ಪ್ರೀತಿಸಿ ಮದುವೆಯಾದ ಭದ್ರಾವತಿ ಮೂಲದ ಯುವತಿ ಹತ್ಯೆ.! ಶೀಲ ಶಂಕಿಸಿ ಕೊಂದೇಬಿಟ್ಟ ಪಾಪಿ ಗಂಡ.!

ಪ್ರೀತಿಸಿ ಮದುವೆಯಾದ ಭದ್ರಾವತಿ ಮೂಲದ ಯುವತಿ ಹತ್ಯೆ.! ಶೀಲ ಶಂಕಿಸಿ ಕೊಂದೇಬಿಟ್ಟ ಪಾಪಿ ಗಂಡ!

ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಯುವತಿಯೊಬ್ಬಳ ಹತ್ಯೆ ನೆಡೆದಿದೆ.! ಜೀವನಪೂರ್ತಿ ಸುಖ ದುಃಖಗಳಲ್ಲಿ ಜೊತೆಯಾಗಿರುತ್ತೇನೆ ಎಂದು ಒಂದಷ್ಟು ದಿನ ಪ್ರೀತಿಸಿ ಮದುವೆಯಾದ ಸುಂದರ ಹೆಂಡತಿಯ ಶೀಲವನ್ನು ಶಂಕಿಸಿ ಆಕೆಯ ಗಂಡನೇ ಬರ್ಬರವಾಗಿ ಚಿತ್ರಹಿಂಸೆ ಕೊಟ್ಟು ಹತ್ಯೆಮಾಡಿರುವ ಪ್ರಕರಣವೊಂದು ಬೆಂಗಳೂರಿನ ಕೆಂಗೇರಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಕೊಲೆಯಾದ ಯುವತಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಳು.
ಬೆಂಗಳೂರಿನ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಕಟ್ಟಿಕೊಂಡ ಗಂಡನೇ ತನ್ನ ಮಡದಿಯನ್ನು ಭೀಕರ ಹತ್ಯೆ ಮಾಡಿರುವ ಘಟನೆ ನಡೆದಿದ್ದು. ಕೊಲೆಯಾದ ಯುವತಿಯನ್ನು ನವ್ಯಾ (25) ಎಂದು ಗುರುತಿಸಲಾಗಿದೆ.

ಈಕೆಯನ್ನು ಹತ್ಯೆಮಾಡಿದ ವ್ಯಕ್ತು ಈಕೆಯ ಗಂಡ ಕಿರಣ್ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಕಿರಣ್ ನಿತ್ಯ ಪತ್ನಿಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ,ನೀನು ಯಾರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೀಯ ಹೇಳು ಎಂದು ಕೇಳಿದ್ದಾನೆ.ಹೆಂಡತಿಯಿಂದ‌ಉತ್ತರ ಬಾರದ‌ಕಾರಣಕ್ಕೆ ಕೋಪಗೊಂಡ ಗಂಡ ಬುಧವಾರ (ಆ,28) ಮಧ್ಯಾಹ್ನ 1ರಿಂದ ಎರಡು ಗಂಟೆ ಸುಮಾರಿಗೆ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.! ಸಂಜೆಯ ಹೊತ್ತಿಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಕಿರಣ್ ಮತ್ತು ನವ್ಯಾ ಕಳೆದ ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಜೊತೆಯಲ್ಲಿ ಸಾಕಷ್ಟು ಸುತ್ತಾಡಿ ಮದುವೆಯಾಗಿದ್ದರು. ಇನ್ನೂ ನವ್ಯಾ ಚಿತ್ರರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ, ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸದ ಒತ್ತಡವಿದ್ದ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಮನೆಗೆ ಹೋಗದ ಕಾರಣಕ್ಕೆ ಹೆಂಡತಿಯೊಂದಿಗೆ ಗಂಡ ಜಗಳಮಾಡುತ್ತಿದ್ದ.
ಇನ್ನೂ ಕೆಲಸದ ಒತ್ತಡದಲ್ಲಿ ಮನೆಗೆ ಬರುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆಯೂ ನಿತ್ಯವೂ ಗಲಾಟೆಯಾಗುತ್ತಿತ್ತು ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಗಂಡ ಕಿರಣ್ ತನ್ನ ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂದು ಆಕೆಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸುತ್ತಲೇ ಇದ್ದನಂತೆ.! ಗಂಡನಿಗೆ ಕೆಲಸದ ಒತ್ತಡವಿದೆ ಎಂದು ಎಷ್ಟೇ ಪ್ರೀತಿಯಿಂದ ಹೇಳಿದರೂ, ಆತ ಮಾತ್ರ ಬದಲಾಗಲೇ ಇಲ್ಲ. ಅನುಮಾನ ಎನ್ನುವುದು ಆತನ ಹೆಗಲೆರಿ ಕುಳಿತಿತ್ತು.

