ಪ್ರಿಯಕರನೊಂದಿಗೆ ಸಂಸಾರ ಹೂಡಲು 3 ವರ್ಷದ ಮಗಳನ್ನೆ ಕೊಂದ ತಾಯಿ.!

ಪ್ರಿಯಕರನೊಂದಿಗೆ ಸಂಸಾರ ಹೂಡಲು 3 ವರ್ಷದ ಮಗಳನ್ನೆ ಕೊಂದ ತಾಯಿ.!

ಅಶ್ವಸೂರ್ಯ/ಶಿವಮೊಗ್ಗ: ಬಿಹಾರದ ಮುಜಾಫರ್‌ಪುರದಲ್ಲಿ 3 ವರ್ಷದ ಬಾಲಕಿಯ ಶವ ಟ್ರೋಲಿ ಬ್ಯಾಗ್‌ನೊಳಗೆ ಪತ್ತೆಯಾಗಿದ್ದು ಈ ಹತ್ಯೆಯ ಬೆನ್ನು ಹತ್ತಿದ ಪೋಲಿಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುತ್ತಿದ್ದಂತೆ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ.! ಏನೆಂದರೆ ತಾಯಿಯೇ ಮಗುವಿನ ಹಂತಕಿಯಾಗಿದ್ದು ವಿಷಯ ಬಯಲಾಗುತ್ತಿದ್ದಂತೆ ಪೋಲಿಸರೆ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಮುಜಾಫರ್‌ಪುರದ ನಿವಾಸಿ ಕಾಜಲ್ ಬಂಧಿತ ಆರೋಪಿ ಯಾಗಿದ್ದು.

ಮನೋಜ್ ಕುಮಾರ್ ಮತ್ತು ಕಾಜಲ್ ಕುಮಾರಿ ದಂಪತಿಯ ಮೂರು ವರ್ಷದ ಮಗಳು ಮಿಷ್ಟಿ ಕುಮಾರಿ ತಾಯಿಯಿಂದಲೇ ಕೊಲೆಯಾದ ಮಗು ಆಗಿದೆ. ಮಗುವಿನ ತಂದೆ ಮನೋಜ್ ಕುಮಾರ್ ಪತ್ನಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಮಗುವಿನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲವನ್ನೂ ಬಾಯಿಬಿಟ್ಟಿರುವ ಕಾಜಲ್ ಕುಮಾರಿ, ನಾನು ರಾಮಪುರಹರಿ ಕ್ಷೇತ್ರದ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿರುವ ವಿಷಯ ಹೇಳಿದ್ದಾಳೆ.

ಮದುವೆಯಾಗುವಂತೆ ಕೇಳಿದಾಗ ಯುವಕ, ನಿನ್ನ ಮಗಳು ನಮ್ಮ ಜೊತೆಯಲ್ಲಿರೋದು ಬೇಡ ಎಂಬ ಕಂಡೀಷನ್ ಹಾಕಿದ್ದನು. ಖಾಸಗಿ ವಾಹಿನಿಯಲ್ಲಿ ಕ್ರೈಂ ಪೆಟ್ರೋಲ್ ಶೋ ನೋಡುತ್ತಿದ್ದ ಮಹಿಳೆ ಅದರಲ್ಲಿ ತೋರಿಸಿದಂತೆ ಮಗುವನ್ನು ಕೊಂದು, ಶವವನ್ನು ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಕಸ ಎಸೆಯುವ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು. ಇಂತಹ ಅಮ್ಮಂದಿರು ಇರುತ್ತಾರೆ ಎಂದರೆ ನಂಬಲು ಅಸಾಧ್ಯವೆ ಹೌದು…

Leave a Reply

Your email address will not be published. Required fields are marked *

Optimized by Optimole
error: Content is protected !!