ರೀಲ್ಸ್ ನೋಡಿ ಮದುವೆಯಾದ ಹುಡುಗ ಎಂಟೆ ತಿಂಗಳಿಗೆ ಹೆಂಡತಿಯನ್ನು ರಿಯಲ್ ಆಗಿ ಕೊಂದು ಬಿಟ್ನಾ.!?
ಅಶ್ವಸೂರ್ಯ/ಶಿವಮೊಗ್ಗ: ರಾತ್ರಿ ಹಗಲೇನ್ನದೆ ಪ್ರತಿನಿತ್ಯ ಮೇಕಪ್ ಮಾಡಿಕೊಂಡು ಹೊಸ ಹೊಸ ರೀಲ್ಸ್ ಮಾಡುತ್ತಿದ್ದ ಸುಂದರಿಯನ್ನು ಅದ್ಯಾವ ಕೋನದಿಂದ ನೋಡಿ ಆಕೆಯನ್ನು ಮೆಚ್ಚಿ ಮದುವೆಯಾದನೊ ಹುಡುಗ. ಕೇವಲ 8 ತಿಂಗಳಿಗೆ ಹೆಂಡತಿಯನ್ನು ರಿಯಲ್ ಆಗಿ ಕೊಂದು ಬಿಟ್ಟಿದ್ದಾನಂತೆ.! ಆತ ಆಕೆಯ ಹೊಸ ಹೊಸ ರೀಲ್ಸು ಕಲರ್ ಫುಲ್ ಮೇಕಪ್ ಗೆ ಮಾರುಹೋಗಿ ಪ್ರೀತಿಸಿ ಮದುವೆಯಾಗಿದ್ದ.! ಕೋನೆಗೆ ಆಕೆಯ ದಿನನಿತ್ಯದ ರೀಲ್ಸ್ ಹುಚ್ಚಿಗೆ ಬೇಸತ್ತು ಆಕೆಯನ್ನು ಕೊಲೆ ಮಾಡಿ ಮುಗಿಸಿಬಿಟ್ಟಿದ್ದಾನೆ.!
ಈತ ದಕ್ಷಿಣ ಕನ್ನಡ ಉಡುಪಿಯ ಬ್ರಾಹ್ಮಣ ಹುಡುಗ, ಆಕೆ ಉತ್ತರ ಕನ್ನಡ ಬೀದರ್‌ನ ಲಿಂಗಾಯತ ಹುಡುಗಿ. ರೀಲ್ಸ್ ಮಾಡುತ್ತಿದ್ದ ಸುಂದರಿಯನ್ನು ನೋಡಿ ಪ್ರೀತಿಸಿ ಮದುವೆಯಾಗಿದ್ದ ಕರಾವಳಿಯ ಹುಡುಗ.! ರೀಲ್ಸ್ ಹುಡುಗಿ ಜಯಶ್ರೀ ಜೋತೆಗೆ ಮದುವೆಯಾಗಿದ್ದ ಕಿರಣ್ ಭಟ್ಟನಿಗೆ ಆರಂಭದ ದಿನಗಳಲ್ಲಿ ಜೀವನ ರಿಯಲ್ ಆಗಿ ಚನ್ನಾಗಿತ್ತು. ಬರ ಬರುತ್ತಾ ಆಕೆಯ ರೀಲ್ಸ್ ಮತ್ತು ಬಂಗಾರದ ಮೇಲಿನ ವ್ಯಾಮೋಹ ಇತನನ್ನು ರಚ್ಚಿಗೇಳುವಂತೆ ಮಾಡಿತ್ತು.ಇವರ ಸುಖ ಸಂಸಾರಕ್ಕೆ ಎಂಟೇ ತಿಂಗಳು ಆಯಸ್ಸು ಎಂದು ಆ ಬ್ರಹ್ಮ ಬರೆದಿಟ್ಟಿರ ಬೇಕು.? ಮೊಬೈಲ್‌ನಲ್ಲಿ ರೀಲ್ಸ್ ಮಾಡುತ್ತಾ ನಮ್ಮ ಸಂಸಾರ ಆನಂದ ಸಾಗರ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದೇ ಮಾಡಿದ್ದು..ನಮ್ಮ ಹುಡುಗ ಹಿಡಿಯೋದು ಹಿಡಿದಿದ್ದಾನೆ ಒಳ್ಳೆ ಕಲಾವಿದೆಯನ್ನೇ ಹಿಡಿದಿದ್ದಾನೆ ಎಂದು ಆತನ ಸ್ನೇಹಿತರು ಹೇಳುವಂತ್ತಿದ್ದರು ಆರಂಭದಲ್ಲಿ. ಆದರೆ ಕೊನೆ ಕೊನೆಗೆ ಪತ್ನಿ ರೀಲ್ಸ್ ಹುಚ್ಚಿಗೆ ಬೆಚ್ಚಿಬಿದ್ದ ಗಂಡ ಕಿರಣ್ ಒಂದು ವರ್ಷಕ್ಕೆ ಮೊದಲೇ ಹೆಂಡತಿಯನ್ನು ರೀಯಲ್ ಆಗಿ ಕೊಂದು ಕೊಂದುಬಿಟ್ಟಿದ್ದಾನೆ.?ಇವರಿಬ್ಬರು
