ದೂರು ದಾಖಲಿಸಿದ ಸೌಜನ್ಯ ತಾಯಿ ಕುಸುಮಾವತಿ
ಧರ್ಮಸ್ಥಳ : ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಸೌಜನ್ಯಾ ತಾಯಿ: ನನ್ನ ಮತ್ತು ನನ್ನ ಮಗನ ಮೇಲೆ ಹಲ್ಲೆಗೈದು ಬೆದರಿಕೆ ಒಡ್ಡಿದ್ದಾರೆ ಎಂದು ದೂರು ದಾಖಲು..!
ಧರ್ಮಸ್ಥಳ: ಸೌಜನ್ಯಾ ತಾಯಿ ಹಾಗೂ ಸಹೋದರನ ಮೇಲೆ ಹಲ್ಲೆಗೈದು ಬೆದರಿಕೆ ಒಡ್ಡಿರುವ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕಾರ ದಾಖಲಾಗಿದೆ.
ಸೌಜನ್ಯ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಂ ಅವರ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಘಟನೆ ಕಾರಣಶುಕ್ರವಾರ ಉಜಿರೆಯಲ್ಲಿ ಧರ್ಮಸ್ಥಳದ ವಿವಿಧ ಸಂಘ ಸಂಸ್ಥೆಗಳು ಮತ್ತು ಅಖಿಲ ಕರ್ನಾಟಕ ಮಂಜುನಾಥ ಸ್ವಾಮಿ ಭಕ್ತ ವೃಂದದವರಿಂದ ಸೌಜನ್ಯ ಹತ್ಯೆ ಆರೋಪಿಗಳನ್ನು ಪತ್ತೆಹಚ್ಚಬೇಕು ಮತ್ತು ಮುಖ್ಯವಾಗಿ ಧರ್ಮಸ್ಥಳದ ಕ್ಷೇತ್ರದ ಮತ್ತು ವೀರೇಂದ್ರ ಹೆಗ್ಗಡೆಯವರ ವಿರುದ್ಧದ ಅಪ ಪ್ರಚಾರವನ್ನು ನಿಲ್ಲಿಸಬೇಕೆಂದು ದೊಡ್ಡ ಮಟ್ಟದಲ್ಲಿ ಸಮಾವೇಶವನ್ನು ಒಗ್ಗೂಡಿ ಆಯೋಜಿಸಲಾಗಿತ್ತು. ಈ ಸಂಬಂಧ ಭಾರಿ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು. ಉಜಿರೆ ಬೆಳ್ತಂಗಡಿ ವ್ಯಾಪ್ತಿಯ ಧರ್ಮಸ್ಥಳಕ್ಕೆ ಸಂಬಂಧಪಟ್ಟ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಶಾಲೆಗಳನ್ನು ಕೂಡ ರಜೆ ಘೋಷಿಸಿ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಿದ್ದರು. ಪ್ರತಿಭಟನೆ ನೆಡೆಯುವ ಸಂದರ್ಭಕ್ಕೆ ಸರಿಯಾಗಿ ಸೌಜನ್ಯ ತಾಯಿ, ತಮ್ಮ, ಸಹೋದರಿಯರು ಕೂಡಾ ಅ ಸ್ಥಳಕ್ಕೆ ತೆರಳಿದ್ದರು.ನಂತರ ಸೌಜನ್ಯ ತಾಯಿ ವೇದಿಕೆ ಹತ್ತಲು ಮುಂದಾದಾಗ ಆಯೋಜಕರು ಅವರನ್ನು ತಡೆಯುತ್ತಾರೆ. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಸೌಜನ್ಯ ತಾಯಿ ಹಾಗೂ ತಮ್ಮನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂದು ಸೌಜನ್ಯ ತಾಯಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.!
ವ್ಯಕ್ತಿಯೊಬ್ಬ ಅವರನ್ನು ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ ಚೂಡಿದಾರದ ಶಾಲು ಎಳೆದಿರುವ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆಯಂತೆ..! ಈಗ ಈ ಪ್ರಕರಣದ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕುಸುಮಾವತಿಯವರ ಮಗ ಜಯರಾಮನಿಗೂ ಹಲ್ಲೆ ಮಾಡಿದ ಬಗ್ಗೆ ದೂರು ದಾಖಲಾಗಿದೆ. ಈಗ ಐಪಿಸಿ 1860, 341, 354, 323, 34 ಸೆಕ್ಷನ್ ಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಧರ್ಮಸ್ಥಳದ ಕ್ಷೇತ್ರದ ಮತ್ತು ವೀರೇಂದ್ರ ಹೆಗ್ಗಡೆಯವರ ವಿರುದ್ಧದ ಅಪ ಪ್ರಚಾರವನ್ನು ನಿಲ್ಲಿಸಬೇಕು ಮತ್ತು
ಸೌಜನ್ಯ ಅತ್ಯಾಚಾರಿಗಳು ಹಾಗೂ ಕೊಲೆ ಪಾತಕಿಗಳನ್ನು ಮರು ತನಿಖೆ ಮಾಡಿ ಬಂಧಿಸ ಬೇಕೆಂದು ಹೋರಾಟ ಮಾಡುತ್ತಿದ್ದ ವೇದಿಕೆಯಲ್ಲಿ ಸೌಜನ್ಯನನ್ನು ಹೆತ್ತ ತಾಯಿಗೆ ಏಕೆ ಅವಕಾಶವಿಲ್ಲ ಎನ್ನುವುದು ಮಾತ್ರ ತಿಳಿಯದಾಗಿದೆ?
ಸುಧೀರ್ ವಿಧಾತ, ಶಿವಮೊಗ್ಗ