IPS ಅಧಿಕಾರಿ ರವಿತೇಜ
ಸಾರ್ವಜನಿಕರು ಒಬ್ಬ ಒಳ್ಳೆಯ ಪ್ರಾಮಾಣಿಕ ಅಧಿಕಾರಿಯನ್ನು ಹೇಗೆ ಗೌರವಿಸುತ್ತಾರೆ ಎನ್ನುವುದನ್ನು ನೀವು ನೋಡಲೇ ಬೇಕು ಅಪರೂಪಕ್ಕೆ ಇಂತಹ ಅಧಿಕಾರಿಗಳು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತಾರೆ ಅಂತವರ ಸರದಿಯಲ್ಲಿ ಐಪಿಎಸ್ ದಕ್ಷ ಪೋಲಿಸ್ ಅಧಿಕಾರಿ ಎಸ್ಪಿ ರವಿತೇಜ ಅವರು. ಇವರನ್ನು ಜುನಾಗಡ್ ನಿಂದ ಗುಜರಾತ್‌ನ ಗಾಂಧಿನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಇವರ ವರ್ಗಾವಣೆ ಅಲ್ಲಿಯ ನಾಗರಿಕರಿಗೆ ಶಾಖ್ ನೀಡಿದೆ ಒಬ್ಬ ದಕ್ಷ ಅಧಿಕಾರಿ ನಮ್ಮ ಜಿಲ್ಲೆಯನ್ನು ಬಿಟ್ಟು ಹೋಗುತ್ತಾರೆ ಎನ್ನುವ ನೋವು ಸಂಪೂರ್ಣ ಜುನಾಗಡ್ ನ ನಾಗರಿಕರಿಗಾಗಿದೆ. ಈ ಸಂಧರ್ಭದಲ್ಲಿ ಜುನಾಗಡ್ ನ ಸಾರ್ವಜನಿಕರು ಮತ್ತು ಇವರ ಕೈಕೆಳಗೆ ಕರ್ತವ್ಯ ನಿರ್ವಹಿಸಿದ ಪೋಲಿಸ್ ಅಧಿಕಾರಿಗಳಿಂದ ಹಿಡಿದು ಪೋಲಿಸ್ ಪೇದೆ ವರೆಗೂ ಅವರನ್ನು ತಮ್ಮ ಜಿಲ್ಲೆಯಿಂದ ಬೀಳ್ಕೊಟ್ಟ ರೀತಿಯನ್ನು ನೋಡಿದರೆ ಎಸ್ಪಿ ರವಿತೇಜ ಅವರ ಅವಧಿಯ ಕಾರ್ಯವೈಖರಿಯನ್ನು ಅವರನ್ನು ಗೌರವಿಸಿ ಕಳಿಸಿಕೊಟ್ಟ ರೀತಿಯಿಂದಲೆ ಪ್ರತಿಯೊಬ್ಬರಿಗೂ ಅರಿವಾಗುತ್ತದೆ ಯಾವ ಮಟ್ಟದಲ್ಲಿತ್ತು ಅವರ ಖಡಕ್ ಅಧಿಕಾರದ ಅವಧಿ ಎಂದು. ಎಸ್ಪಿ ರವಿತೇಜ ಅವರು ಮೂಲತಃ ಆಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯ ಮಾಮಿಡಿಕುದುರು ಮೂಲದವರು. ಎಸ್ಪಿ ರವಿತೇಜ ಅವರ ಪ್ರಾಮಾಣಿಕತೆ, ಕಠಿಣ ಪರಿಶ್ರಮ, ದಕ್ಷತೆಯನ್ನು ಹೇಗೆ ಗೌರವಿಸಿದ್ದಾರೆ ಜನರು ಎಂದು ಈ ವಿಡಿಯೋದಲ್ಲಿ ನೋಡ ಬಹುದಾಗಿದೆ
ಪ್ರಾಮಾಣಿಕತೆಗೆ ಸಂದ ಗೌರವ
ಅದ್ದೂರಿ ಬಿಳ್ಕೋಡಿಯ ವಿಡಿಯೋ
ಆಂಧ್ರ ಪ್ರದೇಶದ ಕೋಣಸೀಮಾ ಜಿಲ್ಲೆಯ ಮಾಮಿಡಿಕುದೂರು ಮೂಲದ ರವಿತೇಜ ಅವರು ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಗುಜರಾತಿನ ಜುನಾಗಢದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ ರವಿತೇಜ ಅವರನ್ನು ಇತ್ತೀಚೆಗೆ ಗಾಂಧಿನಗರಕ್ಕೆ ವರ್ಗಾವಣೆ ಮಾಡಲಾಗಿದೆ.
