷ್ಟು ಸಮಯ ಮೊಬೈಲ್ ನಲ್ಲೆ ಸರಸ ಸಲ್ಲಾಪದಲ್ಲಿ ಮುಳುಗಿದ್ದಾರೆ ಇನ್ನೇನು ಗಂಡ ಬರುವ ಹೊತ್ತಿಗೆ ಸೈಲೆಂಟಾಗಿ ಕುಳಿತಿದ್ದಾಳೆ ಮಡದಿ.!
ಆದರೆ ಮೊದಲೇ ಅನುಮಾನದ ವಿದ್ದ ಕಾರಣಕ್ಕೆ ಮೊಬೈಲ್ ನಲ್ಲಿ ರೆಕಾರ್ಡ್ ಮೂಡ್ ಹಾಕಿ ಹೊರ ಹೋಗಿದ್ದ ಗಂಡ ಬರ ಬರುತ್ತಲೆ ಮೊಬೈಲ್ ನಲ್ಲಿ ರೆಕಾರ್ಡ್ ಆಗಿರ ಬಹುದ ಎಂದು ಗಮನಿಸಲು ಮುಂದಾಗಿದ್ದಾನೆ.! ಆತನ ಅನುಮಾನ ನೀಜವಾಗಿತ್ತು ಹೆಂಡತಿ ಬೇರೊಬ್ಬ ಗಂಡಸಿನ ಜೋತೆಗೆ ಇಟ್ಟುಕೊಂಡಿದ್ದ ಲವ್ವಿಡವ್ವಿ ಬಯಲಾಗಿತ್ತು.ಆಕೆ ಮಾಡಿದ ತಪ್ಪಿಗೆ ಕ್ಷಮೇ ಕೇಳಿದರು ಮಾಡಬಾರದ ತಪ್ಪು ಮಾಡಿದ್ದರಿಂದ ಗಂಡ ಆಕೆಯನ್ನು ತವರುಮನೆಗೆ ಕಳುಹಿಸಿದ್ದ.! ಇತ್ತೀಚಿಗೆ ಹೆಂಡತಿಯನ್ನು ಮಗುವಿಗೆ ಹುಷಾರಿಲ್ಲ ಎಂದು ವಾಪಸ್ ಮನೆಗೆ ಕರೆಯಿಸಿಕೊಂಡು ಆಕೆಯನ್ನು ಬರ್ಬರವಾಗಿ ಹತ್ಯೆಮಾಡಿ ಮುಗಿಸಿದ್ದ.ಈಗ ಗಂಡ ಹೆಂಡತಿಯನ್ನು ಕೊಂದು ಜೈಲಿಗೆ ಹೊದರೆ ಈ ಎಲ್ಲಾ ಪ್ರಕರಣದ ರೂವಾರಿಯಾದ ಕಾಕೀ ಕಾಮಾಂದ ಮಾತ್ರ ಸೈಲೆಂಟಾಗಿ ನಾಲ್ಕನೇ ಹೆಂಗಸ್ಸನ್ನು ಕೆಡವಿಕೊಳ್ಳಲು ಮುಂದಾಗಿರ ಬಹುದಾ.? ಯಾಕೆ ಮೊಬೈಲ್ ರೇಕಾರ್ಡ್ ಅದ ಧ್ವನಿ ಯಾರದ್ದು.? ಆಕೆಯ ಮೊಬೈಲ್ ಕಾಲ್ ಲಿಸ್ಟ್ ತೆಗೆದರೆ ಈ ಕಾಮಾಂದನ ಹೆಸರು ಬಯಲಾಗಬಹುದು.?ಪದೆ ಪದೆ ತಪ್ಪು ಮಾಡುವ ಇತನಿಗೆಕೆ ಶಿಕ್ಷೆ ಇಲ್ಲವಾ..?ಮೊದಲು ಶಿಕ್ಷೆ ಯಾಗಬೇಕಿರುವುದು ಇತನಿಗೆ ಪೋಲಿಸ್ ಇಲಾಖೆ ಯಾಕೆ ಇತನ ಬೆನ್ನಿಗೆ ನಿಂತಿದೆ ಎನ್ನುವು ಅರ್ಥವಾಗುತ್ತಿಲ್ಲ.!
