ಬೊಮ್ಮನಕಟ್ಟೆಯಲ್ಲಿ ಬಿತ್ತು ಹೆಣ.! ರೌಡಿಶೀಟರ್ ಕಪಡ ರಾಜೇಶ್ ಶೆಟ್ಟಿಯ ಬರ್ಬರ ಹತ್ಯೆ.!
ಬೊಮ್ಮನಕಟ್ಟೆಯಲ್ಲಿ ಬಿತ್ತು ಹೆಣ.! ರೌಡಿಶೀಟರ್ ಕಪಡ ರಾಜೇಶ್ ಶೆಟ್ಟಿಯ ಬರ್ಬರ ಹತ್ಯೆ.!
ಹಂತಕರ ಲಾಂಗಿನೇಟಿಗೆ ರಾಜೇಶ್ ಶೆಟ್ಟಿ ನಿಂತಜಾಗದಲ್ಲೆ ನೆತ್ತರುಹರಿದು ಉಸಿರು ಚಲ್ಲಿದ್ದಾನೆ.! ಇತ್ತೀಚೆಗೆ ರೌಡಿಸಂ ಬಿಟ್ಟು ಒಳ್ಳೆಯವನಾಗಲು ಹೊರಟಿದ್ದ ರಾಜೇಶನಿಗೆ ಆತನ ಕೈಗೆ ಅಂಟಿಸಿಕೊಂಡಿದ್ದ ನೆತ್ತರ ಕಲೆ ಇವನನ್ನು ನೆತ್ತರ ಮಡುವಿನಲ್ಲಿ ಉಸಿರು ಚಲ್ಲುವಂತೆ ಮಾಡಿದೆ. ರಾಜೇಶ್ ಶೆಟ್ಟಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕುದ್ದು…….
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಮತ್ತೆ ರೌಡಿಗಳ ಲಾಂಗು ಸದ್ದು ಮಾಡಿದೆ. ಹಾಡುಹಗಲೆ ರೌಡಿಶೀಟರ್ ಒಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು. ಶಿವಮೊಗ್ಗ ನಗರದ ಕೂಗಳತೆ ದೂರದಲ್ಲಿರುವ ನಗರದ ಹಳೆ ಬೊಮ್ಮನ ಕಟ್ಟೆಯ ಮಾರಮ್ಮನಗುಡಿ ಸಮೀಪದಲ್ಲಿರುವ ಗ್ಯಾರೇಜ್ ಒಂದರ ಹತ್ತಿರದಲ್ಲಿ ಕಪಡ ರಾಜೇಶ್ ಶೆಟ್ಟಿ ನೆತ್ತರು ಹರಿದಿದೆ ಕರಿಯ ವಿನಯ್ & ಟೀಮ್ ರಾಜೇಶ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದದ್ದು ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯ ವಾಗಬೇಕಿದೆ. ಈ ಘಟನೆ ಮಧ್ಯಾಹ್ನ ಸುಮಾರು ಒಂದು ಗಂಟೆ ಅಸುಪಾಸಿನಲ್ಲಿ ನಡೆದಿದ್ದು ವಿನೋಬನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಹತ್ಯೆಯಾದ ಸ್ಥಳದಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಹತ್ಯೆಯಾದ ರೌಡಿಶೀಟರ್ ರಾಜೇಶ್ ಶೆಟ್ಟಿ
ಹತ್ಯೆಯಾದ ರಾಜೇಶ್ ಶೆಟ್ಟಿ ರೌಡಿಶೀಟರ್ ಆಗಿದ್ದು ಸುಮಾರು ಹತ್ತು ವರ್ಷಗಳ ಹಿಂದೆ ಬಸವನಗುಡಿಯಲ್ಲಿ ಹತ್ಯೆಯಾಗಿದ್ದ ರಾಘುಶೆಟ್ಟಿ ಮರ್ಡರ್ ಪ್ರಕರಣದಲ್ಲಿ ರಾಜೇಶ್ ಶೆಟ್ಟಿ ಆರೋಪಿಯಾಗಿದ್ದ. ಇತ್ತೀಚೆಗೆ ರೌಡಿಸಂ ನಿಂದ ದೂರವಿದ್ದ ರಾಜೇಶ್ ಒಳ್ಳೆಯವನಾಗಲು ಹೊರಟಿದ್ದ. ಕೆಲವು ದಿನಗಳ ಹಿಂದೆ ಟೀ ಅಂಗಡಿಯ ಸಮೀಪದಲ್ಲಿ ಮಾತಿಗೆ ಮಾತು ಬೆಳೆದು ಕರಿಯ ವಿನಯ್ ಮೇಲೆ ಹಲ್ಲೆಮಾಡಿದ್ದನಂತೆ.ರಿವೆಂಜ್ ಬಿದ್ದಿದ್ದ ಕರಿಯ ವಿನಯ್ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದನಂತೆ.
ಈ ಹಿನ್ನಲೆಯಲ್ಲಿ ಇಂದು ತನ್ನ ಸಹಚರರೊಂದಿಗೆ ಹಳೆ ಬೊಮನಕಟ್ಟೆಯಲ್ಲಿ ಸ್ಕೆಚ್ ಹಾಕಿ ಕುಳಿತಿದ್ದ ಕರಿಯ ವಿನಯ್ ಗ್ಯಾರೇಜ್ ಒಂದರ ಸಮೀಪ ರಾಕೇಶ್ ಶೆಟ್ಟಿ ಇರುವುದನ್ನು ಖಾತ್ರಿ ಪಡಿಸಿಕೊಂಡು ಏಕಾಏಕಿ ಆತನ ಮೇಲೆರಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಂತಕರ ಲಾಂಗಿನೇಟಿಗೆ ರಾಜೇಶ್ ಶೆಟ್ಟಿ ನಿಂತಜಾಗದಲ್ಲೆ ನೆತ್ತರುಹರಿದು ಉಸಿರು ಚಲ್ಲಿದ್ದಾನೆ.! ಇತ್ತೀಚೆಗೆ ರೌಡಿಸಂ ಬಿಟ್ಟು ಒಳ್ಳೆಯವನಾಗಲು ಹೊರಟಿದ್ದ ರಾಜೇಶನಿಗೆ ಆತನ ಕೈಗೆ ಅಂಟಿಸಿಕೊಂಡಿದ್ದ ನೆತ್ತರ ಕಲೆ ಇವನನ್ನು ನೆತ್ತರ ಮಡುವಿನಲ್ಲಿ ಉಸಿರು ಚಲ್ಲುವಂತೆ ಮಾಡಿದೆ. ರಾಜೇಶ್ ಶೆಟ್ಟಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕುದ್ದು ಪೋಲಿಸರು ಸ್ಥಳ ಮಹಜರು ನೆಡೆಸಿ ಹಂತಕರಿಗಾಗಿ ಭಲೇ ಬಿಸಿದ್ದಾರೆ. ಇದು ಮೇಲ್ನೋಟಕ್ಕೆ ರಿವೆಂಜ್ ಗೆ ಬಿದ್ದ ಹತ್ಯೆಯಾಗಿರ ಬಹುದಾ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದು. ಈ ಹತ್ಯೆಗೆ ಸಂಬಂಧಿಸಿದಂತೆ ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.