ಸೋಲಿನ ಸುಳಿಯಲ್ಲಿ ನಿಖಿಲ್ ಕುಮಾರಸ್ವಾಮಿ.! ರಾಜಕೀಯದಲ್ಲೂ ಲಕ್ ಇಲ್ಲ? ಸಿನಿಮಾದಲ್ಲೂ ದಕ್ಕಲಿಲ್ಲ ಜಯ! ನಿಖಿಲ್ ನೆಡೆ ಮುಂದೇನು.?
ಅಶ್ವಸೂರ್ಯ/ಶಿವಮೊಗ್ಗ: ಸತತ ಸೋಲಿನ ಸುಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಬಂಧಿಯಾಗಿದ್ದಾರೆ. ಮೂರನೇ ಬಾರಿಗೆ ಮತ್ತೆ ಸೋಲುಂಡು ರಾಜಕೀಯದಲ್ಲೂ ನೆಲೆ ನಿಲ್ಲಲು ಆಗದೆ ಹೋಗಿದೆ. ಸಿನಿಮಾ ರಂಗದಲ್ಲೂ ಆ ಮಟ್ಟದ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಜನಪ್ರಿಯ ನಾಯಕ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ಮಗ ಹಾಗೂ ನಾಯನಟ ನಿಖಿಲ್ ಕುಮಾರಸ್ವಾಮಿಯ ಭವಿಷ್ಯ ಇಂದಿನ ಸೋಲಿನಿಂದ ಅತಂತ್ರವಾಯ್ತಾ? ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ರಾಜಕೀಯದ ಚದುರಂಗದಾಟದಲ್ಲಿ ನಿಖಿಲ್ ಮತ್ತೆ ಸೋಲಿನ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ?
ಮುಂದೆನು ಎನ್ನುವ ಪ್ರಶ್ನೆ ಬೆಂಬಲಿಗರನ್ನು ಕಾಡುತ್ತಿದೆ. 2024ರ ಕರ್ನಾಟಕದ ಉಪಚುನಾವಣೆಯಲ್ಲಿ ಚನ್ನಪಣ್ಣ ಕ್ಷೇತ್ರದಿಂದ ಬಿಜೆಪಿ,ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಿಖಿಲ್ ಕುಮಾರಸ್ವಾಮಿ ಮತ್ತೆ ಸೋಲಿನ ಕಹಿ ಉಂಡಿದ್ದಾರೆ. ಮನೆ ಮಗನ ಸತತ ಸೋಲು ಗೌಡರ ಕುಟುಂಬಕ್ಕೆ ದೊಡ್ಡ ಅಘಾತವನ್ನೆ ಉಂಟುಮಾಡಿದೆ.
ಮತ ಎಣಿಕೆಯ ಮುನ್ನವೇ ಈ ಬಾರಿ ಗೆದ್ದೆ ಬಿಟ್ಟೇವು ಎನ್ನುವ ಬಲವಾದ ನಂಬಿಕೆ ಹುಸಿಯಾಗಿದೆ.! ಯೋಗೇಶ್ವರ್ ವಿರುದ್ಧ ನಿಖಿಲ್ಗೆ ಬಾರಿ ಅಂತರದ ಸೋಲನ್ನು ಕಂಡಿದ್ದಾರೆ.
ಕರ್ನಾಟಕ ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಿ.ಪಿ ಯೋಗೇಶ್ವರ್ ಕಣದಲ್ಲಿದ್ದರು, ಎರಡು ಪಕ್ಷಗಳು ಭರ್ಜರಿ ಪ್ರಚಾರವನ್ನೆ ಮಾಡಿ ರಣಕಹಳೆ ಮೊಳಗಿಸಿದ್ದವು,
ಎರಡು ಪಕ್ಷದ ನಾಯಕರ ಮಾತಿನ ವರೆಸೆಯು ಜೋರಾಗಿಯೆ ಇತ್ತು.ಚನ್ನಪಟ್ಟಣ ಚುನಾವಣೆಯ ಅಖಾಡದಲ್ಲಿ ನಾನು ನಾನು ಎಂದು ಜಾತಿ ಲೆಕ್ಕಚಾರದಲ್ಲಿ ಚುನಾವಣೆ ನೆಡೆದರೆ. ಮುಸ್ಲಿಮರು ಕಾಂಗ್ರೆಸ್ ಪಕ್ಷದ ಪರವಾಗಿ ಗಟ್ಟಿಯಾಗಿ ನಿಂತು ಬಿಟ್ಟಿದ್ದರು, ಇದರ ಪರಿಣಾಮವೆ ನಿಖಿಲ್ ಸೋಲಿಗೆ ಪ್ರಮುಖ ಕಾರಣವಾಗಿದೆ.ಮುಸ್ಲಿಮರ ಓಟೆ ಬೇಡ ನಮಗೆ ಎನ್ನುವ ದುರಂಕಾರದ ಮಾತಿಗೆ. ಸೋಲಿಗೆ ಶರಣಾಗಬೇಕಾಗಿರಬಹುದು ಎನ್ನುವ ಚರ್ಚೆ ಕೂಡ ಜೋರಾಗಿ ನೆಡೆಯುತ್ತಿದೆ. ಆದರೆ ಸತತ ಮೂರನೇ ಸೋಲಿನಿಂದ ನಿಖಿಲ್ ನಿದ್ದೆಗೆಡಿಸಿದೆ. ಈ ಹಿಂದೆ ಎರಡು ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದ ನಿಖಿಲ್ ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎನ್ನುವ ಬಲವಾದ ನಂಬಿಕೆ ಅವರಲ್ಲಿತ್ತು ಆದರೆ ನಿರೀಕ್ಷೆಗಳು ಸುಳ್ಳಾಗಿದೆ. ಮತ್ತೆ ಸೋಲು ನಿಖಿಲ್ ಬೆನ್ನು ಬಿದ್ದಿದೆ. ಜೆಡಿಎಸ್ ಭದ್ರಕೋಟೆಯಲ್ಲೇ ನಿಖಿಲ್ ಗೆಲುವು ಕನಸಾಗಿಯೆ ಉಳಿದಿದೆ.!
ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ 25,515 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಇದು ಭಾರೀ ಹಿನ್ನಡೆಯ ಸೋಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ಅಂಬರೀಷ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಇಳಿದು ಸೋಲಿಗೆ ಶರಣಾಗಿದ್ದರು.ಕುಮಾರಣ್ಣನ ವರ್ಚಸ್ಸು. ನಿಖಿಲ್ ಕುಮಾರ್ ಸ್ವಾಮಿಯ ಮೊದಲ ಪ್ರಯತ್ನ ಯಶಸ್ಸು ನೀಡಿರಲಿಲ್ಲ.
ಬಳಿಕ 2023ರಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಮತ್ತೆ ಕಣಕ್ಕಿ ಇಳಿದಿದ್ದರು. ಅಲ್ಲೂ ಕೂಡ ನಿಖಿಲ್ಗೆ ಜಯ ಸಿಗಲಿಲ್ಲ ಎರಡನೇ ಬಾರಿಗೆ ಸೋಲುಂಡಿದ್ದರು. ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎನ್ನುವಂತೆ ಚನ್ನಪಣ್ಣದ ಉಪ ಚುನಾವಣೆಯಲ್ಲು ಸೋಲಿನ ಕಥೆಯೆ ಮುಂದುವರೆದಿದೆ. ಮಾಜಿ ಪ್ರಧಾನಿಯ ಮೊಮ್ಮಗನಾಗಿ,ಮಾಜಿ ಮುಖ್ಯಮಂತ್ರಿಯ ಮಗನಾಗಿ ಜನಬಲ,ಹಣಬಲ ಜೋತೆಗೆ ಮೈತ್ರಿ ಪಕ್ಷ ಬಿಜೆಪಿಯ ಬೆಂಬಲವಿದ್ದರು ಅಧಿಕ ಮತಗಳ ಅಂತರದಿಂದ ನಿಖಿಲ್ ಕುಮಾರಸ್ವಾಮಿ ಗೆ ಸೋಲಾಗಿದೆ.! ರಾಜಕಾರಣ ಮಾಡುವಲ್ಲಿ ಕುಮಾರಣ್ಣನ ಪುತ್ರ ಸೋತಿದ್ದಾರೆ.ರಾಜಕಾರಣದ ವರ್ಚಸ್ಸು ಇಲ್ಲವಾ.? ಜೆಡಿಎಸ್ ಭದ್ರಕೋಟೆಗಳು ಛಿದ್ರ ಛಿದ್ರವಾಗಿದೆ.
ಸಿನಿಮಾ ರಂಗದಲ್ಲೂ ಅಂತ ಯಶಸ್ಸು ಕಾಣಲು ಸಾಧ್ಯವಾಗಿಲ್ಲ ರಾಜಕೀಯ ಮತ್ತು ಚಿತ್ರರಂಗದಲ್ಲು ಸಾಲು ಸಾಲು ಸೋಲುಗಳು ನಿಖಿಲ್ ಅವರರನ್ನು ಕಂಗೆಡುವಂತೆ ಮಾಡಿರಲು ಸಾಧ್ಯ..!?
ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸತತ ಸೋಲುನಿಂದ ಕಂಗೆಟ್ಟ ನಿಖಲ್ ಮತ್ತೆ ಎದ್ದು ನಿಲ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ನಿಖಿಲ್ ಗೆ ವಯಸ್ಸಿದೆ ಆತ್ಮಬಲವಿದ್ದರೆ ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾದರು ಆಶ್ಚರ್ಯವಿಲ್ಲ. ಸೋಲೆ ಗೆಲುವಿನ ಮೇಟ್ಟಿಲು ದೃತಿಗೇಡುವ ಅಗತ್ಯವಿಲ್ಲ. ನಿಖಿಲ್ ಕುಮಾರಸ್ವಾಮಿಯ ಮುಂದಿನ ರಾಜಕೀಯದ ಹಾದಿ ಉಜ್ವಲವಾಗಿರಲಿ.
ಚನ್ನಪಟ್ಟಣದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ ಪಿ ಯೋಗೆಶ್ವರ್ ಅವರಿಗೆ ಶಯಭವಾಗಲಿ….