ಪೊಲೀಸ್ ಅಧಿಕಾರಿ ರವಿತೇಜಾಗೆ ಜುನಾಗಢದ ಜನರು ವಿಭಿನ್ನವಾಗಿ ಬೀಳ್ಕೊಟ್ಟರು. ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಆರಂಭವಾಯಿತು. ಮೊದಲಿಗೆ ಹೂವಿನಿಂದ ಅಲಂಕರಿಸಿದ ಕಾರಿನಲ್ಲಿ ಅಧಿಕಾರಿ ರವಿತೇಜರನ್ನು ಕರೆದುಕೊಂಡು ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಜುನಾಗಢದ ಬೀದಿಗಳಲ್ಲಿ ಪೊಲೀಸ್ ಬೆಂಗಾವಲು ಪಡೆ ಸಾಗಿತು. ಈ ವೇಳೆ ಜುನಾಗಢದ ಜನರು ಹೆದ್ದಾರಿಯಲ್ಲಿ ಉದ್ದಕ್ಕೂ ಪೊಲೀಸ್ ವರಿಷ್ಠಾಧಿಕಾರಿ ರವಿತೇಜ ಅವರ ಮೇಲೆ ಹೂವಿನ ಮಳೆಗೆರೆದು ಬೀಳ್ಕೊಟ್ಟರು.
2015ರ ಐಪಿಎಸ್ ಬ್ಯಾಚ್‌ನ ರವಿತೇಜ ಅವರು ಮೂರು ವರ್ಷಗಳ ಕಾಲ ಜುನಾಗಢ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು. ಅವರನ್ನು 2019 ರಲ್ಲಿ ಜುನಾಗಢ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಯಿತು. ಅವರನ್ನು ಇತ್ತೀಚೆಗೆ ಜುನಾಗಢದಿಂದ ಗುಜರಾತ್‌ನ ಗಾಂಧಿನಗರದ ಎಸ್‌ಪಿಯಾಗಿ ವರ್ಗಾಯಿಸಲಾಯಿತು. ಗಾಂಧಿನಗರದ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲು ಬಂದಿದ್ದ ಅವರಿಗೆ ಸ್ಥಳೀಯರು ಕೂಡ ಪುಷ್ಪವೃಷ್ಟಿ ಮಾಡಿ ಅಭೂತಪೂರ್ವ ಸ್ವಾಗತ ನೀಡಿದರು. ಪೊಲೀಸ್ ಇಲಾಖೆಯಲ್ಲಿನ ಸೇವೆಯನ್ನು ಗುರುತಿಸಿ ಅಂದಿನ ಉಪ ಮುಖ್ಯಮಂತ್ರಿ ನವೀನ್ ಪಟೇಲ್ ಅವರ ಕೈಯಿಂದ ರವಿತೇಜ ಶ್ಲಾಘನೀಯ ಪತ್ರವನ್ನು ಸ್ವೀಕರಿಸಿದಂತವರು ನಮ್ಮೂರಿನ ವ್ಯಕ್ತಿಯೊಬ್ಬರು ಗುಜರಾತಿನಲ್ಲಿ ಇಷ್ಟೊಂದು ಖ್ಯಾತಿ ಪಡೆಯುತ್ತಿರುವುದು ಆಂಧ್ರದ ಕೋನಸೀಮೆಯ ಜನತೆಗೆ ಸಂತಸ ತಂದಿದೆ.
ಸುಧೀರ್ ವಿಧಾತ, ಶಿವಮೊಗ್ಗ