ಹಾಡಹಗಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಆಪ್ತನನ್ನೆ ಕೆಡವಿ ಕೊಂದ ರೌಡಿಗಳು
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತರಾಗಿದ್ದಂತಹ ಗ್ರ್ಯಾನೈಟ್ ಉದ್ಯಮಿ ಕೃಷ್ಣೇಗೌಡನನ್ನು ಹಾಡು ಹಗಲೆ ನಡುರಸ್ತೆಯಲ್ಲೆ ರೌಡಿಗಳು ಭೀಕರವಾಗಿ ಕೊಚ್ಚಿ ಕೊಂದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ (ಆ.09) ಹೆಚ್.ಡಿ. ರೇವಣ್ಣನವರಿಗೆ ತುಂಬಾ ಹತ್ತಿರದ ವ್ಯಕ್ತಿಯಾಗಿದ್ದ ಗ್ರ್ಯಾನೈಟ್ ಉದ್ಯಮಿ ಕೃಷ್ಣೇಗೌಡನನ್ನು ರೌಡಿಗಳ ಗ್ಯಾಂಗೊಂದು ಹತ್ಯೆ ಮಾಡಿರುವ ಪ್ರಕರಣ ಒಂದು ಹಾಸನದಲ್ಲಿ ನೆಡೆದಿದೆ.
ಯಾಕೊ ಇತ್ತೀಚೆಗೆ ಹಾಸನದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ ಮೊದಲೆಲ್ಲ ಬೆಂಗಳೂರು ಶಿವಮೊಗ್ಗ ಭದ್ರಾವತಿ ಮಂಗಳೂರು, ವಿಜಯಪುರದ ಬಿಜಾಪುರದ ಪಡುಸಾಲೆಯಲ್ಲಿ ನೆಡೆಯುತ್ತಿದ್ದ ರೌಡಿಗಳ ಗ್ಯಾಂಗ್ ವಾರ್ ಹಾಸನಕ್ಕೂ ಕಾಲಿಟ್ಟಿದೆ ಇಲ್ಲಿ ರೌಡಿ ರೌಡಿಗಳೆ ಹೊಡೆದಾಡುವುದರ ಜೋತೆಗೆ ಅಮಾಕರ ಹತ್ಯೆಗಳು ರೌಡಿಗಳಿಂದ ನೆಡೆಯುತ್ತಿದೆ ಮಲೆನಾಡು ತವರು ನಗರಿ ಶಿವಮೊಗ್ಗದ ಸರಹದ್ದಿನಲ್ಲಿ ಲಾಂಗು ಮಚ್ಚುಗಳನ್ನು ಜಳಪಿಸುತ್ತಿದ್ದ ರೌಡಿಗಳ ಕ್ಯಾಂಪೇನ್ ಹಾಸನಕ್ಕೂ ಕಾಲಿಟ್ಟಿದೆ. ಇಲ್ಲಿ ರೌಡಿಗಳ ಅಟ್ಟಹಾಸ ಮಿತಿಮೀರಿ ಹೋಗಿದೆ. ಈ ಹಾದಿಯಲ್ಲೆ ಇಂದು ಕೂಡ ( ಬುಧವಾರ) ಹಾಡುಹಗಲೇ ಹಾಸನ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಗ್ರ್ಯಾನೈಟ್ ಉದ್ಯಮಿಯನ್ನು ಮನಬಂದಂತೆ ಕೊಚ್ಚಿ ಹತ್ಯೆಮಾಡಲಾಗಿದೆ. ತಮ್ಮದೆ ಗ್ರ್ಯಾನೈಟ್ ಫ್ಯಾಕ್ಟರಿಗೆ ಎಂದಿನಂತೆ ಇಂದು ಹೋಗಿದ್ದಾರೆ. ಫ್ಯಾಕ್ಟರಿಯ ಹತ್ತಿರದ ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿ ಇಳಿದ ಕೃಷ್ಣೇಗೌಡ( 53)ರನ್ನು ಮೊದಲೇ ಸ್ಕೆಚ್ ಹಾಕಿ ಕೂಳಿತಿದ್ದ ಹಂತಕರ ಟೀಮ್ ಕ್ಷಣಾರ್ಧದಲ್ಲೆ ದಾಳಿಮಾಡಿ ಭೀಕರವಾಗಿ ಮನಬಂದಂತೆ ಕೊಚ್ಚಿ ಹತ್ಯೆಮಾಡಿ ಉಸಿರು ನಿಲ್ಲಿಸಿದ್ದಾರೆ.
ತಮಗೆ ಅರಿವಾಗುವ ಮುನ್ನವೇ ಕೃಷ್ಣೇಗೌಡರು ತಮ್ಮದೇ ಗ್ರ್ಯಾನೈಟ್ ಫ್ಯಾಕ್ಟರಿಯ ಎದುರಲ್ಲೇ ಹೆಣವಾಗಿ ಹೋಗಿದ್ದಾರೆ. ಭೀಕರ ಹತ್ಯೆಯ ಪ್ರಕರಣವೊಂದು ಹಾಸನದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡುಹಗಲೆ ಹತ್ಯೆಯೊಂದು ನೆಡೆದ ಕೆಲವೆ ಕ್ಷಣದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೂಕ್ಷ್ಮವಾಗಿ ಪರಿಶೀಲಿಸಿ ಹಂತಕರ ಬಂಧನಕ್ಕೆ ಬಲೆ ಬಿಸಿದ್ದಾರೆ.
ಈ ಹತ್ಯೆ ಯಾವಕಾರಣಕ್ಕೆ ಆಗಿದೆ ಈ ಹತ್ಯೆ ರೌಡಿಗಳಿಂದ ಆಗಿರಬಹುದ? ಮತ್ತು ಹತ್ಯೆಗೆ ಕಾರಣವೇನೆಂದು ಪೋಲಿಸರ ತನಿಖೆಯಿಂದ ಬಯಲಾಗಬೇಕಿದೆ
ಸುಧೀರ್ ವಿಧಾತ, ಶಿವಮೊಗ್ಗ