ಗಂಡ ಕೆಲಸಕ್ಕೆ ಪ್ರಿಯಕರ ಪಲ್ಲಂಗಕ್ಕೆ.!,ಮುಂದೆ ನೆಡೆದದ್ದು ಘನಘೋರ ಕೃತ್ಯ.

ಗಂಡ ಕೆಲಸಕ್ಕೆ ಪ್ರಿಯಕರ ಪಲ್ಲಂಗಕ್ಕೆ.!,ಮುಂದೆ ನೆಡೆದದ್ದು ಘನಘೋರ ಕೃತ್ಯ.

ಅಶ್ವಸೂರ್ಯ/ಶಿವಮೊಗ್ಗ: ಗಂಡ ಕೆಲಸಕ್ಕೆ ಹೋಗುತ್ತಿದ್ದ ಹಾಗೆ ಹೆಂಡತಿ ಪ್ರಿಯಕರನೊಂದಿಗೆ ಮನೆಯಲ್ಲೇ ಪಲ್ಲಂಗದಾಟಕ್ಕೆ ಮುಂದಾಗಿ ಗಂಡನ ಕೈಗೆ ಸಿಕ್ಕಿ ಮುಂದೆ ನೆಡೆದ್ದು ಮಾತ್ರ ಘನಘೋರ ಕೃತ್ಯ..!
ಈ ಪ್ರಕರಣ ವರದಿಯಾಗಿದ್ದು ಬೆಂಗಳೂರಿನಲ್ಲಿ.! ಗಂಡ ಕೆಲಸಕ್ಕೆ ಹೋದ ಹೊತ್ತಲ್ಲಿ ತನ್ನ ಮನೆಯಲ್ಲೇ ಪರ ಪುರುಷನೊಂದಿಗೆ ಸರಸಕ್ಕಿಳಿದ ಹೆಂಡತಿಯನ್ನು ಕಂಡು ಬೇರಗಾದ ಗಂಡನನ್ನು ಹೆಂಡತಿ ಮತ್ತು ಪ್ರಿಯಕರ ಸೇರಿಕೊಂಡು ಉಸಿರು ನಿಲ್ಲಿಸಿ ಸುಡುಗಾಡು ಸೇರಿಸಿದ್ದಾರೆ.! ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಸನ ಮೂಲದ ತೇಜಸ್ವಿನಿ ಮತ್ತು ಮಹೇಶ್ ಇಬ್ಬರು ಮುದ್ದಾದ ಮಕ್ಕಳು ಸಂಸಾರ ಹೂಡಿದ್ದರು. ಒಂದೇ ಊರಿನವರಾಗಿದ್ದ ಇವರು ಪ್ರೀತಿಸಿ ಮದುವೆಯಾಗಿದ್ದರು. ಸುಖ ಸಂಸಾರದ ಸಾಕ್ಷಿಯಾಗಿ ಒಂದು ಗಂಡು ಮತ್ತೊಂದು ಹೆಣ್ಣು ಮುದ್ದಾದ ಮಕ್ಕಳಿದ್ದರು. ಮಹೇಶ ಆಟೋ ಓಡಿಸಿಕೊಂಡು ಹೆಂಡತಿ ಮಕ್ಕಳು ಎಂದು ಬದುಕು ನಿಭಾಯಿಸಿಕೊಂಡು ಹೋಗುತಿದ್ದ. ಅತ್ತ ಸಂಸಾರಕ್ಕೆ ಅಧಾರ ಎಂಬಂತೆ. ತೇಜಸ್ವಿನಿ ಕೂಡ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತಿದ್ದಳು. ಹೇಗೋ ಇಬ್ಬರ ದುಡಿಮೆಯಲ್ಲಿ ಸಂಸಾರವು ಸುಖಕರವಾಗಿತ್ತು ಅನ್ನುವ ಹೊತ್ತಿಗೆ.

