ಇನ್ಸ್ ಪೆಕ್ಟರ್ ಗಳ ವರ್ಗಾವಣೆ: ಶಿವಮೊಗ್ಗ ನಗರ ತುಂಗಾನಗರ ಠಾಣೆಗೆ ಖಡಕ್ ಇನ್ಸೆಕ್ಟರ್ ಕೆ.ಟಿ ಗುರುರಾಜ್ ಆಗಮನ.
ಅಶ್ವಸೂರ್ಯ/ಶಿವಮೊಗ್ಗ: ರಾಜ್ಯ ಸರ್ಕಾರ ಪೊಲೀಸ್
ಇಲಾಖೆಯಲ್ಲಿ ವರ್ಗಾವಣೆ ಮಾಡುವ ಮುಖಾಂತರ ಮೇಜರ್ ಸರ್ಜರಿ ಮಾಡಿದೆ. ಒಟ್ಟು 15ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯಲ್ಲಿ ಶಿವಮೊಗ್ಗದ ಶಿವಮೊಗ್ಗ ಸಿಇಎನ್ ಹಾಗೂ ತುಂಗಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಕಂಡ ಖಡಕ್ ಇನ್ಸ್‌ಪೆಕ್ಟರ್ ಗಳಲ್ಲಿ ಒಬ್ಬರಾದ ದೀಪಕ್ ಎಂ ಎಸ್ ಇವರನ್ನು ವರ್ಗಾವಣೆ ಮಾಡಲಾಗಿದ್ದು ಸ್ಥಳ ತೋರಿಸದ ಹಿನ್ನಲೆಯಲ್ಲಿ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಇನ್ನೂ ಇನ್ಸ್‌ಪೆಕ್ಟರ್ ಕೆ ಟಿ ಗುರುರಾಜ್ ಅವರ ಬಗ್ಗೆ ಹೇಳಬೇಕೆಂದರೆ ಇವರ ಪ್ರಾಮಾಣಿಕ ಸೇವೆಗೆ “ಸೈಬರ್ ಪೋಲೀಸ್ “award” ಕೂಡ ಲಭಿಸಿದೆ. ಕೆ.ಟಿ.ಗುರುರಾಜ್ ಹಾಲಿ ಕಡೂರು ಪೊಲೀಸ್ ಟ್ರೈನಿಂಗ್ ಸೆಂಟರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.ಈಗ ವರ್ಗಾವಣೆಗೊಂಡು ಮರಳಿ ಶಿವಮೊಗ್ಗಕ್ಕೆ ವಾಪಸಾಗುತ್ತಿದ್ದಾರೆ. ಶಿವಮೊಗ್ಗ ಕಂಡ ಖಡಕ್ ಅಧಿಕಾರಿಗಳಲ್ಲಿ ಕೆ ಟಿ ಗುರುರಾಜ್ ಕೂಡ ಒಬ್ಬರಾಗಿದ್ದಾರೆ. ರಾಜ್ಯದ ದಕ್ಷ ರಕ್ಷಣಾಧಿಕಾರಿಗಳಲ್ಲಿ ಮುಂಚೂಣಿಯಲ್ಲಿರುವ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಧರ್ಭದಲ್ಲಿ ಕೆ.ಟಿ ಗುರುರಾಜ್ ದೊಡ್ಡಪೇಟೆ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.ಅಂದು ಸಾಕಷ್ಟು ಪ್ರಕರಣವನ್ನು ಭೇದಿಸಿದ ಹಿರಿಮೆ ಇವರದಾಗಿತ್ತು. ಇವರ ಹೆಸರು ಕೇಳಿದರೆ ಕ್ರಿಮಿನಲ್ ಗಳಿಗೆ ನಡುಕ ಶುರುವಾಗುತ್ತಿತ್ತು.
ದಕ್ಷ , ಖಡಕ್ ಅಧಿಕಾರಿಯಾಗಿರುವ ಕೆ.ಟಿ ಗುರುರಾಜ್ ಮತ್ತೊಮ್ಮೆ ಶಿವಮೊಗ್ಗ ನಗರಕ್ಕೆ ಎಂಟ್ರಿಕೊಡುತ್ತಿದ್ದು ಅದರಲ್ಲೂ ತುಂಗಾನಗರ ವ್ಯಾಪ್ತಿಯಲ್ಲಿ ಎತೇಚ್ಚವಾಗಿ ನೆಡೆಯುತ್ತಿರುವ ಅಕ್ರಮ ಚಟುವಟಿಕೆಗಳೆ ಬ್ರೇಕ್ ಬಿಳಲಿದೆ.
ಕೆ.ಟಿ.ಗುರುರಾಜ್ ಅವರು ಈ ಹಿಂದೆ ಶಿವಮೊಗ್ಗದ ಸೈಬರ್ ಕ್ರೈಮ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಅಲ್ಲೂ ತಮ್ಮ ಚಾಕಚಕ್ಯತೆಯನ್ನು ತೋರಿಸಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಇಂಟರ್ ನೆಟ್ ಗೆ ಅಪ್ಲೋಡ್ ಮಾಡುತ್ತಿದ್ದ ಶಿಕ್ಷಕನೊಬ್ಬನನ್ನು ಬಂಧಿಸಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.ಇವರ ಸೈಬರ್ ಪೋಲಿಸ್ ಸೇವೆಗೆ “ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ” ಖಡಕ್ ಅಧಿಕಾರಿಗಳನ್ನು ಗುರುತಿಸಿಕೊಡುವ ವರ್ಷದ ಸೈಬರ್ ಕಾಪ್ (ಸೈಬರ್ ಕಾಪ್ ಪ್ರಶಸ್ತಿ) ಕೆ.ಟಿ.ಗುರುರಾಜ್ ಅವರಿಗೆ ಲಭಿಸಿತ್ತು.
ಇದು ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿತ್ತು.ಈ ಪ್ರಶಸ್ತಿಯನ್ನು ಹರಿಯಾಣದ ಗುರಗಾಂವ್ ಗ್ರಾಮದಲ್ಲಿ ನಡೆದ ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸಮಾವೇಶದಲ್ಲಿ ಕೆ ಟಿ ಗುರುರಾಜ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಪ್ರಶಸ್ತಿ ಸ್ವೀಕರಿಸಿದ್ದರು.
ಖಡಕ್ ಆಧಿಕಾರಿ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್ ವರ್ಗಾವಣೆಯಾಗಿ ಮತ್ತೊಮ್ಮೆ ಶಿವಮೊಗ್ಗದ ತುಂಗಾನಗರ ಠಾಣೆಗೆ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಲು ಬರುತ್ತಿದ್ದಾರೆ. ತುಂಬು ಹೃದಯದ ಸ್ವಾಗತ ಸಾರ್. ನಿಮ್ಮ ಕರ್ತವ್ಯ ಅವಧಿಯಲ್ಲಿ ತುಂಗಾನಗರ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಅಷ್ಟೂ ಅಕ್ರಮಗಳಿಗೆ ಬ್ರೇಕ್ ಬಿಳಲಿ ಎನ್ನುವುದಷ್ಟೆ ನಮ್ಮ ಆಶಯ…
.