ಬೆಳ್ತಂಗಡಿ ; ಪ್ರೀತಿಸಿ ಕೈಕೊಟ್ಟ ಪ್ರೇಮಿ.! ಅಪ್ರಾಪ್ತ ಯುವತಿ ಆತ್ಮಹತ್ಯೆಗೆ ಶರಣು…
ಅಶ್ವಸೂರ್ಯ/ಮಂಗಳೂರು: ಪ್ರೀತಿಸಿ ಎಲ್ಲೆಂದರಲ್ಲಿ ಸುತ್ತಾಡಿ ಪ್ರೇಯಸಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಜೋತೆಗೆ ದೈಹಿಕ ಸಂಪರ್ಕವನ್ನು ಬೆಳೆಸಿ, ನಂತರ ಪ್ರೀತಿಸಿದವಳಿಂದ ದೂರಾಗಿ ಕೈಕೊಟ್ಟ ಯುವಕನ ವಂಚನೆಗೆ ನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.!
ಯುವಕನಿಂದ ವಂಚನೆಗೆ ಒಳಗಾದ 17 ವರ್ಷದ ಅಪ್ರಾಪ್ತ ಯುವತಿ. ಮೊಬೈಲ್ ಮೂಲಕ ಕೆಲವೇ ತಿಂಗಳ ಅವಧಿಯಲ್ಲಿ ಪರಿಚಯವಾಗಿದ್ದ ಯುವಕನ ಜೊತೆ ಆಕೆ ಸಲುಗೆಯಿಂದ ಇದ್ದಳು.ಈ ಸಲುಗೆಯೆ ಆಕೆಯನ್ನು ಆತನ ಪ್ರೇಮದ ಭಲೇಗೆ ಬೀಳುವಂತೆ ಮಾಡಿದೆ. ಪ್ರೀತಿಸಿದ ಹುಡುಗ ಕೂಡ ಹುಡುಗಿಯ ದೂರದ ಸಂಭಂದಿಯೆ ಯುವತಿಗೆ ತನ್ನ ಸಂಬಂಧೀಯೆ.!ಈತ ಚಾರ್ಮಾಡಿ ಗ್ರಾಮದ ಪ್ರವೀಣ್ ಗೌಡ.
ಇವನ ಜೊತೆಗೆ ಮೊಬೈಲ್‌ನಲ್ಲಿ ಮಾತುಕತೆಯ ನೆಡೆಯುತ್ತಿದ್ದ ಸಂಧರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಯುವತಿ ಆತನನ್ನೇ ಭಾವಿ ಗಂಡ ಎಂದು ಮನದಲ್ಲಿ ಗಟ್ಟಿಗೊಳಿಸಿಕೊಂಡಿದ್ದಳಂತೆ.!? ಪ್ರವೀಣ ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದು, ಊರಿಗೆ ಬಂದಾಗ ಮೀಟ್ ಮಾಡುತ್ತಿದ್ದ. ಕೆಲವೇ ತಿಂಗಳಲ್ಲಿ ಪ್ರೀತಿ ಪ್ರೇಮ ದ ಸುಳಿಯಲ್ಲಿ ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿತ್ತು.
ಪ್ರವೀಣ್ ಯುವತಿಯ ತಾಯಿ ಬಳಿ ಈ ಹಿಂದೆಯೇ ದೇವರ ಆಣೆ ಹಾಕಿ ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನಂತೆ. ಪ್ರವೀಣನ ಮಾತನ್ನು ನಂಬಿ ಯುವತಿಯ ತಾಯಿಯೂ ಪ್ರವೀಣನ ಜೊತೆಗೆ ಮಗಳನ್ನು ತಿರುಗಾಡಲು ಅನುಮತಿ ನೀಡಿದ್ದಾರೆ. ಯುವತಿ ಮನೆಯವರು ಪ್ರಾಪ್ತವಯಸ್ಸಿಗೆ ಬಂದಾಗ ಮದುವೆ ಮಾಡಿ ಕೊಡುವುದಾಗಿ ಹೇಳಿದ್ದಾರೆ. ಕೇವಲ ಎಂಟು ತಿಂಗಳ ಪ್ರೇಮದಲ್ಲಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾರೆ.
ಈ ಸಂದರ್ಭದಲ್ಲಿ ಯುವತಿಗೆ ಪ್ರವೀಣ ಗರ್ಭ ನಿರೋಧಕ ಮಾತ್ರೆಯನ್ನು ನೀಡಿದ್ದಾನಂತೆ.! ಪ್ರೀತಿಸಿದವಳ ಜೋತೆಗೆ ತನ್ನೆಲ್ಲಾ ತೀಟೆ ತೀರಿದ ಮೇಲೆ ಈ ನಡುವೆ ಪ್ರವೀಣ ಆಕೆಯಿಂದ ದೂರವಾಗಲು ಬಯಸಿದ್ದಾನೆ,!ಆಕೆಯ ದೂರಾಗುವ ವಿಚಾರವನ್ನು ಪ್ರಸ್ತಾಪಮಾಡಿದ್ದಾನೆ. ಪ್ರವೀಣನ ವಂಚನೆಯ ಮಾತನ್ನು ಕೇಳಿದ ಯುವತಿಗೆ ಸಹಿಸಿಕೊಳ್ಳಲಾಗದೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವೆಂಬರ್ 20ರಂದು ಈಕೆ ವಿಷ ಸೇವಿಸಿದ್ದು, ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿ ನವೆಂಬರ್ 26ರ ಮಂಗಳವಾರ ಈ ಬದುಕಿಗೆ ವಿದಾಯ ಹೇಳಿದ್ದಾಳೆ.ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ ಪ್ರಿಯಕರನಿಂದ ವಂಚನೆಗೆ ಒಳಗಾಗಿ ಸಾವಿಗೆ ಶರಣಾಗಿದ್ದಾಳೆ.
ನವೆಂಬರ್ ಇಪ್ಪತ್ತರ ಮಧ್ಯರಾತ್ರಿ ವಾಂತಿ ಮಾಡಿಕೊಂಡಾಗ ಯುವತಿ ತಾಯಿಯ ಜೊತೆ ಪ್ರವೀಣನಿಂದ ಆದ ಮೋಸದ ಬಗ್ಗೆ ಹೇಳಿಕೊಂಡಿದ್ದಾಳೆ. ಪ್ರವೀಣ್ ತನ್ನನ್ನು ಬಳಸಿಕೊಂಡೊರುವುದಾಗಿ ಹೇಳಿದ್ದಾಳೆ. ಯುವತಿ ಆತ್ಮಹತ್ಯೆಗೆ ಶರಣಾಗುತ್ತಲೇ ವಂಚಕ ಪ್ರವೀಣ್ ಮೊಬೈಲ್ ಸ್ವಿಚ್ ಆಫ್ ಮಾಡಿ ಕಣ್ಮರೆಯಾಗಿದ್ದಾನೆ. ಇದೀಗ ಬೆಳ್ತಂಗಡಿ ಪೊಲೀಸರು ಪ್ರವೀಣನ ಬಂಧನಕ್ಕಾಗಿ ಭಲೇ ಬಿಸಿದ್ದಾರೆ.