ಮದುವೆಯಾಗಿ ಒಂದು ವರ್ಷ ತುಂಬುವ ಮೊದಲೇ ಇವರಿಬ್ಬರ ನಡುವೆ ರೀಲ್ಸ್ ನಲ್ಲಿ ಇದ್ದಷ್ಟು ಆತ್ಮೀಯತೆ ರಿಯಲ್ ಲೈಫ್ ನಲ್ಲಿ ಇರಲಿಲ್ಲ ಎಂದು ಅಕ್ಕಪಕ್ಕದವರೆ ಮಾತನಾಡಿಕೊಳ್ಳುತ್ತಾರೆ.ಇಬ್ಬರ ನಡುವೆ ಇದ್ದ ಪ್ರೀತಿ ಸಂಬಂಧಗಳು ಹಳಸಿಹೋಗಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ದಿನನಿತ್ಯ ಜಗಳ ಹೆಚ್ಚಾಗಿತ್ತು. ಮಡದಿಯನ್ನು ಮಸಣ ಸೇರಿಸಿದ ದಿನವೂ ಅ ರಾತ್ರಿ ಗಂಡ ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.ಜಗಳ ವಿಕೋಪಕ್ಕೆ ಹೋಗಿದೆ.! ಇಬ್ಬರು ಬಡಿದಾಡಿಕೊಂಡಿದ್ದಾರಂತೆ.! ಆ ಸಂಧರ್ಭದಲ್ಲಿ ಕಿರಣ್ ಉಪಾಧ್ಯ ತನ್ನ ತಾಳ್ಮೆಯನ್ನು ಕಳೆದುಕೊಂಡು ಆಕೆಯನ್ನು ಕೊಂದು ಮುಗಿಸಿದ್ದಾನಂತೆ.!?. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಯುವಕ ಕಿರಣ್ ಉಪಾಧ್ಯ ಸಾಲಿಗ್ರಾಮದ ದೇವಸ್ಥಾನದಲ್ಲಿ ಅಡುಗೆ ಮೇಲ್ವಿಚಾರಕನಾಗಿದ್ದಾನೆ. ಕಳೆದ 8 ತಿಂಗಳ ಹಿಂದೆ ದೂರದ ಬೀದರ್ ಮೂಲದ ಯುವತಿ ಜಯಶ್ರೀಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ.
ಮದುವೆಯಾದ ಆರಂಭದಲ್ಲಿ ಈ ಜೋಡಿಗಳ ಸಂಸಾರ ಸುಖಿ ಸಂಸಾರವಾಗಿತ್ತು. ಜಯಶ್ರೀ ಮತ್ತು ಕಿರಣ್ ಬೇರೆ ಸಮುದಾಯದವರಾಗಿದ್ದರಿಂದ ಬ್ರಾಹ್ಮಣ ಸಮುದಾಯದ ಕಿರಣ್ ಮನೆಯಲ್ಲಿ ತಕರಾರು ನಡೆದಿತ್ತು,ಈ ಕಾರಣದಿಂದ ನವ ದಂಪತಿಗಳು ಇದ್ದ ಮನೆಯನ್ನು ಬಿಟ್ಟು ಸಾಲಿಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ಸಂಸಾರ ಹೂಡಿದ್ದರು. ದಿನ ಕಳೆದಂತೆ ಕಿರಣ್ ಮತ್ತು ಜಯಶ್ರೀ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಜಗಳ ನಡೆದಿದೆಯಂತೆ.? ಜಯಶ್ರೀ ಕಿರಣನನ್ನು ಮದುವೆಯಾಗುವ ಮೊದಲೇ ಹಿಂದೊಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದಳಂತೆ.!ನಿತ್ಯ ದಂಪತಿಯ ಕ್ಷುಲ್ಲಕ ಜಗಳ ಅಕ್ಕಪಕ್ಕದ ಮನೆಯವರಿಗೂ ಗೊತ್ತಿತ್ತು ಮತ್ತು ಕಿರಿ ಕಿರಿಯಾಗಿತ್ತು. ಹೆಂಡತಿಯನ್ನು ಮಸಣ ಸೇರಿಸಿದ ದಿನವೂ ಇಬ್ಬರ ನಡುವೆ ರಾತ್ರಿ ಜಗಳವಾಗಿದೆಯಂತೆ.!ನಿತ್ಯ ಇವರದ್ದು ಜಗಳ ಇದ್ದದ್ದೇ ಅಂತ ಅಕ್ಕಪಕ್ಕದವರು ತಮ್ಮ ಪಾಡಿಗೆ ತಾವು ನಿದ್ರೆಗೆ ಜಾರಿದ್ದಾರೆ.
