ತೀರ್ಥಹಳ್ಳಿ ತಾಲ್ಲೂಕಿನ ತ್ರಿಯಂಬಕಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಯ್ಕೆಯಾದ ಅನೀಲ್ ವಿಧಾತ, ಉಪಾಧ್ಯಕ್ಷರಾಗಿ ಲಕ್ಷ್ಮಿ ದೇವಿ
ತೀರ್ಥಹಳ್ಳಿ: ತ್ರಿಯಂಬಕಪುರ ಗ್ರಾಮಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ವಿಧಾತ ಅನಿಲ್ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದರೆ ಉಪಾಧ್ಯಕ್ಷರಾಗಿ ಲಕ್ಷೀದೇವಿ ಆಯ್ಕೆಯಾಗಿದ್ದಾರೆ.
ಆ.10 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡ ಇರ್ವರು ಮಹಿಳಾ ಸದಸ್ಯರೂ ಸೇರಿದಂತೆ ಹಾಲಿ ಬಿಜೆಪಿ ಬೆಂಬಲಿತ 8 ಮಂದಿ ಸದಸ್ಯರುಗಳಿದ್ದೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಲಾಭಿ ಮಾಡಲು ಹೊರಟ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿತ್ತಾದರೂ ಸಂಘಟನಾ ಶಕ್ತಿಯ ಮುಂದೆ ಮುಖಭಂಗಕ್ಕೀಡಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಬಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ-ಎ (ಮಹಿಳೆ) ಮೀಸಲಾತಿ ನಿಗದಿಯಾಗಿತ್ತು.ಬಿಜೆಪಿ ಬೆಂಬಲಿತರಲ್ಲೇ ಬಿಸಿಎಂ-ಎ ಮೂವರು ಮಹಿಳಾ ಸದಸ್ಯರಿದ್ದು ಉಪಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿತ್ತು.ಅಧ್ಯಕ್ಷ ಸ್ಥಾನಕ್ಕಾಗಿ ವಿಧಾತ ಅನಿಲ್ ಮತ್ತು ಹುಲ್ಲತ್ತಿ ದಿನೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಲಕ್ಷೀದೇವಿ-ರೇಖಾ ಮಂಜುನಾಥ್ ನಡುವೆ ಚುನಾವಣೆ ನಡೆದು ತಲಾ 6 ಮತಗಳಿಂದ ವಿಧಾತ ಅನಿಲ್-ಲಕ್ಷ್ಮೀದೇವಿ ಜಯಗಳಿಸಿದ್ದು 5 ಮತಗಳನ್ನು ಪಡೆದು ಹುಲ್ಲತ್ತಿ ದಿನೇಶ್-ರೇಖಾ ಮಂಜುನಾಥ್ ಪರಾಭವಗೊಂಡಿದ್ದಾರೆ.ಅನೀಲ್ ಅಧ್ಯಕ್ಷರಾಗಿ ತನ್ನ ಅವಧಿಯಲ್ಲಿ ಸಾಕಷ್ಟು ಜನಪರ ಕೇಲಸ ಮಾಡಿದ್ದಾರೆ ಗ್ರಾಮದ ಅಭಿವೃದ್ಧಿಗಾಗಿ ಹಲವು ಕಾಮಗಾರಿಗೆ ಅನೂದಾನ ತರುವಲ್ಲಿಯು ಯಶಸ್ವಿಯಾಗಿ ತ್ರಿಯಂಬಕಪುರ ಗ್ರಾಮ ಪಂಚಾಯತಿಯನ್ನು ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿಯ ಜೋತೆಗೆ ಆಡಳಿತದಲ್ಲಿಯು ಉತ್ತಮ ಗ್ರಾಮ ಪಂಚಾಯತಿ ಎಂದು ಗುರುತಿಸುವಂತೆ ಮಾಡಿದ ವಿಧಾತ ಅನೀಲ್ ಅವರದು.
ವಿಧಾತ ಅನೀಲ್ ಎರಡನೇ ಬಾರಿಗೂ ಅಯ್ಕೆಯಾಗಿದ್ದಾರೆ ಈ ಸಾಲಿನಲ್ಲೂ ತನ್ನ ಅಧಿಕಾರದ ಅವಧಿಯಲ್ಲಿ ತ್ರಿಯಂಬಕಪುರ ಗ್ರಾಮ ಪಂಚಾಯತಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಇನ್ನಷ್ಟು ಉತ್ತಮ ಕೇಲಸ ಮಾಡುವುದರೊಂದಿಗೆ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಲಿ. ಎರಡನೇ ಸರದಿಗೂ ಅಯ್ಕೆಯಾಗ ಸಹೋದರ ಮಿತ್ರ ಅನೀಲ್ ಗೆ ಅಭಿನಂದನೆಗಳು
ಸುಧೀರ್ ವಿಧಾತ, ಶಿವಮೊಗ್ಗ
Voice of common man in words