ಹತ್ಯೆಯಾದ ಸಿದ್ಧಾಪುರ ಮಹೇಶ ಮತ್ತು ಇತನ ಗುರು ಲಿಂಗ ಹಾಗೂ ವಿಲ್ಸನ್ ಗಾರ್ಡನ್ ನಾಗ
ರೌಡಿ ಶೀಟರ್ ಸಿದ್ಧಾಪುರ ಮಹೇಶ ಜೈಲಿಂದ ಬಿಡುಗಡೆಯಾಗಿ ಮನೆ ಸೇರುವ ಮುನ್ನವೇ ಬರ್ಬರವಾಗಿ ಹತ್ಯೆಯಾಗಿದ್ದಾನೆ.!!
ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಮಡದಿಯ ಜೋತೆಗೆ ಸರಿಯಾಗಿ ಸಂಸಾರ ಮಾಡುವ ಮೊದಲೇ ಮರ್ಡರ್ ಪ್ರಕರಣಕ್ಕೆ ಸಂಭಂಧಿಸಿದಂತೆ ಜೈಲು ಪಾಲಾಗಿದ್ದ ನಟೋರಿಯಸ್ ರೌಡಿ ಸಿದ್ಧಾಪುರ ಮಹೇಶ ಶುಕ್ರವಾರ ಸಂಜೆ (04/08/2023) ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅದೆಷ್ಟೋ ದಿನ ಮಡದಿಯನ್ನು ನೋಡದೆ ಇದ್ದ ಕಾರಣಕ್ಕೆ ಆಕೆಯನ್ನು ನೋಡವ ತರಾತುರಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ರೌಡಿ ಶೀಟರ್ ಸಿದ್ದಾಪುರ ಮಹೇಶನನ್ನು ಹೊಸೂರು ಜಂಕ್ಷನ್ ಬಳಿ ಅಡ್ಡಗಟ್ಟಿದ ಈತನ ವಿರೋಧಿ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ…!!
ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ
ಅಂದಿನ ಜಯನಗರ ಠಾಣೆಯ ಖಡಕ್ ಇನ್‌ಸ್ಪೆಕ್ಟರ್ ಸುದರ್ಶನ್
ಅಂದು ಜಯನಗರ ಠಾಣೆಯ ಖಡಕ್ ಇನ್‌ಸ್ಪೆಕ್ಟರ್ ಸುದರ್ಶನ್ ಅವರು ಸಿದ್ಧಾಪುರ ಮಹೇಶನ ಕಾಲಿಗೆ ಗುಂಡು ತೂರಿಸಿದ್ದರು.!
ಅಂದು ವಿಲ್ಸನ್ ಗಾರ್ಡನ್ ನಾಗನ ಹಿಟ್ ಲಿಸ್ಟ್ ನಲ್ಲಿರುವ ಮಹೇಶ್‌ಗೆ ಜೈಲಿನಲ್ಲಿರುವುದ ಸೇಫ್ ಅನ್ನಿಸಿತ್ತು. ಹೀಗಾಗಿ ಮಹೇಶ ಆಯ್ಕೆ ಮಾಡಿಕೊಂಡಿದ್ದು ನಾಗನಿಗೆ ಫೈನಾನ್ಸ್ ಮಾಡ್ತಿದ್ದ ಮದನ್ ಹತ್ಯೆ ಸ್ಕೆಚ್.ಅಂದು ಬನಶಂಕರಿ ಮೆಟ್ರೋ ಸ್ಟೇಷನ್ ಬಳಿ ಇದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಮದನ್ ನನ್ನು ಕೊಲೆ ಮಾಡಿದ್ದ.