ಆದರೆ ತಡರಾತ್ರಿ ಜಯಶ್ರೀ ಮತ್ತು ಕಿರಣ್ ನಡುವೆ ನಿತ್ಯ ಗಲಾಟೆಕ್ಕಿಂತ ಸ್ವಲ್ಪ ಜೋರಾಗಿಯೇ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಕೋಪಗೊಂಡ ಪತಿ ಅಲ್ಲೇ ಪಕ್ಕದಲ್ಲಿದ್ದ ಚಾಕುವಿನಿಂದ ಜಯಶ್ರೀಗೆ ಮೂರ್ನಾಲ್ಕು ಬಾರಿ ಇರಿದಿದ್ದಾನಂತೆ! ದೇಹದ ಮೂರ್ನಾಲ್ಕು ಕಡೆ ಚಾಕುವಿನಿಂದ ಇರಿಯುತ್ತಿದ್ದಂತೆ ರಕ್ತಸ್ರಾವವಾಗಿದೆ. ಮಡದಿಯನ್ನು ಚಾಕುವಿನಿಂದ ಇರಿದು ಬೆಳಿಗ್ಗೆವರೆಗೆ ಸುಮ್ಮನಿದ್ದ ಕಿರಣ್, ಬೆಳಗ್ಗೆ ತನ್ನ ಸ್ನೇಹಿತರಿಗೆ ಫೋನ್ ಮಾಡಿ ನನ್ನ ಪತ್ನಿ ಟೆರೇಸ್ ಮೇಲಿಂದ ಬಿದ್ದು ಗಾಯಗೊಂಡಿದ್ದಾಳೆ. ಎಂದು ಹೇಳಿ ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಆದರೆ ಖಾಸಗಿ ಆಸ್ಪತ್ರೆಯಲ್ಲಿ ಇವರನ್ನು ದಾಖಲಿಸಿಕೊಳ್ಳದೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದಾರೆ. ಅಲ್ಲಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ರೀಲ್ಸ್ ರಾಣಿ ಜಯಶ್ರೀ ಜೀವವನ್ನೇ ಬಿಟ್ಟಿದ್ದಾಳೆ. ಈ ಪ್ರಕರದ ಬಗ್ಗೆ ಕೋಟ ಪೊಲೀಸರಿಗೆ ಮಾಹಿತಿ ಸಿಕ್ಕಿ ಕೂಡಲೇ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಜಯಶ್ರೀ ಗಂಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾಚಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿ ಮೊಬೈಲ್‌ನಲ್ಲಿ ರೀಲ್ಸ್ ಮಾಡುತ್ತಾ ಬ್ಯೂಸಿಯಾಗಿರುತ್ತಿದ್ದಳು. ಚಿನ್ನದ ಒಡವೆ ಬೇಕೆಂದು ಸದಾ ನನ್ನನ್ನು ಪೀಡಿಸಿ ಹಿಂಸೆ ಕೊಡುತ್ತಿದ್ದಳು. ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಜಗಳವಾಡುತ್ತಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳದ ಸಂದರ್ಭದಲ್ಲಿ ಕಿರಣ್ ಚಾಕುವಿನಿಂದ ಹೆಂಡತಿಯನ್ನು ಇರಿದಿದ್ದಾಗಿ ಒಪ್ಪಿಕೊಂಡಿದ್ದಾನಂತೆ.!
ಈ ಹತ್ಯೆ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಲಿದ್ದಾರೆ. ಜಯಶ್ರೀ ಮನೆಯವರು ಬೀದರ್ ನಿಂದ ಹೊರಟು ಉಡುಪಿಗೆ ಬಂದಿದ್ದಾರೆ. ಮೃತ ದೇಹವನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತ ಜಯಶ್ರೀ ಮನೆಯವರು ಬಂದ ನಂತರ ಮರಣೋತ್ತರ ಪರೀಕ್ಷೆ ಮಾಡಿ.ಆಕೆಯ ಶವವನ್ನು ಹಸ್ತಾಂತರಿಸಲಾಗುವುದು.ಒಂದು ಕ್ಷಣ ಕೋಪದ ಕೈಗೆ ಬುದ್ದಿ ಕೊಟ್ಟ ಪತಿ ಮಹಾಶಯ ಪ್ರೀತಿಸಿ ಮದುವೆಯಾದ ಮಡದಿಯನ್ನೆ ಸುಡುಗಾಡು ಸೇರಿಸಿದ್ದಾನೆ. ಪತ್ನಿ ಮಸಣದ ಹಾದಿ ಹಿಡಿದರೆ. ಮಾಡಿದ ತಪ್ಪಿಗೆ ಪತಿ ಜೈಲಿನ ಹಾದಿ ಹಿಡಿದಿದ್ದಾನೆ……!?