ಅಧ್ಯಕ್ಷರಾಗಿ ಮತ್ತು ಉಪಧ್ಯಕ್ಷರಾಗಿ ಆಯ್ಕೆಯಾದ ಬಂಡೆ ವೆಂಕಟೇಶ್ ಮತ್ತು ಅನೀತಾ ಅವರನ್ನು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಮತ್ತು ಇನ್ನಿತರ ಕಾಂಗ್ರೆಸ್ ನಾಯಕರು ಮೇಲಿನ ಕುರುವಳ್ಳಿ ಗ್ರಾಮಪಂಚಾಯತಿಗೆ ಆಗಮಿಸಿ ಇಬ್ಬರನ್ನೂ ಅಭಿನಂದಿಸಿದರು
ಮೇಲಿನಕುರುವಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಂಡೆ ವೆಂಕಟೇಶ್ ಅಯ್ಕೆ ಆದರೆ ಉಪಾಧ್ಯಕ್ಷರಾಗಿ ಅನೀತಾ ಅವರು ಆಯ್ಕೆಯಾದರು
ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಗ್ರಾಮಪಂಚಾಯತಿಯ ಈ ಸಾಲಿನ ಅಧ್ಯಕ್ಷರ ಚುನಾವಣೆಯಲ್ಲಿ 15 ಸದಸ್ಯರ ಬಲಹೊಂದಿರುವ ಪಂಚಾಯತಿಗೆ ಅದ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ಬಲಗೈ ಬಂಟರಾಗಿರುವ ಬಂಡೆ ವೆಂಕಟೇಶ್ ಗೌಡ ಅವರು ಹದಿನೈದು ಸದಸ್ಯರು ಬಲದಲ್ಲಿ ಎಂಟು ಕಾಂಗ್ರೆಸ್ ಪಕ್ಷದ ಸದಸ್ಯರು ಒಂದು ಪಕ್ಷೇತರರ ಹಾಗೂ ಬಿಜೆಪಿಯ ಮೂರು ಸದಸ್ಯರು ಸಹ ಬಂಡೆ ವೆಂಕಟೇಶ್ ಅವರಿಗೆ ಮತ ಚಲಾಯಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆಂದು ತಿಳಿದುಬಂದಿದೆ. ಹದಿನೈದು ಸದಸ್ಯರ ಬಲದ ಗ್ರಾಮ ಪಂಚಾಯತಿಯಲ್ಲಿ ಬಂಡೆ ವೆಂಕಟೇಶ್ ಹನ್ನೆರಡು ಮತವನ್ನು ಪಡೆದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯ ಈ ಸಾಲಿನ ನೂತನ ಅಧ್ಯಕ್ಷರಾಗಿ ಅಯ್ಕೆ ಆಗಿದ್ದಾರೆ
ಅಧ್ಯಕ್ಷರಾದ ಬಂಡೆ ವೆಂಕಟೇಶ್ ಅವರಿಗೆ ಹನ್ನೆರಡು ಮತ ಬಂದರೆ
ಉಪಾಧ್ಯಕ್ಷರಾಗಿ ಆಯ್ಕೆಯಾದ ಅನೀತಾ ಅವರಿಗೆ ಒಂಬತ್ತು ಮತಗಳು ಬಂದಿದೆ
ಗುರು,ಕಮ್ಮರಡಿ