ಅಂದು ಮಹೇಶನಿಗೆ ಸಾಥ್ ನೀಡಿದ್ದು ಎಸ್.ಆರ್. ನಗರದ ಗಿರಿ, ಪ್ರಕಾಶ್ ತಲೆಮರೆಸಿಕೊಂಡಿದ್ದ ಇವರನ್ನು ಹಿಡಿಯಲು ಅಂದಿನ ಜಯನಗರ ಪೊಲೀಸ್ ಠಾಣೆಯ ಖಡಕ್ ಇನ್‌ಸ್ಪೆಕ್ಟರ್ ಸುದರ್ಶನ್ ಅವರು. ಮಹೇಶ್‌ನನ್ನು ಬಂಧಿಸಲು ಬೆನ್ನು ಹತ್ತಿದ ಇನ್‌ಸ್ಪೆಕ್ಟರ್ ಸುದರ್ಶನ್ ಅವರು ತಮ್ಮ ಸೊಂಟದಲ್ಲಿದ್ದ ರಿವಲ್ವಾರ್ ಗೆ ಕೆಲಸ ಕೊಟ್ಡಿದ್ದರು ಬಂಧಿಸಲು ಹೋದ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಮಹೇಶನ ಕಾಲಿಗೆ ಇನ್‌ಸ್ಪೆಕ್ಟರ್ ಸುದರ್ಶನ್ ನೆರವಾಗಿ ಗುಂಡು ಹೊಡೆದು ಹಾಸಿಗೆಯಲ್ಲಿ ಮಲಗಿಸಿದ್ದರು. ಬೆಂಗಳೂರಿನಲ್ಲಿ ತನ್ನ ಮಿತ್ರಪಡೆ ರೌಡಿಗಳನ್ನು ಒಗ್ಗೂಡಿಸಿ ನಾಯಕನಾಗಲು ಹೊರಟಿರುವ ವಿಲ್ಸನ್ ಗಾರ್ಡನ್ ನಾಗ ಸ್ಕೆಚ್ ಹಾಕಿದರೆ ಸದ್ಯಕ್ಕೆ ಉಳಿಯುವುದೇ ಕಷ್ಟ ಎಂಬ ಮಾತು ಭೂಗತ ಲೋಕದಲ್ಲಿ ಚಾಲ್ತಿಯಲ್ಲಿತ್ತು.ನಾನು ಹೀಗಾಗಿ ಹೊರಗೆ ಇರುವುದಕ್ಕಿಂತಲೂ ಜೈಲಿನಲ್ಲಿರುವುದು ಸೇಫ್ ಎಂದ ತಿಳಿದು ಮದನ್‌ನನ್ನು ಹತ್ಯೆ ಮಾಡಿದ್ದಾಗಿ ರೌಡಿ ಮಹೇಶ್ ಅಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾ
ಅಂದು ಜಯನಗರ ಠಾಣೆಯ ಖಡಕ್ ಇನ್‌ಸ್ಪೆಕ್ಟರ್ ಆಗಿದ್ದ ಸುದರ್ಶನ್ ತಮ್ಮ ಠಾಣ ಸರಹದ್ದಿನ ರೌಡಿಗಳನ್ನು ಹೆಡೆಮುರಿಕಟ್ಟಲು ಮುಂದಾಗಿದ್ದರು.ಇವರ ಅವಧಿಯಲ್ಲಿ ರೌಡಿಗಳು ಜಯನಗರ ಠಾಣೆಯ ಸರಹದ್ದನ್ನು ಬಿಟ್ಟು ಬೇರೆ ಏರಿಯಾಗಳಿಗೆ ಪಲಾಯನ ಗೈದಿದ್ದರು
ಅಂದು ಜಯನಗರ ಠಾಣೆಯ ಇನ್‌ಸ್ಪೆಕ್ಟರ್ ಸುದರ್ಶನ್ ಅವರ ಗುಂಡಿನೆಟಿಗೆ ಹಾಸಿಗೆಯ ಮೇಲೆ ಮಲಗಿರುವ ಸಿದ್ಧಾಪುರ ಮಹೇಶ
ಸಿದ್ಧಾಪುರ ಮಹೇಶನ ಹತ್ಯೆಯ ಹಿಂದಿನ ಸಂಪೂರ್ಣ ವರದಿ…
