ಬೆಂಗಳೂರು: ಗೆಳತಿಗೆ BMW ಕಾರಿನ ಆಸೆ ತೋರಿಸಿ ಹಣ, ಒಡವೆ ಪಡೆದು ಸ್ನೇಹಿತನಿಂದ ವಂಚನೆ- ಆತ್ಮಹತ್ಯೆಗೆ ಶರಣಾದ ಯುವತಿ.!
ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನದ ಹಿಂದೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಯ ಪ್ರಕರಣಕ್ಕೆ ಸಂಬಂದಿಸಿದಂತೆ ಸತ್ಯ ಬಯಲಾಗಿದೆ.! ಯುವತಿ ಆತ್ಮಹತ್ಯೆಗೆ ಶರಣಾಗುವ ಮುನ್ನ ಮೊಬೈಲ್ ಪೌಚ್ ನಲ್ಲಿ ಸಡೆತ್ ನೋಟ್ ಬರೆದಿಟ್ಟಿದ್ದಳಂತೆ.ಈಗ ತನಿಕೆಗೆ ಮುಂದಾಗಿದ್ದ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದೆ.! ಯುವತಿ ಸಾವಿನ ಸೀಕ್ರೆಟ್ ಬಯಲಾಗಿದ್ದು, ಆಕೆ ಸಾವಿಗೆ ಕಾರಣವಾಗಿದ್ದ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಯುವತಿ ಮತ್ತು ಆರೋಪಿ ಇಬ್ಬರು ಒಂದೆ ಕಾಲೇಜಿನಲ್ಲಿ ಓದಿತ್ತಿದ್ದರಂತೆ. ಇಬ್ಬರು ಆತ್ಮೀಯ ಸ್ನೇಹಿತರು.ಇಬ್ಬರು ಚೆನ್ನಾಗಿ ಓದಿದ್ರೆ ಒಳ್ಳೆಯ ಕೆಲಸ ಸೇರಿ ಬದುಕು ರೂಪಿಸಿಕೊಳ್ಳಬಹುದಿತ್ತು. ಆದರೆ ಅಡ್ಡ ಹಾದಿ ಹಿಡಿದು ಆನ್ ಲೈನ್ ಗೇಮಿಂಗಿನ ಗೀಳಿಗೆ ಬಿದ್ದಿದ್ದವರು ಮೇಲೆ ಎಳಲೆ ಇಲ್ಲಾ.! ಗೇಮ್ ಜೊತೆ BMW ಆಸೆಗೆ ಗೆಳೆಯನಿಗೆ ತನ್ನಲಿದ್ದ ಚಿನ್ನಾಭರಣ ಕೊಟ್ಟಿದ್ದ ಯುವತಿ ಎಲ್ಲವನ್ನೂ ಕಳೆದುಕೊಂಡು ಉಸಿರು ಚೆಲ್ಲಿದ್ದಾಳೆ.! ಸ್ನೇಹಿತೆಯ ಸಾವಿಗೆ ಕಾರಣವಾಗಿದ್ದ ಯುವಕ ಈಗ ಪೊಲೀಸರ ಅಥಿತಿಯಾಗಿದ್ದಾನೆ.
ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ ಪ್ರಿಯಾಂಕ ಕಳೆದ ಎರಡು ಮೂರ್ನಾಲ್ಕು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.!ತನಿಖೆ ಕೈಗೊಂಡ ಪೊಲೀಸರಿಗೆ ಆಕೆಯ ಮೊಬೈಲ್ ಪೌಚ್‌ನಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಪರಿಶೀಲನೆ ವೇಳೆ ಆಕೆಯ ಆತ್ಮಹತ್ಯೆಗೆ ಆಕೆಯ ಕಾಲೇಜಿನಲ್ಲಿಯೇ ಓದುತಿದ್ದ ದಿಗಂತ್ ಕಾರಣ ಎನ್ನುವುದು ತನಿಖೆಯ ವೇಳೆ ಗೊತ್ತಾಗಿದೆ. ಇವರಿಬ್ಬರೂ ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ದಿಗಂತ್ ಹಾಗೂ ಪ್ರಿಯಾಂಕ ಇಬ್ಬರು ಸ್ನೇಹಿತರಾಗಿದ್ದರು. ದಿಗಂತ್ ಜೊತೆ ಸೇರಿ ಪ್ರಿಯಾಂಕ ಆನ್ ಲೈನ್ ಗೇಮಿಂಗ್ ನಲ್ಲಿ ಹಣ ಹೊಡಿಕೆ ಮಾಡಿದ್ದಳಂತೆ ಆನ್ಲೈನ್ ನಲ್ಲಿ ಹಣ ಹೊಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತದೆ. ಬಿಎಮ್ ಡ್ಯೂ ಕಾರ್ ತೆಗೆದುಕೊಳ್ಳಬಹುದು ಎಂದು ಸ್ನೇಹಿತ ದಿಗಂತ್ ಆಸೆ ಯುಟ್ಟಿಸಿದ್ದನಂತೆ.
ದಿಗಂತ್ ಮಾತು ನಂಬಿ ಮನೆಯಲ್ಲಿ ತಂದೆ ತಾಯಿಗೆ ಗೊತ್ತಿಲ್ಲದೆ ಸುಮಾರು 15 ಲಕ್ಷದಷ್ಟು ಹಣ, ಚಿನ್ನಭಾರಣವನ್ನು ಆಕೆ ದಿಗಂತ್ ಗೆ ತೆಗೆದುಕೊಂಡು ಬಂದು ಕೊಟ್ಟಿದ್ದಳಂತೆ . ಆದರೆ ಚಿನ್ನಾಭರವನ್ನು ಅಡವಿಟ್ಟ ದಿಗಂತ್ ಆನ್ ಲೈನ್ ಗೇಮ್ ನಲ್ಲಿ ಹೊಡಿಕೆ ಮಾಡಿದ್ದಿನಿ ಅಂತ ಗೆಳತಿ ಪ್ರಿಯಾಂಕಾಳಿಗೆ ನಂಬಿಸಿ ಐಶಾರಾಮಿ ಜೀವನ ನಡೆಸುತ್ತಿದ್ದನಂತೆ. ಸಾಕಷ್ಟು ದಿನ ಕಳೆದರು ಹಣ, ಚಿನ್ನಾಭರಣ ವಾಪಸ್ಸ್ ನೀಡದೆ ದಿಗಂತ್ ಪ್ರಿಯಾಂಕಾಳಿಗೆ ಸತಾಯಿಸುತ್ತಿದ್ದನಂತೆ. ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ರು ಕೇರ್ ಮಾಡಿಲ್ಲ.ಇತ್ತ ಮನೆಯಲ್ಲಿ ಗೊತ್ತಾದ್ರೆ ಎನಾಗಬಹುದು ಎನ್ನುವ ಭಯದಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಪ್ರಿಯಾಂಕ ಮನನೊಂದು ಶುಕ್ರವಾರ ಬೆಳ್ಳಗೆ ಮನೆಯ ಬಾಲ್ಕನಿಯ ಹೊರಗೆ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಿಯಾಂಕ ಮೊಬೈಲ್ ಪರಿಶೀಲನೆ ನಡೆಸಿದಾಗ ಪೌಚ್ ನಲ್ಲಿ ಇಂಗ್ಲಿಷಿನಲ್ಲಿ ಬರೆದಿದ್ದ ಡೆತ್ ನೊಟ್ ಪೊಲೀಸರಿಗೆ ಪತ್ತೆಯಾಗಿದೆ.. ಪ್ರಿಯಾಂಕಾ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ದಿಗಂತ್ ಕಾರಣ ಅಂತಾ ಘಟನೆ ಬಗ್ಗೆ ಸವಿವರವಾಗಿ ಬರೆದು ಉಲ್ಲೇಖಿಸಿದ್ದಾಳೆ. ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರಾಜಾಜಿನಗರ ಪೊಲೀಸರು. ಆರೋಪಿ ದಿಗಂತ್ ನನ್ನ ಬಂಧಿಸಿ ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.