ಬೊಮ್ಮನಕಟ್ಟೆ: ರೌಡಿಶೀಟರ್ ರಾಜೇಶ್ ಶೆಟ್ಟಿ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ಬಂಧನ.
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರ ವಿನೋಬನಗರ ಪೊಲೀಸ್ ಠಾಣೆಯ ಸರಹದ್ದಿನ ಹಳೆ ಬೊಮ್ಮನಕಟ್ಟೆಯ ನಡುಹಾದಿಯಲ್ಲೆ ಕಳೆದ ಶನಿವಾರ (ನ,30 ರಂದು) ಮತ್ತೆ ರಕ್ತ ಚಲ್ಲಾಡಿತ್ತು. ಹಾಲಿ ರೌಡಿಶೀಟರ್ ಪಾತಕಿ ರಾಜೇಶ್ ಶೆಟ್ಟಿ ಅಲಿಯಾಸ್ ಕಪಡ ರಾಜೇಶ್ ಶೆಟ್ಟಿ ಆರು ಮಂದಿ ಮುಸುಕುದಾರಿಗಳಿಂದ ಭೀಕರವಾಗಿ ಹತ್ಯೆಯಾಗಿ ಹೋಗಿದ್ದ.! ಆದರೆ ಈ ಬಿಡಾಡಿ ಹುಡುಗರಿಗೆ ಟಿಪ್ಸು ಕೊಟ್ಟಿದ್ದು ಮಾತ್ರ ಯಾರು.? ಎನ್ನುವ ಅನುಮಾನ ಎಲ್ಲರನ್ನು ಕಾಡಿತ್ತು.? ಬೊಮ್ಮನಕಟ್ಟೆಯ ನಡುಹಾದಿಯ ಮೇಲೆ ಹರಿದ ರಕ್ತ ಇಡೀ ಊರಿಗೆ ಸೂತಕ ಕವುಚುವಂತೆ ಮಾಡಿದೆ.
ಮೊದಲೇ ಪುಂಡರ ಊರು ಎನ್ನುವ ಕುಖ್ಯಾತಿಯತ್ತಾ ಸಾಗಿರುವ ಬೊಮ್ಮನಕಟ್ಟೆ ಅಪ್ಪಟ ಪುಂಡರಿರುವ ಏರಿಯಾ ಆಗಿದೆ.! ಪೋಲಿಸ್ ಇಲಾಖೆಯಲ್ಲು ಈ ಏರಿಯಾದ ಕ್ರೈಮ್ ರೇಂಜ್ ಎತ್ತರಕ್ಕೆರಿದೆ! ಇತ್ತೀಚೆಗಂತೂ ಈ ಏರಿಯಾದಲ್ಲಿ ಪಾತಕದ ಛಾಯೆ ಆವರಿಸಿಕೊಂಡಿದೆ.! ಮೀಸೆ ಮೂಡದ ಹುಡುಗರು ಲಾಂಗಿನ ದಾಸರಾಗಿ ಅವರಿಗೆ ಅರಿವಿಲ್ಲದೆ ಪಾತಕಲೋಕದೆಡೆ ಹೆಜ್ಜೆ ಹಾಕಿದ್ದಾರೆ.ಈ ಕಾರಣದಿಂದಲೆ ಬೊಮ್ಮನಕಟ್ಟೆ ರೌಡಿಗಳ ಜನ್ಮಭೂಮಿಯಾಗಿದೆ. ಮುಖ್ಯವಾಗಿ ಅಂಡರ್ ವರ್ಲ್ಡ್ ನಲ್ಲಿ ತಮ್ಮದೆ ಹೆಸರು ಇರಬೇಕೆನ್ನುವ ಹುಂಬುತನಕ್ಕೆ ಬಿದ್ದ ಒಂದಷ್ಟು ಪಡ್ಡೆ ಹೈಕಳು ಸೈಲೆಂಟಾಗಿ ರೌಡಿಸಂ ಗೆ ಮುಂದಾಗಿದ್ದಾರೆ..! ಕೆಲವರು ಕುಖ್ಯಾತರಾಗಿ ರೌಡಿಶೀಟರ್ ಗಳಾಗಿ ಪೊಲೀಸ್ ಇಲಾಖೆಯ ರೌಡಿಶೀಟ್ ನಲ್ಲಿ ತಮ್ಮ ಹೆಸರು ದಾಖಲಾಗುವಂತೆ ನೆತ್ತರ ಕಲೆ ಅಂಟಿಸಿಕೊಂಡಿದ್ದಾರೆ.