ಬೆಂಗಳೂರು : ಈ ಹಿಂದೆ ನೆಡೆದ ಹತ್ಯೆಯೊಂದರ ಪ್ರಕರಣಕ್ಕೆ ಸಂಭಂಧಿಸಿದಂತೆ ಹಳೇಯ ದ್ವೇಷದ ಹಿನ್ನೆಲೆಯಲ್ಲಿ ಸಿದ್ಧಾಪುರ ಮಹೇಶನನ್ನು ಮುಗಿಸಲು ಹೊಂಚುಹಾಕಿ ಕುಳಿತಿದ್ದರು ಹಂತಕರು.! ಜೈಲಿನಿಂದ ಹೊರಬಂದ ನಟೋರಿಯಸ್ ರೌಡಿ ಸಿದ್ಧಾಪುರ ಮಹೇಶನನ್ನು
ಕೆಲವೇ ಕ್ಷಣಗಳಲ್ಲಿ ಹಂತಕರ ಗ್ಯಾಂಗ್ ಹತ್ಯೆಗೈದು ಪರಾರಿಯಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಶುಕ್ರವಾರ ರಾತ್ರಿ ನೆಡೆದಿದೆ. ಕೊಲೆಯಾದವನು ರೌಡಿ ಶೀಟರ್ ಸಿದ್ದಾಪುರ ಮಹೇಶ. ಎರಡು ತಿಂಗಳ ಹಿಂದಷ್ಟೇ ಉದ್ಯಮಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಮಹೇಶ್ ಶುಕ್ರವಾರ ಜಾಮೀನು ಸಿಕ್ಕ ಕಾರಣಕ್ಕೆ ಬಿಡುಗಡೆಗೊಂಡಿದ್ದ.ಬಿಡುಗಡೆಗೊಂಡ ಖಷಿಯಲ್ಲಿ ಮಡದಿಯನ್ನು ನೋಡಲು ಮನೆಗೆ ತೆರಳುತ್ತಿದ್ದ ವೇಳೆ ಹೊಸೂರು ಜಂಕ್ಷನ್ ಬಳಿ ಮಹೇಶ ಬರುವುದನ್ನು ಖಚಿತಪಡಿಸಿಕೊಂಡಿದ್ದ ವಿರೋಧಿ ಗ್ಯಾಂಗ್ ಆತನನ್ನು ಅಡ್ಡಗಟ್ಟಿ ಲಾಂಗು ಮಚ್ಚುಗಳನ್ನು ಮನಬಂದಂತೆ ಬಿಸಿ ಹತ್ಯೆಗೈದು ಪರಾರಿಯಾಗಿದ್ದಾರೆ….!
ಇತ್ತೀಚೆಗೆ ನಟೋರಿಯಸ್ ರೌಡಿ ಮಹೇಶನಿಗೆ ಮುಗಿಸಲು ವಿರೋಧಿಗಳ ಸಂಖ್ಯೆಯು ಹೆಚ್ಚಾಗಿತ್ತು. ಇಲ್ಲಿ ಯಾವ ಕಾರಣಕ್ಕೆ ಆತನ ಕೊಲೆಯಾಗಿದೆ ಎಂದು ಸ್ಪಷ್ಟವಾಗಿಲ್ಲ ತಿಳಿಯದಂತಾಗಿದೆ. ಆದರೆ 2019ರಲ್ಲಿ ಜಯನಗರದ ಮದನ್ ಅವರನ್ನು ಬನಶಂಕರಿ ದೇವಸ್ಥಾನದ ಹತ್ತಿರ ಕೊಲೆ ಮಾಡಲಾಗಿತ್ತು ಈ ಹತ್ಯೆ ಪ್ರಮುಖ ಆರೋಪಿ ಸಿದ್ಧಾಪುರ ಮಹೇಶ.( ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಮಹೇಶ ) ನನ್ನು ಈ ಹತ್ಯೆಗೆ ಸಂಭಂಧಿಸಿದಂತೆ ಹತ್ಯೆಮಾಡಿರ ಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನಟೋರಿಯಸ್ ರೌಡಿ ಸಿದ್ದಾಪುರ ಮಹೇಶನ ಮರ್ಡರ್ ಹಿಂದೆ ವಿಲ್ಸನ್ ಗಾರ್ಡನ್ ನಾಗನ ಕೈವಾಡ ?