ಈ ಸಂಸಾರನ್ನು ಹಾಡುಗೆಡವಲೆಂದೆ ತೇಜಸ್ವಿನಿಯ ಜೀವನದಲ್ಲಿ ಪರ ಪುರಷನ ಆಗಮನವಾಗಿದೆ.ಈ ಕಾರಣದಿಂದಲೇ ಒಂದು ವರ್ಷದಿಂದ ಹೆಂಡತಿ ತೇಜಸ್ವಿನಿ ಗಂಡ ಮಹೇಶ್ ನಡುವೆ ವೈಮನಸ್ಸು ಹೊಗೆ ಅಡುತ್ತಿತ್ತು ಇಬ್ಬರ ನಡುವೆ ಆಗಾಗ ಜಗಳ ನೆಡೆಯುತ್ತಿತ್ತು. ಈ ಸುಂದರ ಸಂಸಾರದಲ್ಲಿ ಹುಳಿ ಹಿಂಡಿದವನು ತೇಜಸ್ವಿನಿ ಕೆಲಸ ಮಾಡುತ್ತಿದ್ದ ಫೈನಾನ್ಸ್ ನಲ್ಲಿ ನೌಕರಿ ಮಾಡಿಕೊಂಡಿದ್ದ ಗಜೇಂದ್ರ ಎನ್ನುವ ವ್ಯಕ್ತಿ.! ಗಜೇಂದ್ರನ ಜೊತೆ ತೇಜಸ್ವಿನಿ ಸ್ನೇಹ ಬೆಳೆಸಿಕೊಂಡಿದ್ದಾಳೆ. ಆ ಸ್ನೇಹ ಮುಂದೆ ಸಲುಗೆಯಾಗಿ ಮನೆಯ ಪಲ್ಲಂಗದವರೆಗೂ ಬಂದಿದೆ.! ಈ ವಿಚಾರ ತೇಜಸ್ವಿನಿ ಪತಿ ಮಹೇಶನಿಗೂ ಗೊತ್ತಾಗಿ.ಹೇಗೂ ಹಾದಿತಪ್ಪಿದ ಮಡದಿಯನ್ನು ಬುದ್ಧಿ ಹೇಳಿ ಮಕ್ಕಳಿಗಾಗಿ ಸಂಸಾರವನ್ನು ಸಾಗಿಸಬೇಕು ಎಂದು ಸಿಟ್ಟಿನ ಬುದ್ಧಿಗೆ ಕೈ ಕೊಡದೇ ತಾಳ್ಮೆಯಿಂದಲೆ ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾನೆ.

ಮರ್ಯಾದೆ ಪ್ರಶ್ನೆ ಅಂತ ಮಹೇಶ್​ ತನ್ನ ಪತ್ನಿಗೆ ಬುದ್ಧಿಮಾತು ಕೂಡ ಸಾಕಷ್ಟು ಬಾರಿ ಹೇಳಿದ್ದಾನೆ.ನಮಗೆ ಪುಟ್ಟ ಮಕ್ಕಳಿದ್ದಾರೆ ಆ ಗಜೇಂದ್ರನ ಸಹವಾಸ ಮಾಡಬೇಡ.ಸರಿಯಾಗಿ ಸಂಸಾರ ಮಾಡಿಕೊಂಡು ಹೋಗು ಅಂತ ಎಷ್ಟೇ ಬಾರಿ ಹೇಳಿದರೂ ಮಡದಿ ತೇಜಸ್ವಿನಿ ಮಾತ್ರ ಪರ ಪುರುಷನ ಜೋತೆ ತನ್ನ ಚಾಳಿ ಬಿಟ್ಟಿರಲಿಲ್ಲ. ಆಗಸ್ಟ್ 9 ರಂದು ಮಹೇಶ್​ ಕೆಲಸಕ್ಕೆ ಅಂತ ಮನೆಯಿಂದ ಹೊರ ಹೋಗಿದ್ದಾನೆ. ಇದೆ ವೇಳೆ ತೇಜಸ್ವಿನಿ ಪ್ರಿಯಕರ ಗಜೇಂದ್ರನನ್ನ ಮನೆಗೆ ಆಹ್ವಾನಿಸಿದ್ದಾಳೆ. ಮನೆಯ ಬೆಡ್ ರೂಮಿನಲ್ಲಿ ಕಾಮದಾಟ ಶುರು ಹಚ್ಚಿಕೊಂಡಿದ್ದಾಳೆ. ಅದೇನು ಗ್ರಹಚಾರವೋ ಬೆಳಗ್ಗೆ ಕೆಲಸಕ್ಕೆ ಅಂತ ಹೋಗಿದ್ದ ಗಂಡ ಮಹೇಶ್ ತಕ್ಷಣವೇ ಮನೆಗೆ ಬಂದಿದ್ದ.! ಮನೆಗೆ ಬಂದ ಮಹೇಶ್​ ಕಣ್ಣಿಗೆ ಕಂಡಿದ್ದು, ತೇಜಸ್ವಿನಿ ಮತ್ತು ಗಜೇಂದ್ರನ ಸರಸ ಸಲ್ಲಾಪ. ಇದನ್ನು ಕಣ್ಣಾರೆ ಕಂಡ ಮಹೇಶನ ಕೋಪ ನೆತ್ತಿಗೇರಿದೆ. ಪತ್ನಿ ತೇಜಸ್ವಿನಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಬಿಡಿಸಲು ಬಂದ ಗಜೇಂದ್ರನಿಗೂ ಥಳಿಸಿದ್ದಾನೆ. ಇನ್ನೇನು ನನ್ನ ಗಂಡ ನನ್ನನ್ನು ಉಳಿಸಲ್ಲ ಎಂದು ಅರಿತ ಹೆಂಡತಿ ತೇಜಸ್ವಿನಿ ತನ್ನ ಪ್ರಿಯಕರ ಗಜೇಂದ್ರನ ಜೋತೆ ಸೇರಿಕೊಂಡು ಗಂಡ ಮಹೇಶನ ಜೀವ ತೆಗೆಯೋ ನಿರ್ಧಾರ ಮಾಡಿಬಿಟ್ಟಿದ್ದಾಳೆ.! ಇಬ್ಬರು ಸೇರಿ ಮಹೇಶನ ಕುತ್ತಿಗೆ ಹಿಸುಕಿ ಉಸಿರು ನಿಲ್ಲಿಸಿಯೇಬಿಟ್ಟಿದ್ದಾರೆ. ಮಡದಿ ಮತ್ತು ಆಕೆಯ ಪ್ರಿಯಕರನ ಬಲಪ್ರಯೋಗದ ಮುಂದೆ ಉಸಿರುನಿಂತು ಗಂಡ ಮಹೇಶ್ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಗಂಡ ಸತ್ತದ್ದು ಗ್ಯಾರಂಟಿಯಾದಮೇಲೆ ಕೊಲೆಗಾತಿ ಹೆಂಡತಿ ಹೈಡ್ರಾಮಾ ಮಾಡಲು ಮುಂದಾಗಿದ್ದಾಳೆ. ಆದರೆ ಮೊದಲೇ ಅನುಮಾನ ಪಟ್ಟ ಪೊಲೀಸರು ತೇಜಸ್ವಿನಿಯನ್ನು ಎಳೆದೊಯ್ದು ತೀವ್ರ ವಿಚಾರಣೆ ಒಳಪಡಿಸಿದಾಗ. ಸತ್ಯ ತನ್ನಿಂದ ತಾನೆ ಆಕೆಯ ಬಾಯಿಂದ ಹೊರಬಂದಿದೆ. ಪರ ಪುರುಷನ ಜೋತೆಗೆ ತೀಟೆ ತೀರಿಸಿಕೊಳ್ಳಲು. ಪತ್ನಿ ಪತಿಯನ್ನೆ ಕೊಲೆ ಮಾಡಿದ್ದಾಳೆ. ಗಂಡನ ಜೀವ ತೆಗೆದ ತೇಜಸ್ವಿನಿ ಮತ್ತು ಪ್ರಿಯಕರ ಮಹೇಶನನ್ನು ಪೊಲೀಸರು ಬಂಧಿಸಿ ಜೈಲಿಗೆಕಳುಹಿಸಿದ್ದಾರೆ. ಮಕ್ಕಳನ್ನು ಪೋಷಿಸಬೇಕಾದ ತಾಯಿಯೆ ಮಕ್ಕಳ ತಂದೆಯನ್ನು ಕೊಂದು ಜೈಲಿಗೆ ಹೋಗಿದ್ದಾಳೆ. ಏನು ಅರಿಯದ ಮುದ್ದಾದ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!