ಇನ್ನೂ ಮೀಸೆ ಬಾರದ ಹುಡುಗರ ಕೈಯಲ್ಲೂ ಲಾಂಗು ಜಳಪಿಸುತ್ತಿದೆ.! ಅಂಡರ್ ವರ್ಲ್ಡ್ ನಲ್ಲಿ ಈ ಊರೇ ಒಂದರ್ಥದಲ್ಲಿ ಪ್ರಾಣವಾಯು. ಮೀಸೆ ಮೂಡದ ಹುಡುಗರ ಕೈಗಳಿಗೂ ಇಲ್ಲಿ ಸಲೀಸಾಗಿ ರಕ್ತ ಅಂಟಿಸಿ ಕೊಳ್ಳುವುದರಿಂದ ಪುಂಡರು ಯಾರು..? ಸಭ್ಯರು ಯಾರು..? ಎಂದು ಬೇರ್ಪಡಿಸಿ ನೋಡುವುದೇ ಕಷ್ಟ ಅಷ್ಟು ಖರಾಬೆದ್ದು ಹೋಗಿದೆ ಬೊಮ್ಮನಕಟ್ಟೆ.! ಬೊಮ್ಮನಕಟ್ಟೆಯಲ್ಲಿ ಸಭ್ಯರು ಉಸಿರು ಕಟ್ಟಿಕೊಂಡು ಬದುಕುತ್ತಿದ್ದಾರೆ.
ಬೊಮ್ಮನಕಟ್ಟೆಯಲ್ಲಿ ನೆಡೆಯುವ ಅಕ್ರಮ ದಂಧೆ, ಕ್ರೈಮ್ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಾದ ವಿನೋಬಾ ನಗರದ ಪೊಲೀಸರಿಗೂ ಒಂದು ರೀತಿ ಉಡಾಫೆ. ಹೀಗೆ ಸಮಸ್ತ ಅಡ್ಡ ಕಸುಬುಗಳಿಗೆ ಅಖಾಡವಾಗಿರುವ ಬೊಮ್ಮನಕಟ್ಟೆಯ ಬಗ್ಗೆ ಇರುವ ಪೊಲೀಸರ ಉಡಾಫೆಯೇ ಇವತ್ತು ಈ ಊರು ಇಷ್ಟು ಕುಖ್ಯಾತವಾಗಲು ಕಾರಣವಾಗಿದೆ. ಇಂತಹ ಊರಲ್ಲಿ ರಕ್ತ ಹರಿದರೆ ಸಹಜವಾಗಿಯೇ ಜನರ ಕಣ್ಣು ಅಂಡರ್‌ವರ್ಲ್ಡ್‌ನ ಮೇಲೆ ಬೀಳುತ್ತದೆ. ನಿಜಕ್ಕಾದರೆ ಬೊಮ್ಮನಕಟ್ಟೆಯಲ್ಲಿ ಸತ್ತು ಮಲಗುವ ಬಹುತೇಕ ಹೆಣಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಅಂಡರ್ ವರ್ಲ್ಡ್ ನ ಟಚ್ಚಿರುತ್ತದೆ.
ಈಗ ಬಿದ್ದಿರುವ ರಾಜೇಶನ ಹೆಣಕ್ಕೂ ರಿವೆಂಜಿನ ನಂಜಿದೆ.!