ಸಿದ್ದಾಪುರ ಮಹೇಶನ ಕೊಲೆ ಹಿಂದೆ ರಾಜಧಾನಿ ಕಂಡ ಮತ್ತೊಬ್ಬ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಕೈವಾಡ ಶಂಕೆ ವ್ಯಕ್ತವಾಗಿದ್ದೆ..! ರೌಡೀಶೀಟರ್ ನಾಗ ಹಾಗೂ ಡಬಲ್ ಮೀಟರ್ ಮೋಹನ ಸೇರಿಕೊಂಡು ಈ ಹಿಂದೆ ಶಾಂತಿನಗರದ ಲಿಂಗನ ಮರ್ಡರ್ ಮಾಡಿದ್ದರು. ಈ ಲಿಂಗನ ಹತ್ಯೆಯ ಹಿಂದೆ ಉದ್ಯಮಿ ಮದನ್ ಹಣ ಕೆಲಸಮಾಡಿತ್ತು ಎಂದು ಸುದ್ದಿ ಹರಡಿತ್ತು. ಆ ಕ್ಷಣದಲ್ಲಿ ಕೇರಳಿದ ಹತ್ಯೆಯಾದ ಲಿಂಗನ ಶಿಷ್ಯ ಗುರುವಿನ ಹತ್ಯೆಮಾಡಿದವರನ್ನು ಬಿಟ್ಟು ಹತ್ಯೆಗೆ ಡೀಲ್ ಕೊಟ್ಟ ಉದ್ಯಮಿ ಮದನ್ ನನ್ನು ಮುಗಿಸಲು ಸ್ಕೆಚ್ ಹಾಕಿದ್ದ ಸಿದ್ಧಾಪುರ ಮಹೇಶ, ಹೀಗಾಗಿ ಗುರುವಿನ ಕೊಲೆಯ ರಿವೇಂಜ್ ಗೆ ಸಿದ್ದಾಪುರ ಮಹೇಶ ಅಂಡ್ ಗ್ಯಾಂಗ್ ಉದ್ಯಮಿ ಮದನ್ ನನ್ನು ಬನಶಂಕರಿ ದೇವಸ್ಥಾನದ ಸಮೀಪ ಹತ್ಯೆ ಮಾಡಿದ್ದರು, ಆ ಕ್ಷಣದಿಂದಲೆ ತನ್ನ ಕಡೆಯವರನ್ನು ಕೆಡವಿ ಕೊಂದಿದ್ದಕ್ಕೆ ಸಿದ್ದಾಪುರ ಮಹೇಶನ ಮೇಲೆ ವಿಲ್ಸನ್ ಗಾರ್ಡನ್ ನಾಗನ ಕಣ್ಣಿತ್ತು. ತನ್ನ ಗುರು ಲಿಂಗನನ್ನು ಕೊಂದ ವಿಲ್ಸನ್ ಗಾರ್ಡನ್ ನಾಗನನ್ನು ಮುಗಿಸುವುದಾಗಿ ಮರ್ಡರ್ ಅದ ಸಿದ್ದಾಪುರ ಮಹೇಶ ಕೂಡ ಸ್ಕೆಚ್ ಹಾಕಿ ಕುಳಿತಿದ್ದನಂತೆ.! ಒಟ್ಟಿನಲ್ಲಿ ಎರಡು ಗ್ಯಾಂಗ್ ಗಳ ನಡುವೆ ರಿವೆಂಜಿನ ನಂಜು ಕಾರುತ್ತಿತ್ತು. ಇದು ವಿಲ್ಸನ್ ಗಾರ್ಡನ್ ನಾಗನಿಗೆ ನಿದ್ದೆಕೆಡಿಸಿತ್ತು . ಪ್ರತಿ ಕ್ಷಣ ಮಹೇಶನ ಮೇಲೆ ಹದ್ದಿನ ಕಣ್ಣಿಟ್ಟಿದ್ದ ನಾಗ ಜೈಲಿನಿಂದ ರೀಲಿಸ್ ಆಗಿ ಮನೆಗೆ ತೆರಳುತ್ತಿದ್ದ ಸಿದ್ದಾಪುರ ಮಹೇಶನನ್ನು ಇನ್ನೊವಾ ಕಾರಿನಲ್ಲಿ ಬಂದಿದ್ದ ವಿಲ್ಸನ್ ಗಾರ್ಡನ್ ನಾಗನ ಸಹಚರರು ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ!?
ಈ ಹತ್ಯೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ ಐ ಆರ್ ದಾಖಲು
ನಟೋರಿಯಸ್ ರೌಡಿ ಸಿದ್ಧಾಪುರ ಮಹೇಶನ ಹತ್ಯೆಗೆ ಸಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 302,120b,143,147,148, 343,327,149 ಅಡಿಯಲ್ಲಿ ವಿಲ್ಸನ್ ಗಾರ್ಡನ್ ನಾಗ ಮತ್ತು ಇತನ ಸಹಚರರಾದ ಡಬಲ್ ಮೀಟರ್ ಮೋಹನ, ಸಿದ್ಧಾಪುರ ಸುನೀಲ ಸೇರಿದಂತೆ ಇತರರ ವಿರುದ್ಧ ಮರ್ಡರ್ ಕೇಸ್ ದಾಖಲಾಗಿದೆ.
