Headlines

ಚಿಕ್ಕಮಗಳೂರು:ಹುಂಚದಕಟ್ಟೆ ಗ್ರಾಮದಲ್ಲಿ 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ ಮತ್ತು ಜಾತ್ರ ಮಹೋತ್ಸವ.

ಚಿಕ್ಕಮಗಳೂರು:ಹುಂಚದಕಟ್ಟೆ ಗ್ರಾಮದಲ್ಲಿ 18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ ಮತ್ತು ಜಾತ್ರ ಮಹೋತ್ಸವ

ಅಶ್ವಸೂರ್ಯ/ಚಿಕ್ಕಮಗಳೂರು: ತಾಲೂಕಿನ ಹುಂಚದಕಟ್ಟೆ ಗ್ರಾಮದ ಶ್ರೀ ನಾಗದೇವತೆ , ಚೌಡೇಶ್ವರಿ ಪರಿವಾರ ದೇವತೆ ರಾಮನಸರ ಕ್ಷೇತ್ರದಲ್ಲಿ ಡಿ.7 ಶನಿವಾರ
18ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿ ದೀಪೋತ್ಸವ ಮತ್ತು ಜಾತ್ರ ಮಹೋತ್ಸವ ಹಮ್ಮಿಕೊಳ್ಳ ಲಾಗಿದೆ.
ಬೆಳಿಗ್ಗೆ ಗಣಹೋಮ, ಪಂಚ ವಿಂಶತಿ, 108 ಕಲಶಾಭಿಷೇಕ, ಕಲಾತತ್ವ ಅಧಿವಾಸ ಹೋಮ ನಡೆಯಲಿದೆ.
ಮಧ್ಯಾಹ್ನ ಹಾಗೂ ಸಂಜೆ ಅನ್ನಸಂತರ್ಪಣೆ, 70 ಕಲಾ ತಂಡಗಳಿಂದ ಕಲಾ ಪ್ರದರ್ಶನ, ರಾಜಬೀದಿ ಉತ್ಸವ ಜರುಗಲಿದೆ.

ಸಂಜೆ 6ಗಂಟೆಯಿಂದ ಆಶ್ಲೇಷಾ ಬಲಿ ದೇವರಿಗೆ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ, ರಾತ್ರಿ 8ಗಂಟೆಗೆ ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ. ಜತೆಗೆ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಐದು ಮೇಳಗಳ ಕೂಡಾಟ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನಾಗರಾಜ್ 7204237965, ಚಂದ್ರಶೇಖರ್ (ಪುಟ್ಟಣ್ಣ) 9902190615 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!