ಬಂಧಿತ ನಟರಾಜ್ ಮತ್ತು ಆತನ ಮನೆಯಲ್ಲಿ ದೊರೆತ ಬೆಳ್ಳಿ ಬಂಗಾರದ ವಸ್ತುಗಳು
ಇನ್ನೊಬ್ಬ ಆರೋಪಿ ಪವನ್
ಐದು ಲಕ್ಷ ರೂಪಾಯಿ ಲಂಚದ ಹಣ ಪಡೆಯುವಾಗಲೆ ಲೋಕಾಯುಕ್ತರ ದಾಳಿ ಬಿಬಿಎಂಪಿ ಆರ್‌ಐ ಸೇರಿ ಇಬ್ಬರ ಬಂಧನ.
ಇತ್ತೀಚೆಗೆ ಲೋಕಾಯುಕ್ತರ ತಂಡ ರಾಜ್ಯದ ಮೂಲೆ ಮೂಲೆಯಲ್ಲು ಭ್ರಷ್ಟರ ಬೇಟೆಗೆ ಮುಂದಾಗಿದೆ.ಖೆಡ್ಡಕ್ಕೆ ಕೆಡವಿ ಕೊಂಡಷ್ಟು ಭ್ರಷ್ಟರು ನಾಯಿ ಅಣಬೆಗಳ ರೀತಿಯಲ್ಲಿ ಬೆಳೆದು ನಿಂತಿದ್ದಾರೆ..! ಸರ್ಕಾರ ಕೈ ತುಂಬಾ ಸಂಬಳ ಕೊಟ್ಟರು ಏಂಜಿಲು ಕಾಸಿಗೆ ಹಡಬೆಹಣಕ್ಕೆ ಕೈ ಒಡ್ಡುವ ನೀಚ ಮನಸ್ಥಿತಿಯ ಕೆಲವು ಸರ್ಕಾರಿ ನೌಕರರು ರಾಜ್ಯದ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ರಾರಾಜಿಸುತ್ತಿದ್ದಾರೆ ಇಂತವರ ನಡುವೆ ಪ್ರಾಮಾಣಿಕ ನೌಕರರು ತಲೆ ತಗ್ಗಿಸುವಂತಾಗಿದೆ.
ಬೆಂಗಳೂರು: ಇತ್ತೀಚೆಗಷ್ಟೇ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್ ಒಂದರಲ್ಲಿನ ಫ್ಲ್ಯಾಟ್‌ಗಳಿಗೆ ಖಾತೆ ಸಂಖ್ಯೆ ನೀಡಲು ಐದು ಲಕ್ಷ ರೂಪಾಯಿ ಲಂಚ ತೆಗೆದುಕೊಳ್ಳುವ ಸಮಯಕ್ಕೆ ಸರಿಯಾಗಿ ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ನಟರಾಜ್ ಮತ್ತು ಅವರ ಪರವಾಗಿ ಹಣ ಪಡೆದ ಪವನ್ ಎಂಬ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ.
ಮುಕುಂದ್ ಡೆವಲಪರ್ಸ್ ಕಂಪನಿಯು ಕೊಡಿಗೆಹಳ್ಳಿಯಲ್ಲಿ ಬೃಂದಾವನ ಹೆಸರಿನ ಅಪಾರ್ಟ್‌ಮೆಂಟ್ ನಿರ್ಮಿಸಿದೆ. ಅದರಲ್ಲಿನ ಫ್ಲ್ಯಾಟ್‌ಗಳಿಗೆ ಖಾತೆ ಸಂಖ್ಯೆ ಕೋರಿ ಕಂಪನಿಯ ಪರವಾಗಿ ಮಂಜುನಾಥ್ ಎಂಬುವವರು ಅರ್ಜಿ ಸಲ್ಲಿಸಿದ್ದರು.ಅದರೆ ಖಾತ ಏರದ ಕಾರಣಕ್ಕೆ ರೆವಿನ್ಯೂ ಇನ್ಸ್‌ಪೆಕ್ಟರ್ ಅನ್ನು ವಿಚಾರಿಸಿದಾಗ ಆತನ ಹಣದ ದಾಹ ಬಯಲಾಗಿದೆ. ಪ್ರತಿ ಖಾತಾ ಸಂಖ್ಯೆಗೆ 10,000 ಸಾವಿರದಂತೆ ಸುಮಾರು 7.90 ಲಕ್ಷ ರೂಪಾಯಿ ಲಂಚ ನೀಡುವಂತೆ ಕಂದಾಯ ನಿರೀಕ್ಷಕ ಬೇಡಿಕೆ ಇಟ್ಟಿದ್ದಾನೆ.!ಈ ಕೆಲಸ ಮಾಡಿಕೊಡಲು ಐದು ಲಕ್ಷ ರೂಪಾಯಿಯನ್ನು ಮುಂಗಡವಾಗಿ ಕೊಡುವಂತೆ ಕೇಳಿದ್ದಾನೆ.! ಉಳಿದ ಎರಡು ಲಕ್ಷದ ತ್ತೊಂಬತ್ತು ಸಾವಿರ ರೂಪಾಯಿಯನ್ನು ಖಾತಾ ಸಂಖ್ಯೆ ನೀಡಿದ ಬಳಿಕ ಕೊಡುವಂತೆ ಅಧಿಕಾರಿ ಸೂಚಿಸಿದ್ದಾನೆ.