ಜೈಲಿನಿಂದ ಮಹೇಶ್ ಬೆಲ್ ಸಿಕ್ಕಿ ಹೊರ ಬರುವುದನ್ನು ಖಾತ್ರಿಮಾಡಿಕೊಂಡಬಹಂತಕರ ಪಡೆ ಮಹೇಶನನ್ನು ಕೊಲ್ಲಲು ದೊಡ್ಡ ಮಟ್ಟದ ಸ್ಕೆಚ್ ಹಾಕಿದ್ದರು ಇದಕ್ಕಾಗಿ ಹಂತಕ ಪಡೆ ಐದು ತಂಡಗಳಾಗಿ ಕಾದು ಕುಳಿತಿದ್ದರಂತೆ..! ಒಂದೊಂದು ತಂಡವು ಒಂದೊಂದು ರಸ್ತೆಯಲ್ಲಿ ಸ್ಕೆಚ್ ಹಾಕಿ ಬೀಟ್ ಹೊಡೆಯುತ್ತಿದ್ದರಂತೆ.! ಪರಪ್ಪನ ಅಗ್ರಹಾರ ಜೈಲಿನ ಹೊರ ಅವರಣ ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಯ ರಸ್ತೆ ಬೇಗೂರು ವೃತ್ತದ ಸಿಗ್ನಲ್ ನಲ್ಲಿ ಹಂತಕ ಪಡೆ ಮಹೇಶನನ್ನು ಮುಗಿಸಲು ಆಲರ್ಟ್ ಆಗಿದ್ದರಂತೆ.! ಮಹೇಶನೊಬ್ಬನನ್ನು ಕೆಡವಲು ಮೂವತ್ತೈದಕ್ಕೂ ಹೆಚ್ಚು ಮಂದಿ ಹಂತಕರ ಟೀಮು ರಸ್ತೆಯಲ್ಲಿ ಕಾದು ಕುಳಿತಿದ್ದರಂತೆ. ಮಹೇಶ ಬಿಡುಗಡೆಯಾಗುವ ಪರಪ್ಪನ ಅಗ್ರಹಾರ ಜೈಲಿನಿಂದ ಆತನ ಮನೆ ಇರುವ ಸಿದ್ಧಾಪುರದ ರಸ್ತೆ ಉದ್ದಕ್ಕೂ ಹಂತಕರ ಗ್ಯಾಂಗಿನ ಸದಸ್ಯರು ಪಾಯಿಂಟ್ ಮಾಡಿಕೊಂಡು ಕಾದು ಕುಳಿತಿದ್ದರಂತೆ..!! ಮಹೇಶ ಒಂದು ಕಡೆ ಮಿಸ್ ಆದ್ರು ಮತ್ತೊಂದು ಕಡೆ ಅಟ್ಯಾಕ್ ಮಾಡಿ ಕೆಡವಲು ಸರ್ವ ತಯಾರಿ ಮಾಡಿಕೊಂಡಿದ್ದರಂತೆ. ಮಹೇಶ ಜೈಲಿನಿಂದ ಹೊರ ಬಂದವನು ಕಾರಿನಲ್ಲಿ ಮನೆಗೆ ಹೋಗುವುದನ್ನು ತಿಳಿದ ಹಂತಕರ ಗ್ಯಾಂಗ್ ಮಹೇಶನ ಮೇಲೆ ನಿಗಾ ಇಡಲು ಹೊಸ ಹುಡುಗರ ತಂಡವನ್ನೆ ರಡಿಮಾಡಿ ಅವರಿಗೆ ಹೆಲ್ಮೆಟ್ ಹಾಕಿಸಿ ಅವನ ಕಾರನ್ನು ಹಬಾಲಿಸಲು ಮೂರು ಬೈಕ್ ಗಳನ್ನು ಕೊಟ್ಟಿದ್ದರಂತೆ ಒಟ್ಟಿನಲ್ಲಿ ನಟೋರಿಯಸ್ ರೌಡಿ ಶೀಟರ್ ಮಹೇಶನನ್ನು ಕೊಲೆಮಾಡಲು ಮಿಸ್ ಆಗದ ರೀತಿಯಲ್ಲಿ ಫ್ಲಾನ್ ಮಾಡಿಕೊಂಡಿದ್ದರಂತೆ..!