ರೌಡಿಶೀಟರ್ ರಾಜೇಶ್ ಶೆಟ್ಟಿ ಅಲಿಯಾಸ್ ಕಪಡ ರಾಜೇಶ್ ಹಳೆ ಬೊಮ್ಮನಕಟ್ಟೆಯ ಗ್ಯಾರೇಜ್ ಒಂದರ ಸಮೀಪ ಹಂತಕರ ಲಾಂಗಿನೇಟಿಗೆ ನಡುರಸ್ತೆಯಲ್ಲೆ ನೆತ್ತರ ಕೊಡಿಹರಿದು ಉಸಿರು ಚಲ್ಲಿದ್ದಾನೆ.ಮಾಡಿದ ಪಾಪ, ಎಷ್ಟೇ ತೋಳಿದರು ಹೋಗದ ಕೈಯಿಗೆ ಅಂಟಿದ ನೆತ್ತರ ಕಲೆ ಇವನನ್ನು ಇಂದು ಸಾವಿನ ಮನೆ ಸೇರಿಸಿದೆ ಎಂದರೆ ತಪ್ಪಾಗಲಾರದೇನೊ.?ಎದೆ ಉಬ್ಬಿಸಿ ಸಮಯಸಿಕ್ಕಾಗ ರೌಡಿಸಂ ವರೆಸೆ ತೋರಿಸುತ್ತಿದ್ದ ರಾಜೇಶ್ ಶೆಟ್ಟಿ ತನಗೆ ಅರಿವಿಲ್ಲದೆ ನಡು ಹಾದಿಯಲ್ಲೇ ಹೆಣವಾಗಿ ಹೋಗಿದ್ದಾನೆ.!! ತನ್ನ ಮಡದಿ ಮಕ್ಕಳು ಕಟ್ಟಿಕೊಂಡಿದ್ದ ಎಲ್ಲಾ ಕನಸುಗಳನ್ನು ನುಚ್ಚು ನೂರು ಮಾಡಿ ಸಾವಿನಮನೆ ಸೇರಿದ್ದಾನೆ.! ಸುಂದರವಾದ ಬದುಕು ಕಟ್ಟಿಕೊಳ್ಳಬೇಕಾದ ರಾಕೇಶ್ ಶೆಟ್ಟಿ ಪಾತಕ ಲೋಕದೇಡೆಗೆ ಹೆಜ್ಜೆ ಹಾಕಿ ನೆತ್ತರ ಕಲೆ ಅಂಟಿಸಿಕೊಂಡು ರೌಡಿಗಳ ಲಾಂಗಿನೇಟಿಗೆ ರಕ್ತದ ಮಡುವಿನಲ್ಲಿ ಉಸಿರು ಚೆಲ್ಲಿದ್ದಾನೆ.!
ಒಂದೆರಡು ತಿಂಗಳ ಹಿಂದೆ ಬೊಮ್ಮನಕಟ್ಟೆಯ ಪುರುಷಿ ಆನಾರೋಗ್ಗದಿಂದ ಮರಣಹೊಂದಿದ್ದ. ಈ ಸಂಧರ್ಭದಲ್ಲಿ ಅಂತಿಮ ನಮನ ಸಲ್ಲುಸಲು ಬಂದಿದ್ದ ಕರಿಯ ವಿನಯ್ ಮತ್ತು ರಾಜೇಶ್ ಶೆಟ್ಟಿಗೆ ಕ್ಯಾಂಟೀನ್ ಒಂದರ ಸಮೀಪ ಕಿರಿಕ್ ಆಗಿತ್ತು ಗಲಾಟೆ ವಿಕೋಪಕ್ಕೆ ಹೋಗಿ ರಾಜೇಶ್ ಶೆಟ್ಟಿ ಕರಿಯ ವಿನಯನ ಕೈಬೆರಳು ತುಂಡಾಗುವಂತೆ ಹಲ್ಲೆಮಾಡಿದ್ದ.! ಅಂದೆ ರಿವೆಂಜಿಗೆ ಬಿದ್ದಿದ್ದ ಕರಿಯ ವಿನಯ್ ರಾಜೇಶ್ ಶೆಟ್ಟಿಯ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಕೊನೆಗೂ ರೌಡಿಶೀಟರ್ ರಾಜೇಶನಿಗೆ ಕರಿಯ ವಿನಯ್ ಮುಹೂರ್ತ ಫಿಕ್ಸ್ ಮಾಡಿ ತನ್ನದೆ ಹುಡುಗರ ಟೀಮ್ ರೇಡಿಮಾಡಿ ಸ್ಕೆಚ್ ಹಾಕಿದ್ದ… ಕರಿಯ ವಿನಯ್ ಪ್ಲಾನ್ ನಂತೆ ಕಳೆದ ಶನಿವಾರ (ನ,30 ರಂದು) ಮಧ್ಯಾಹ್ನ ಒಂದುಗಂಟೆ ಸುಮಾರಿಗೆ ಹಳೆ ಬೊಮ್ಮನಕಟ್ಟೆಯ ಗ್ಯಾರೇಜ್ ಒಂದರಲ್ಲಿ ಬೈಕ್ ರಿಪೇರಿಗೆ ಬಿಟ್ಟು ಅಲ್ಲೆ ಇದ್ದ ಅಂಗಡಿಯಲ್ಲಿ ಟೀ ಕುಡಿಯುವ ಸಂಧರ್ಭದಲ್ಲಿ ಕರಿಯ ವಿನಯ್ ಮತ್ತು ಆತನ ಸಹಚರರಾದ ಆರುಮಂದಿಯ ನಟೋರಿಯಸ್ ಟೀಮ್ ಏಕಾಏಕಿ ಲಾಂಗಿನಿಂದ ಅಟ್ಯಾಕ್ ಮಾಡಿದ್ದಾರೆ. ಮಿಸುಕಾಡಲು ಸಾಧ್ಯವಾಗದೆ ಲಾಂಗಿನೇಟಿಗೆ ರೌಡಿಶೀಟರ್ ರಾಜೇಶ್ ಶೆಟ್ಟಿ ನೆತ್ತರು ಹರಿಸಿಕೊಂಡು. ನಿಂತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಉಸಿರು ಚಲ್ಲಿದ್ದಾನೆ.
ಇತನ ಮೇಲೆ ಅಟ್ಯಾಕ್ ಮಾಡಿ ರಾಜೇಶನ ಹತ್ಯೆಮಾಡಿದ ಗ್ಯಾಂಗ್ ಕ್ಷಣಾರ್ಧದಲ್ಲಿ ಹತ್ಯೆಮಾಡಿದ ಸ್ಥಳದಿಂದ ಕಣ್ಮರೆಯಾಗಿದ್ದರು,ಘಟನಾ ಸ್ಥಳಕ್ಕೆ ಆಗಮಿಸಿದ ವಿನೋಬನಗರ ಪೋಲಿಸರು ತಂಡ ಹತ್ಯೆಯಾದ ಸ್ಥಳದಲ್ಲಿ ಪರಿಶೀಲನೆ ನೆಡೆಸಿ ಒಂದಷ್ಟು ಮಾಹಿತಿ ಕಲೆಹಾಕಿ ಹಂತಕರ ಬಂಧನಕ್ಕೆ ಭಲೇ ಬಿಸಿದ್ದರು.ರಾಜೇಶ್ ಶೆಟ್ಟಿಯ ಹತ್ಯೆಯಾದ 24 ಗಂಟೆಯಲ್ಲಿ.ಗಣೇಶ,ನಾಗರಾಜ ಮತ್ತು ಕಿರಣ್ ಗೌಡ,ವೆಂಕಟೇಶ ಎನ್ನುವ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿಗಳಾದ ಕರಿಯ ವಿನಯ್ ಮತ್ತು ಡಿಂಗಾ ದೀಪು ತಲೆಮರೆಸಿಕೊಂಡಿದ್ದು. ಇವರ ಬಂಧನಕ್ಕೆ ಪೋಲಿಸರು ತಂಡಗಳಾಗಿ ಕಾರ್ಯಚರಣೆಗೆ ಇಳಿದಿದ್ದಾರೆ.
ಈ ಹತ್ಯೆಯಿಂದ ತಣ್ಣಗೆ ಹೊದ್ದು ಮಲಗಿದ್ದ ಅಂಡರ್ ವರ್ಲ್ಡ್ ಆಕ್ಟಿವ್ ಆಗಿದೆ. ಪೊಲೀಸ್ ಇಲಾಖೆ ಎಚ್ಚೆತ್ತು ಕೊಳ್ಳದೆ ಹೊದರೆ ರಿವೆಂಜಿನ ನಂಜಿಗೆ ನೆತ್ತರು ಹರಿದು ತಣ್ಣಗೆ ಹರಿಯುತ್ತಿತುವ ತುಂಗೆ ಮಲಿನವಾದರು ಆಶ್ಚರ್ಯವಿಲ್ಲ..