ಅಧಿಕಾರಿಯ ಹಣದಾಹ ಕಂಡ ಮಂಜುನಾಥ್ ಈ ಕುರಿತು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು.
‘ಬಿಬಿಎಂಪಿಯ ಮಹದೇವಪುರ ವಲಯ ಕಚೇರಿಗೆ ಶುಕ್ರವಾರ ಮಧ್ಯಾಹ್ನ ಐದು ಲಕ್ಷ ತಲುಪಿಸುವಂತೆ ನಟರಾಜ್ ಸೂಚಿಸಿದ್ದಾನೆ ಅ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತೆರಳಿದ ಮಂಜುನಾಥ್, ಕಂದಾಯ ನಿರೀಕ್ಷಕರನ್ನು ಭೇಟಿಮಾಡಿದ್ದರು. ಕಚೇರಿಯಲ್ಲಿದ್ದ ಪವನ್ ಎಂಬ ಖಾಸಗಿ ವ್ಯಕ್ತಿಗೆ ಹಣ ನೀಡುವಂತೆ ಅವರು ಸೂಚಿಸಿದರು. ದೂರುದಾರರಿಂದ ಹಣ ಪಡೆದ ಖಾಸಗಿ ವ್ಯಕ್ತಿ ಅದನ್ನು ನಟರಾಜ್‌ಗೆ ತಲುಪಿಸಿದ. ತಕ್ಷಣ ದಾಳಿಮಾಡಿದ ತನಿಖಾ ತಂಡ ಇಬ್ಬರನ್ನೂ ಬಂಧಿಸಿತು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.ನಂತರ ಲೋಕಾಯುಕ್ತ ಅಧಿಕಾರಿಗಳು ದಾಳಿಯನ್ನು ಮುಂದುವರೆಸಿ ಭಲೇಗೆ ಬಿದ್ದ ಕಂದಾಯ ನೀರಿಕ್ಷಕನ ಗಿರಿನಗರ ಸಮೀಪದ ಆವಲಹಳ್ಳಿಯಲ್ಲಿರುವ ಮನೆಯ ಮೇಲು ದಾಳಿಮಾಡಿ ಶೋಧ ಕಾರ್ಯಕ್ಕೆ ಮುಂದಾದಾಗ ಲೋಕಾಯುಕ್ತ ಪೊಲೀಸರು ಶೋಧ ನಡೆಸಿ 900 ಗ್ರಾಂ. ಚಿನ್ನ, 7 ಕೆ.ಜಿ. ಬೆಳ್ಳಿ, ಔಡಿ, ಇನ್ನೋವಾ ಕ್ರಿಸ್ಟಾ, ಹುಂಡೈ ವರ್ಣಾ ಮತ್ತು ಕಿಯಾ ಸಾನೆಟ್ ಕಾರುಗಳು ಆರೋಪಿ ಮನೆಯಲ್ಲಿ ಪತ್ತೆಯಾಗಿವೆ.
‘ಆವಲಹಳ್ಳಿಯಲ್ಲಿ ನೆಲ ಅಂತಸ್ತು ಸೇರಿದಂತೆ ನಾಲ್ಕು ಅಂತಸ್ತಿನ ಮನೆ ಇದೆ. ಪತ್ನಿಯ ಹೆಸರಿನಲ್ಲಿ ಕೊಡಿಗೆಹಳ್ಳಿಯಲ್ಲಿ ನಿವೇಶನ ಹೊಂದಿರುವ ದಾಖಲೆಯನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿಮಾಡಿ ಶುಕ್ರವಾರವೂ ಶೋಧ ಕಾರ್ಯ ಮುಂದುವರಿಸಿದ್ದರು. ಮಹದೇವಪುರ ವಲಯ ಕಚೇರಿಯಲ್ಲಿ ಶುಕ್ರವಾರ ಶೋಧ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲೆ ಲೋಕಾಯುಕ್ತ ಪೊಲೀಸರ ತಂಡ ಅಲ್ಲಿರುವ ಮಾಹಿತಿ ಇದ್ದರೂ ನಟರಾಜ್ ಅಲ್ಲಿಗೆ ಬಂದು ಲಂಚದ ಹಣ ಪಡೆದಿದ್ದರು. ಕಚೇರಿ ಶೋಧದ ಕಾರ್ಯಚರಣೆಯ ಮಧ್ಯದಲ್ಲೇ ಈ ಮಿಕಗಳನ್ನು ಖೆಡ್ಡಕ್ಕೆ ಕೆಡವಿಕೊಂಡು ಇಬ್ಬರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಧೀರ್ ವಿಧಾತ,ಶಿವಮೊಗ್ಗ