ಸೈನಿಕನಿಗೆ ಅವಮಾನ ಮಾಡಿದ ಕಿಡಿಗೇಡಿಗಳು.!
ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕೂಗಳತೆ ದೂರದಲ್ಲಿರುವ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಸರಹದ್ದಿನ ಮಣನಕೊಪ್ಪ ಗ್ರಾಮದ
ಕಡು ಬಡತನದ ಕುಟುಂಬ ಒಂದರಲ್ಲಿ ಹುಟ್ಟಿದ ವ್ಯಕ್ತಿಯೆ ಪ್ರವೀಣ್. ಅದೇನೊ ಮೊದಲಿಂದಲೂ ಭಾರತೀಯ ಸೇನೆಗೆ ಸೇರಬೇಕೆನ್ನುವ ಗುರಿ ಇಟ್ಟುಕೊಂಡು ಬದುಕಿನ ಹೆಜ್ಜೆ ಹಾಕಿದ ಪ್ರವೀಣ್ ತಮ್ಮ ಇಚ್ಛೆಯಂತೆ ಹೆತ್ತವರ ಬಲದಿಂದ ಭಾರತೀಯ ಸೇನೆಗೆ ಸೇರಿಯೆ ಬಿಟ್ಟರು.! ಆತ ಸೇನೆಗೆ ಸೇರಿದ ಕ್ಷಣದಿಂದಲೆ. ತನ್ನ ಒಂದು ವರ್ಷದ ಸೇನೆಯ ತರಬೇತಿಯ ಅವದಿಯಲ್ಲಿ ತನ್ನ ಕುಟುಂಬದ ಕಡು ಬಡತನವನ್ನು ಮರೆತು ತನ್ನ ಮನಸ್ಸಿನಲ್ಲಿ ದೇಶ ಸೇವೆಯ ಕಿಚ್ಚನ್ನು ಇಟ್ಟುಕೊಂಡು. ದೇಶಕೊಸ್ಕರ ತನ್ನ ಮನೆ ಮಠ ಸಂಬಂಧಗಳಿಂದ ದೂರ ಉಳಿದು ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾದ ಅದೇಷ್ಟೊ ಸೈನಿಕರಲ್ಲಿ ಪ್ರವೀಣ್ ಕೂಡ ಒಬ್ಬರಾಗಿದ್ದರು.
ಸೇನೆಗೆ ಸೇರಿ ತಮ್ಮ ಸೇವೆಯನ್ನು ಸಲ್ಲಿಸಿ ತನ್ನ ಹುಟ್ಟೂರಿಗೆ ವಾಪಸಾದ ಪ್ರವೀಣ್ ತಾನು ತನ್ನ ಕುಟುಂಬ ಕೃಷಿ ಅಂತ ಬದುಕುಸಾಗಿಸುತ್ತಿದ್ದ ವ್ಯಕ್ತಿ ಯಾಗಿದ್ದರು.ತನ್ನ ಗ್ರಾಮದ ಯುವಕರಿಗೂ ದೇಶ ಸೇವೆ ಮತ್ತು ದೇಶ ಭಕ್ತಿಯ ತಿಳುವಳಿಕೆ ಹೇಳಿ ಬದುಕು ಸಾಗಿಸಿತ್ತಿದ್ದ ಸೈನಿಕ ಪ್ರವೀಣ್ ಗೆ ತನ್ನ ಜೀವಿತದ ಕಾಲದಲ್ಲಿಯೇ ತನ್ನ ಹುಟ್ಟುರಿನಲ್ಲಿ ಅವಮಾನ ಮಾಡಿರುವ ಕೇಲವು ಘಟನೆಗಳು ನೆಡೆದಿದ್ದು ಕಿಡಿಗೇಡಿಗಳು ಮಾಡಿರುವ ಹೀನಾ ಕೇಲಸಕ್ಕೆ ನಾಗರಿಕ ಸಮಾಜವೆ ತಲೆತಗ್ಗಿಸುವಂತಾಗಿದೆ.!
ಸೈನಿಕನಿಗೆ ಅವಮಾನಿಸಿದ ಪ್ರಕರಣ ನೆಡೆದಿದ್ದು ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೋಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.