ರೌಡಿಶೀಟರ್ ಸಿದ್ದಾಪುರ ಮಹೇಶ ಮದುವೆಯಾಗಿ ಒಂದು ತಿಂಗಳು ಕೂಡ ಆಗಿರಲಿಲ್ಲ, ಸಿದ್ದಾಪುರ ಮಹೇಶ ತಾನು ಅಂದುಕೊಂಡಂತೆ ಪ್ರೀತಿಸಿದ ಹುಡುಗಿಯನ್ನೆ ಮದುವೆಯಾಗಿದ್ದ. ಮದುವೆ ಅದ ತಕ್ಷಣವೇ ಜುಲೈ 9 ನೇ ತಾರಿಖು ಮತ್ತೆ ಜೈಲಿಗೆ ವಾಪಸ್ ಹೋಗಿದ್ದ. ಕಾರಣ ವಿಲ್ಸನ್ ಗಾರ್ಡನ್ ನಾಗನಿಗೆ ಹೆದರಿಕೊಂಡು.? ಭಯದಿಂದಲೆ ಮತ್ತೆ ಜೈಲು ಸೇರಿದ್ದ. ಮತ್ತೆ ಹೆಂಡತಿಯನ್ನು ನೋಡುವ ಸಲುವಾಗಿ ಮತ್ತೆ ಹೊರ ಬಂದಿದ್ದ ಮಹೇಶನನ್ನು ವಿಲ್ಸನ್ ಗಾರ್ಡನ್ ನಾಗನ ಸಹಚರರು ಅಟ್ಯಾಕ್ ಮಾಡಿ ಮತ್ತೆ ಎಳದ ಹಾಗೆ ಕತ್ತರಿಸಿ ಹಾಕಿದ್ದಾರೆ.
ಪಾತಕಲೋಕದ ನೆತ್ತರ ಕಲೆ ಅಂಟಿಸಿಕೊಂಡ ಮಹೇಶ ಸುಮ್ಮನೆ ಕೂರಲಿಲ್ಲ ಎಲ್ಲೆಂದರಲ್ಲಿ ತನ್ನ ಹಾವಳಿ ಶುರುವಿಟ್ಟುಕೊಂಡಿದ್ದ
ಹಲವು ವರ್ಷಗಳಿಂದ ಪಾತಕಲೋಕದಲ್ಲಿ ಮಹೇಶ್ ಸಕ್ರಿಯ ನಾಗಿದ್ದ ಆತನ ಮೇಲ, ಸಿದ್ದಾಪುರ, ಜಯನಗರ, ವಿಲ್ಸನ್ ಗಾರ್ಡನ್ ಹಾಗೂ ತಲಘಟ್ಟಪು ಮತ್ತು ಜೆ.ಪಿ.ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಹಾಗೂ ಜೀವ ಬೆದರಿಕೆ ಸೇರಿ ಇನ್ನಿತರ ಸಾಕಷ್ಟು ಪ್ರಕರಣಗಳು ಇತನ ಮೇಲೆ ದಾಖಲಾಗಿವೆಯಂತೆ. ಈ ಹಿನ್ನಲೆಯಲ್ಲಿ ಸಿದ್ದಾಪುರ ಠಾಣೆಯಲ್ಲಿ ಆತನ ಮೇಲೆ ರೌಡಿಶೀಟ್ ಕೂಡ ತೆರೆಯಲಾಗಿತ್ತು. ಒಟ್ಟಿನಲ್ಲಿ ಪಾತಕಲೋಕದಲ್ಲಿ ಸಕ್ರಿಯನಾಗಿದ್ದ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದ ಮಹೇಶ್ ಜಾಮೀನು ಪಡೆದು ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಜೈಲಿನಿಂದ ಹೊರಬಂದಿದ್ದಾನೆ. ಅಲ್ಲಿಂದ ಆನೇಕಲ್‌ನಲ್ಲಿರುವ ತನ್ನ ಮನೆಗೆ ಕಾರಿನಲ್ಲಿ ಹೋಗುವಾಗ ಹೊಸೂರು ಜಂಕ್ಷನ್ ಬಳಿ ಮಹೇಶನನ್ನು ಅಟ್ಯಾಕ್ ಮಾಡಿದ ಹಂತಕರ ಪಡೆ ಮನಬಂದಂತೆ ಕೊಚ್ಚಿ ಕೊಂದಿದ್ದಾರೆ.ಈ ಹತ್ಯೆಗೆ ಸಂಭಂಧಿಸಿದಂತೆ ಪರಪ್ಪನ ಅಗ್ರಹಾರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಮಹೇಶನ ಹತ್ಯೆಗೆ ಸಂಭಂಧಿಸಿದಂತೆ ಕೆಲವರನ್ನು ಪೋಲಿಸರು ಬಂಧಿಸಿದ್ದು ಪ್ರಮುಖ ಆರೋಪಿಗಳ ಬಂದನಕ್ಕಾಗಿ ಭಲೇ ಬಿಸಿದ್ದಾರೆ.
ಸುಧೀರ್ ವಿಧಾತ, ಶಿವಮೊಗ್ಗ