BREAKING NEWS: ಕನ್ನಡ ಕಿರುತೆರೆಯ ಹೆಸರಾಂತ ನಟಿ ಶೋಭಿತಾ ಆತ್ಮಹತ್ಯೆಗೆ ಶರಣು.!?
ಅಶ್ವಸೂರ್ಯ/ಹೈದರಾಬಾದ್: ಬ್ರಹ್ಮಗಂಟು, ನಿನ್ನಿಂದಲೇ ಜೊತೆಗೆ ಧಾರಾವಾಹಿ ನಟಿ ಮತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಕಳೆದ ವರ್ಷ ವಿವಾಹವಾಗಿದ್ದರು.ಜನಪ್ರಿಯ ನಟಿಯಾಗಿದ್ದ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ನಟಿ ಶೋಭಿತಾ ಎರಡೊಂದ್ಲಾ ಮೂರು, ಎಟಿಎಮ್ , ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್, ಅಪಾರ್ಟ್‌ಮಂಟ್ ಟು ಮರ್ಡರ್, ವಂದನಾ ಸಿನಿಮಾದಲ್ಲಿ ನಟಿಸಿದ್ದರು.
ಕರ್ನಾಟಕದ ಹಾಸನ ಮೂಲದ ಸಕಲೇಶಪುರದವರಾದ ನಟಿ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿರೊ ಮಾಹಿತಿ ಇದೆ. ಸದ್ಯ ಫಸ್ಟ್ ಡೇ ಫಸ್ಟ್ ಶೋ ಸಿನಿಮಾದಲ್ಲಿ ನಟಿ ಶೋಭಿತಾ ಶಿವಣ್ಣ ನಟಿಸಿದ್ದರು. ಕಳೆದ ಎರಡುವರ್ಷಗಳ ಹಿಂದೆ ಹೈದರಾಬಾದ್ ನಲ್ಲಿ ಮದುವೆಯಾಗಿ ಸೆಟಲ್ ಆಗಿದ್ದರು.
ಕನ್ನಡ ಕಿರುತೆರೆಯ ಹೆಸರಾಂತ ನಟಿಯಾಗಿದ್ದ ಶೋಭಿತಾ, ಬ್ರಹ್ಮಗಂಟು ಧಾರವಾಯಿಂದ ಜನಪ್ರಿಯತೆ ಗಳಿಸಿದ್ದರು.ಇತ್ತೀಚೆಗೆ ಮದುವೆಯಾದ ನಂತರದಲ್ಲಿ ಹೈದರಾಬಾದ್ ನಲ್ಲಿ ವಾಸವಾಗಿದ್ದ ಶೋಭಿತಾ ಇದೀಗ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಡರಾತ್ರಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ನಟಿಯ ದುಡುಕಿನ ನಿರ್ಧಾರಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿರುವ ಪೋಷಕರು ಹೈದರಾಬಾದ್ ಗೆ ದೌಡಾಯಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು. ಇನ್ನಷ್ಟು ಮಾಹಿತಿ ತಿಳಿಯಬೇಕಿದೆ..