ಪತ್ರಿಕೆ ಈ ಹತ್ಯೆಯ ಅಷ್ಟೂ ವರದಿಯನ್ನು “ಕೂಲಿಂಗ್ ಗ್ಲಾಸ್“ ಕಾಮಾಂದನ ಅಷ್ಟೂ ಕಾಮ ಪುರಾಣವನ್ನು ನಿಮ್ಮ ಮುಂದಿಡಲಿದ್ದೇವೆ ಒಂದಷ್ಟು ಮಾಹಿತಿ ಕಲೆಹಾಕಲು ಪತ್ರಿಕಾ ಬಳಗ ಮುಂದಾಗಿದೆ….. ಎಲ್ಲವನ್ನೂ ನಿರೀಕ್ಷಿಸಿ.. ಸಂಪೂರ್ಣ ವರದಿಗಾಗಿ
ಪ್ರಕರಣದ ಹಿನ್ನಲೆ….
ಹೆಂಡತಿ ಮೇಲೆ ಸಂಶಯ.! ಆಡಿಯೋ ಕೇಳಿದ ಗಂಡನಿಂದ ಹೆಂಡತಿಯ ಬರ್ಬರ ಹತ್ಯೆ.!
ಹೆಂಡತಿಯ ಮೇಲಿನ ಅನುಮಾನದಿಂದ ಗಂಡನೇ ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆಮಾಡಿದ ಪ್ರಕರಣವೊಂದು ಶಿವಮೊಗ್ಗ ನಗರದ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ರುಕ್ಸನಾ (38) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಯೂಸುಫ್ ಎಂದು ಗುರುತಿಸಲಾಗಿದೆ. ಆರೋಪಿ ರುಕ್ಸನಾಳನ್ನು ಕಳೆದ 13 ವರ್ಷದ ಹಿಂದೆ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಆರೋಪಿ ಗಂಡ ನಿತ್ಯ ಮಡದಿಯ ಜೊತೆಗೆ ಗಲಾಟೆ ಮಾಡುತ್ತಿದ್ದನಂತೆ.! ಅಲ್ಲದೇ ಕಳೆದ ಮೂರು ದಿನಗಳ ಹಿಂದೆ ಗಂಡ-ಹೆಂಡತಿಯ ನಡುವೆ ಮನೆಯಲ್ಲಿ ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ.
ಆರೋಪಿ ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ಫೋನಿನಲ್ಲಿ ಆಡೀಯೊ ರೆಕಾರ್ಡಿಂಗ್ ಇಟ್ಟು ಹೊರಗಡೆ ಹೋಗಿದ್ದ. ಮನೆಗೆ ವಾಪಸ್ ಬಂದು ನೋಡಿದಾಗ ರುಕ್ಸಾನ
ಬೇರೆ ವ್ಯಕ್ತಿಯ ಜೊತೆ ಮಾತನಾಡಿದ ಆಡಿಯೋ ಆತನಿಗೆ ಸಿಕ್ಕಿತ್ತು. ಇದರಿಂದ ಕೋಪಗೊಂಡ ಯುಸೂಫ್ ಆಕೆಗೆ ಪ್ರಶ್ನೆ
ಮಾಡಿದ್ದಾನೆ. ರುಕ್ಸಾನ ಕೂಡ ತನ್ನದು ತಪ್ಪಾಗಿದೆ ಎಂದು ಹೇಳಿದ್ದಳು. ಬಳಿಕ ತವರು ಮನೆಗೆ ತೆರಳಿದ್ದಳು.
ತವರು ಮನೆಗೆ ಹೋಗಿದ್ದ ಪತ್ನಿಯನ್ನು ಆರೋಪಿ ಇಂದು (ಭಾನುವಾರ) ಬೆಳಗ್ಗೆ ತನ್ನ ಮಗುವಿಗೆ ಆರೋಗ್ಯ ಸರಿಯಿಲ್ಲವೆಂದು ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಆರೋಪಿ ಆಕೆಗೆ ಚಾಕುವಿನಿಂದ ಇರಿದಿದ್ದು, ಆಕೆ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಈ ಸಂಬಂಧ ಆರೋಪಿಯನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.