ಪ್ರೀತಿಸಿ ಮದುವೆ ಮಾಡಿಕೊಂಡ ಗಂಡನೇ ಈಗ ತನ್ನ ಮೇಲೆ ಶಿಲಾ ಶಂಕಿಸಿ ಅನುಮಾನ ಪಡುತ್ತಿದ್ದರೂ, ನವ್ಯಾಗೆ ತನ್ನ ಮನೆಯವರನ್ನು ಕರೆಸಿ ರಾಜಿ ಪಂಚಾಯಿತಿ ಮಾಡಿ ಎಂದು ಹೇಳುವಷ್ಟು ಧೈರ್ಯವು ಇರಲಿಲ್ಲ. ಕಾರಣ ಹೆತ್ತವರನ್ನು ಕಡೆಗಣಿಸಿ ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ. ತನ್ನವರಿಂದ ದೂರ ಉಳಿಯುವಂತಾಗಿತ್ತು. ಆದ್ದರಿಂದ ಗಂಡ ಕಿರಣ್ ತನ್ನ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗಲಾಟೆ ಮಾಡುತ್ತಿದ್ದರೂ, ಅದನ್ನು ಸಹಿಸಿಕೊಂಡು ಸಂಸಾರ ದೂಡುತ್ತಿದ್ದಳು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವಳಾದ ನವ್ಯಾ ಕಿರಣ್‌ನನ್ನು ಪ್ರೀತಿಸಿ ಮದುವೆಯಾದ ನಂತರ ಗಂಡನೊಂದಿಗೆ ಬೆಂಗಳೂರಿನಲ್ಲೆ ವಾಸವಾಗಿದ್ದಳು. ಆದರೆ ಪ್ರೀತಿಸಿ ಮದುವೆಯಾದ ಗಂಡನಿಂದಲೇ ಈಗ ಭೀಕರವಾಗಿ ಚಿತ್ರಹಿಂಸೆ ಪಟ್ಟು ಪ್ರಾಣಬಿಟ್ಟಿದ್ದಾಳೆ.! ಈ ಘಟನೆಯ ಮಾಹಿತಿ ತಿಳಿದ ಕೆಂಗೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ. ಸ್ಥಳ ಮಹಜರು ಮಾಡಿದ್ದಾರೆ.

ಪತ್ನಿ ನವ್ಯಾಳನ್ನು ಕೊಲೆ ಮಾಡಿ ಪರಾರಿ ಆಗಿದ್ದ ಕಿರಣ್‌ನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಈತ ಚಿಕ್ಕಬಳ್ಳಾಪುರ ಮೂಲದವನಾಗಿದ್ದು ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿದ್ದ. ನವ್ಯಾಳನ್ನು ಪ್ರೀತಿಸಿ ಮದುವೆಯಾಗಿದ್ದ, ಕಟ್ಟಿಕೊಂಡವಳ ಮೇಲೆ ಅನುಮಾನ ಪಟ್ಟು ಆಕೆಯ ಶೀಲವನ್ನು ಶಂಕಿಸಿ ಹತ್ಯೆಮಾಡಿದ್ದಾನೆ.! ತನ್ನ ಅನುಮಾನದ ಬುದ್ಧಿಗೆ ಮಡದಿಯನ್ನೆ ಮಸಣಕ್ಕೆ ಸೇರಿಸಿ ಸುಂದರವಾದ ಸಂಸಾರವನ್ನೇ ಹಾಳುಮಾಡಿಕೊಂಡು ಜೈಲು ಸೇರಿದ್ದಾನೆ ಪಾಪಿ.

