ಕಾಲೇಜು ರಂಗೋತ್ಸವ ಹಾಗೂ ಶಿಕ್ಷಣದಲ್ಲಿ ರಂಗಕಲೆ ಕಮ್ಮಟ ಆಯೋಜನೆ. ಡಿ,1ರಂದು ನಾಟಕ “ಆಧೆ ಆಧೂರೇ”

ಕಾಲೇಜು ರಂಗೋತ್ಸವ ಹಾಗೂ ಶಿಕ್ಷಣದಲ್ಲಿ ರಂಗಕಲೆ ಕಮ್ಮಟ ಆಯೋಜನೆ. ಡಿ,1ರಂದು ನಾಟಕ “ಆಧೆ ಆಧೂರೇ”

ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ವಿಶೇಷವಾಗಿ ಯುವಜನತೆಯನ್ನು ರಂಗಭೂಮಿಯತ್ತ ಆಕರ್ಷಿಸುವ ಕಾರ್ಯಕ್ರಮಗಳ ಭಾಗವಾಗಿ, ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ‘ಕಾಲೇಜು ರಂಗೋತ್ಸವ 2024-25’ ಮತ್ತು ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ “ಶಿಕ್ಷಣದಲ್ಲಿ ರಂಗಕಲೆ” ಕಮ್ಮಟವನ್ನು ಆಯೋಜಿಸಿದೆ.
ಎರಡನೇ ಹಂತದ ಕಾಲೇಜು ರಂಗೋತ್ಸವಕ್ಕಾಗಿ ಕಳೆದ ಒಂದು ತಿಂಗಳಿಂದ ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಮೂರು ಜಿಲ್ಲೆಗಳ ಮೂರು ಕಾಲೇಜುಗಳನ್ನು ಗುರುತಿಸಿ, ಆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಬಿರಗಳನ್ನು ನಡೆಸಿ, ಪ್ರತಿ ಕಾಲೇಜುಗಳಿಗೆ ನಾಟಕವನ್ನು ನಿರ್ದೇಶಿಸಿ, ನ.30 ರಿಂದ ಡಿ.02 ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ರಂಗಾಯಣ, ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.

ನ. 30 ರಂದು ಶನಿವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಮರಳಿ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜಿನ ವಿದ್ಯಾರ್ಥಿಗಳ ಅಭಿನಯದ ಡಾ.ಸಿದ್ಧಲಿಂಗಯ್ಯ ರಚನೆಯ ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ‘ಏಕಲವ್ಯ’ ನಾಟಕ ಏರ್ಪಡಿಸಲಾಗಿತ್ತು.ನಾಟಕ ಪ್ರೇಮಿಗಳು ನಾಟಕವನ್ನು ವಿಕ್ಷೀಸಿ ಸಂತೋಷ‌ ವ್ಯಕ್ತಪಡಿಸಿದ್ದಾರೆ.
ಡಿ. 01 ರಂದು ಭಾನುವಾರ ರಾಮನಗರ ಜಿಲ್ಲೆ, ಕನಕಪುರ ದ ರೂರಲ್ ಕಾಲೇಜ್ ವಿದ್ಯಾರ್ಥಿಗಳ ಅಭಿನಯದ ಮೋಹನ್ ರಾಕೇಶ್ ರಚನೆಯ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕನ್ನಡ ಅನುವಾದದ, ಶ್ರೀ ನರೇಶ್ ಮಯ್ಯ ನಿರ್ದೇಶನದ ‘ಆಧೆ ಆಧೂರೇ’ ನಾಟಕ ಏರ್ಪಡಿಸಲಾಗಿದೆ.
ಡಿ.02 ರಂದು ಸೋಮವಾರ ಬೆಂ.ಗ್ರಾ. ಜಿಲ್ಲೆಯ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳ ಅಭಿನಯದ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ರಚನೆಯ ಡಾ.ದೇವನಹಳ್ಳಿ ದೇವರಾಜ್ ನಿರ್ದೇಶನದ ‘ಕಂಜೂಸ್ ಕರಿಯಪ್ಪ’ ನಾಟಕ ಏರ್ಪಡಿಸಲಾಗಿದೆ.
ನ.30 ರಿಂದ ಡಿ.02 ರವರೆಗೆ ಬೆಳಗ್ಗೆ 9.30 ರಿಂದ ಸಂಜೆ 5.00 ರವರೆಗೆ ನೋಂದಣಿಯಾಗಿರುವ ಭದ್ರಾವತಿ ತಾಲೂಕಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ನಡೆಯಲಿರುವ “ಶಿಕ್ಷಣದಲ್ಲಿ ರಂಗಕಲೆ” ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸಾಸ್ವೆಹಳ್ಳಿ ಸತೀಶ್, ಅಣ್ಣಪ್ಪ ಒಂಟಿಮಾಳಗಿ ಹಾಗೂ ಸತೀಶ್ ಕುಮಾರ್ ಕೆ ಮತ್ತು ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ, ಇವರು ಭಾಗವಹಿಸಲಿದ್ದಾರೆ. ಕಮ್ಮಟದ ಸಂಚಾಲಕರಾದ ಕೆ.ಜಿ.ವೆಂಕಟೇಶ್, ರಂಗಕರ್ಮಿಗಳು ಇವರ ಉಪಸ್ಥಿತಿಯಿರುತ್ತದೆ.
ಟಿಕೆಟ್ ದರ ಒಬ್ಬರಿಗೆ ಒಂದು ಪ್ರದರ್ಶನಕ್ಕೆ ರೂ.30/- ಗಳನ್ನು ನಿಗದಿ ಮಾಡಲಾಗಿದೆ.
ರಂಗಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಕೋರಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!