ನನಗೆ ಗೋತ್ತಿರುವ ಹಾಗೆ ಗುಡ್ಡೆಕೋಪ್ಪ ಗ್ರಾಮ ಪಂಚಾಯತಿ.ಹಾಲಿ ಶಾಸಕರರಾದ ಆರಗ ಔ್ಞನೇಂದ್ರ ಅವರ ಸ್ವ ಗ್ರಾಮ. ದೇಶಭಕ್ತರ ಗ್ರಾಮ. ಈ ಗ್ರಾಮದಲ್ಲಿ ಪ್ರವೀಣ್ ವೆಂಬ ಯೋಧ ಪ್ಯಾರಮಿಲಿಟರಿಯಲ್ಲಿ ಕಳೆದ 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿದ್ದ ಪ್ರವೀಣ್. ತಮ್ಮ ಸೇನಾ ವೃತ್ತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ತನ್ನ ಸ್ವ ಗ್ರಾಮದಲ್ಲೆ ಬದುಕು ಕಟ್ಟಿಕೊಂಡಿದ್ದರು. ಈತನ ಮನೆ ಆರಣ್ಯ ಭಾಗದಲ್ಲಿದ್ದು ಸುತ್ತ ಮುತ್ತ ಮನೆಗಳು ಇಲ್ಲದಕಾರಣಕ್ಕೆ ಆತನ ಮನೆ ಒಂಟಿಯಾಗಿದ್ದು ತನ್ನ ಸ್ನೇಹಿತರು ಬಂದು ಬಳಗದವರಿಗೆ ಮನೆಗೆ ಬರಲು ಸಹಾಯವಾಗಲೆಂದು ಪಂಚಾಯಿತಿ ರಸ್ತೆಯ ಪಕ್ಕದಲ್ಲಿ ಕಳೆದ ವರ್ಷ ಯೋದನ ಮನೆಗೆ ಹೋಗುವ ದಾರಿಯೆಂದು ಒಂದು ನಾಮಪಲಕದ ಬೋರ್ಡ್ ಅನ್ನು ಗುಡ್ಡೆಕೋಪ್ಪ ಹೊದಲ ಹೋಗುವ ಮಾರ್ಗದಲ್ಲಿ ಆಳವಾಡಿಸಲಾಗಿತ್ತು.
ಅದೇಕೊ ಅಡ್ಡಕಸುಬಿಗಳಿಗೆ ಅದು ಯಾಕೊ ಹೊರೆಯಾದಂತೆ ಕಂಡಿದೆ ನಿನ್ನೆ ತಡರಾತ್ರಿ ಆ ಬೋರ್ಡ್ನ್ನು ಕೆಲವು ವಿಕೃತ ಮನಸ್ಸಿನ ತಲೆ ಮಾಸಿದ ವ್ಯಕ್ತಿಗಳು ರಸ್ತೆಯಲ್ಲಿ ಸೈನಿಕನ ಮನೆಗೆ ಹೋಗುವ ದಾರಿ ಎಂದು ಅಳವಡಿಸಿದ್ದ ಫಲಕವನ್ನು ಸೈನಿಕನ ಪ್ರವೀಣ್ ಜೀವಂತ ಇರುವಾಗಲೇ ನಾಮ ಫಲಕವನ್ನು ಕತ್ತರಿಸಿಹಾಕಿ ಬೋರ್ಡ್ಅನ್ನು ನೆಲಕ್ಕೆ ಬಿಸಾಕಿದ್ದಾರೆ ದುರುಳರು.! ಸೈನಿಕನ ಘನತೆಗೆ ದಕ್ಕೆ ಮಾಡಿದ್ದಾರೆ.ದೇಶಕಾದ ಸೈನಿಕನಿಗೆ ಅವಮಾನ ಮಾಡಲಾಗಿದೆ.
ಈ ಪ್ರಕರಣ ಸಣ್ಣ ವಿಷಯ ವಾದರು.ಪ್ರತಿಯೊಬ್ಬರೂ ಇದನ್ನು ಖಂಡಿಸ ಬೇಕಿದೆ. ಕಾರಣ ಇದು ನಮ್ಮ ದೇಶಕಾದ ಯೋಧನಿಗೆ ಮಾಡಿದ ದೊಡ್ಡ ಅವಮಾನವಾಗಿದೆ.! ಇಂದು ಸೈನಿಕನ ಹೆಸರಿನ ನಾಮಫಲಕವನ್ನು ಕಿತ್ತು ಹಾಕಿದವರು ನಾಳೆ ಆತನ ಮನೆಗೆ ನುಗ್ಗಿ ಎನುಬೇಕಾದರು ಮಾಡಬಹುದು,ಈ ಕಾರಣದಿಂದಲೇ ತಕ್ಷಣ ಸಂಬಂಧಪಟ್ಟ ಪೋಲಿಸ್ ಅಧಿಕಾರಿಗಳು ದೂರು ದಾಖಲಿಸಿಕೊಂಡು. ಇಂತಹ ವಿಕೃತ ಮನಸ್ಥಿತಿ ಯ ಕೆಟ್ಟ ಹುಳಗಳನ್ನು ಹೊಸಕಿ ಹಾಕಬೇಕಿದೆ. ಗುಡ್ಡೆಕೋಪ್ಪ ಗ್ರಾಮಸ್ಥರೆ ಇಂತಹ ಕಿಡಿಗೇಡಿಗಳಿಗೆ ಸರಿಯಾದ ಶಿಕ್ಷೆಯನ್ನು ನೀಡಿ ನಿಮ್ಮೂರ ಯೋಧನಿಗೆ ಆದ ಅವಮಾನವನ್ನು ಸರಿಪಡಿಸಿ ಗೌರವ ನೀಡಬೇಕಿದೆ. .