ಗೆಳೆಯನನ್ನು ಆತನ ಮನೆಗೆ ಡ್ರಾಪ್‌ ಮಾಡಿದ ನವ್ಯಾಶ್ರೀ.ತನ್ನ ಗೆಳತಿಯನ್ನು ಜೊತೆಗೆ ಕರೆದುಕೊಂಡು ರಾತ್ರಿ 11.30ಕ್ಕೆ ಮನೆಗೆ ಬಂದಿದ್ದರು.
ನವ್ಯಾಶ್ರೀ ಅವರ ಮನೆಯಲ್ಲಿಯೇ ಆಕೆಯ ಗೆಳತಿ ಉಳಿದುಕೊಂಡಿದ್ದರು. ರಾತ್ರಿ ಗಾಢನಿದ್ರೆಗೆ ಹೋಗಿದ್ದ ಗೆಳತಿಗೆ ಬೆಳಗ್ಗೆ ಎಚ್ಚರವಾದಾಗ ಬೆಚ್ಚಿಬಿದ್ದಿದ್ದಾರೆ.! ಬೆಳಗ್ಗೆ 6 ಗಂಟೆಯ ವೇಳೆಗೆ ಪಕ್ಕದಲ್ಲಿದ್ದ ಬಟ್ಟೆಗೆ ಕೈ ತಾಗಿ ತೇವವಾಗಿರುವ ರೀತಿಯಲ್ಲಿ ಫೀಲ್‌ ಆಗಿದೆ.ತಕ್ಷಣವೇ ಎಚ್ಚರಗೊಂಡು ನೋಡಿದಾಗ ನವ್ಯಾಶ್ರೀ ಕತ್ತು ಕುಯ್ದಾ ಸ್ಥಿತಿಯಲ್ಲಿ ಮಲಗಿದ್ದರು.! ಆಕೆಯ ಕೊಲೆಮಾಡಿರುವುದು ಕಂಡುಬಂದಿದೆ. ಈ ವೇಳೆ ನವ್ಯಾಶ್ರಿ ಗೆಳತಿ ಭಯದಿಂದ ಕಿರುಚಿ, ಅಕ್ಕಪಕ್ಕದವರನ್ನು ಕರೆದಿದ್ದಾರೆ.ಅಕ್ಕಪಕ್ಕದವರು ಬಂದು ನೋಡಿ ಪೊಲೀಸರಿಗೆ ಕರೆ ಮಾಡಿ ನವ್ಯಾಶ್ರೀ ಹತ್ಯೆಯ ಮಾಹಿತಿ ತಿಳಿಸಿದ್ದಾರೆ. ನವ್ಯಾಶ್ರೀಯ ಗಂಡ ಕಿರಣ ಕೊಲೆ ಮಾಡಿರುತ್ತಾನೆಂದು ಗೆಳತಿಯಿಂದ ದೂರು ನೀಡಲಾಗಿದೆ. ದೂರಿನ ಮೇರೆಗೆ ಆರೋಪಿಯ ಬೆನ್ನಿಗೆ ಬಿದ್ದ ಕೆಂಗೇರಿ ಪೊಲೀಸರು  ಆರೋಪಿ ಕಿರಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಕ್ಕಪಕ್ಕದವರ ಹೇಳಿಕೆಯಂತೆ ಬರೀ ಜಗಳ ಮಾಡೋದು ಬಿಟ್ಟು ಏನೂ ಮಾಡ್ತಿರಲಿಲ್ಲ ಇಬ್ಬರು. ಅವರು ಇಲ್ಲಿಗೆ ಬಂದು 6 ತಿಂಗಳಾಗಿತ್ತು. ನಿತ್ಯವು ಜಗಳವೆ. ಗಂಡ ಹೆಂಡತಿ ಜಗಳ ಅಂತ ನಾವು ಸುಮ್ಮನಾಗಿದ್ದೆವು. ಅವರದ್ದು ಪಾರ್ಟಿ ಕಲ್ಚರ್. ಮಿಡ್ ನೈಟ್ ಬರ್ತಾ ಇದ್ರು, ಹೋಗ್ತಾ ಇದ್ರು. ಬೀದಿಯಲ್ಲಿ ಜಗಳ ಆಡ್ತಿದ್ರು. 3 ದಿನಗಳ ಹಿಂದೆ ರೋಡ್ ನಲ್ಲಿ ಜಗಳ ಆಡಿದ್ದರು. ಹುಡುಗಿ ತಾಯಿ ಮುಂಚೆ ಬರುತ್ತಿದ್ದರು. ಆಮೇಲೆ ಅವರು ಬರೋದು ಕಮ್ಮಿ ಆಯ್ತು. ನಮ್ಮ ಜತೆ ಮಾತಾಡುತ್ತಿರಲಿಲ್ಲ. ಮನೆಗೆ ಅವರ ತುಂಬಾ ಜನ ಫ್ರೆಂಡ್ಸ್ ಬರ್ತಿದ್ರು. ನಿನ್ನೆ ಸಂಜೆ ಚೆನ್ನಾಗೇ ಇದ್ರು. ನೋಡಿದ್ರೆ ಇವತ್ತು ಬೆಳಗ್ಗೆ ಹೀಗಾಗಿದೆ. ಹುಡುಗಿ ಸ್ನೇಹಿತೆ ಕೂಗಿಕೊಂಡ ಬಳಿಕ ಕೊಲೆಯಾಗಿರುವುದು ತಿಳಿಯಿತು ಎಂದು ಕೆಳಗಿನ ಮನೆಯಲ್ಲಿರುವ ಪ್ರವೀಣ್‌ ಎನ್ನುವವರು ವಿಷಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!