ನಾನು ಬಿಜೆಪಿಯನ್ನು ತೊರೆಯುವುದಿಲ್ಲ ಆರಗ ಜ್ಞಾನೇಂದ್ರರೇ ನಮ್ಮ ನಾಯಕರು ಎಂದು ವಸಂತಿ ಶ್ರೀನಿವಾಸ್ ಹೇಳಿದರು. ನಮ್ಮವರೆ ನಾನು ಅಧ್ಯಕ್ಷೆಯಾಗಲು ಅಡ್ಡಿಪಡಿಸಲು ಮುಂದಾದರು ಆಗ ನಾನು
ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಗ್ರಾಪಂ ಅಧ್ಯಕ್ಷಳಾಗಿದ್ದೇನೆ ಹೊರತು ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿಲ್ಲ
ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮ ಪಂಚಾಯತಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲ ಪಡೆದು ನೂತನ ಅಧ್ಯಕ್ಷರಾಗಿ ಮಂಗಳವಾರ ಆಯ್ಕೆಯಾದ ವಸಂತಿ ಶ್ರೀನಿವಾಸ್, ನಾನು ಬಿಜೆಪಿ ತೊರೆದಿಲ್ಲ, ತೊರೆಯುವುದು ಇಲ್ಲ ಎಂದಿಗೂ ನಮ್ಮ ನಾಯಕರು ಆರಗ ಜ್ಞಾನೇಂದ್ರ ಅವರೆ ಎಂದು ಹೇಳಿದ್ದಾರೆ.
ಅಧ್ಯಕ್ಷರಾಗಿ ಅಯ್ಕೆಯಾದ ಕೂಡಲೇ ಶಾಸಕ ಆರಗ ಜ್ಞಾನೇಂದ್ರ ಅವರ ಮನೆಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದ ನಂತರ ಈ ಹೇಳಿಕೆ ನೀಡಿದ್ದಾರೆ. ನಾನು ಕಾಂಗ್ರೆಸ್ ಬೆಂಬಲ ಪಡೆದು ಹಾದಿಗಲ್ಲು ಗ್ರಾಮ ಪಂಚಾಯಿತಿಯ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ
ಕೆಲವು ಪತ್ರಿಕೆಗಳಲ್ಲಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ವರದಿಮಾಡಿದ್ದಾರೆ ಹೊರತು ನಾನು ಮಾತೃ ಪಕ್ಷವನ್ನು
ಯಾವುದೇ ಕಾರಣಕ್ಕೂ ಬಿಟ್ಟಿಲ್ಲ ಬಿಡುವುದು ಇಲ್ಲ ನಮ್ಮ ನಾಯಕರು ಅರಗ ಜ್ಞಾನೇಂದ್ರ ಅವರೇ. ನಾನು ಗ್ರಾಮ ಪಂಚಾಯಿತಿ ಸದಸ್ಯಳಾಗಲು ಮತ್ತು ಈಗ ಅಧ್ಯಕ್ಷರಾಗಲು ನನ್ನ ಬೆನ್ನಿಗೆ ನಿಂತು ಸಹಕರಿಸಿ ಅವಕಾಶ ಕಲ್ಪಿಸಿ ಕೊಟ್ಟಿರುವುದು ಬಿಜೆಪಿ ಪಕ್ಷ ನಾನು ಇಂದಿಗೂ ಎಂದಿಗೂ ಬಿಜೆಪಿಯಲ್ಲೇ ಇದ್ದೇನೆ ಇರುತ್ತೇನೆ. ನಾನು ಅಧ್ಯಕ್ಷಳಾಗಲು ನಮ್ಮ ಪಕ್ಷದ ಕೆಲವರೆ ಸಾಕಷ್ಟು ಅಡ್ಡಿ ಪಡಿಸಿದ್ದರು ಆದ್ದರಿಂದ ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷಳಾಗಿದ್ದೇನೆ ಹೊರತು ಪಕ್ಷ ಬಿಟ್ಟಿಲ್ಲ ಎಂಬುದಾಗಿ ನೂತನ ಅಧ್ಯಕ್ಷರಾದ ವಸಂತಿ ಶ್ರೀನಿವಾಸ್ ಅವರು ಈ ಸ್ಪಷ್ಟಪಡಿಸಿದ್ದಾರೆ.
ಸುದೀರ್ ವಿಧಾತ, ಶಿವಮೊಗ್ಗ