ಶಾಸಕ ಸಂಗಮೇಶ್ ಮಗನ ಹತ್ಯೆಗೆ ಜೈಲಿನಿಂದಲೆ ಸ್ಕೆಚ್…! ದಾಖಲಾಯ್ತು ದೂರು
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರದಿಂದ ಕೂಗಳತೆ ದೂರದಲ್ಲಿರುವ ಭದ್ರಾವತಿಯಲ್ಲಿ ಸ್ಥಳೀಯ ಶಾಸಕ ಸಂಗಮೇಶ್ ಪುತ್ರ ಬಸವನ (ಬಸವೇಶ್) ಹತ್ಯೆಗೆ ಜೈಲಿನಿಂದಲೇ ಸ್ಕೆಚ್ ಹಾಕಿರುವ ವಿಚಾರ ಬೆಳಕಿಗೆ ಬಂದಿದ್ದು ಈ ವಿಚಾರವಾಗಿ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು ಪೋಲಿಸರು ತನಿಖೆಗೆ ಮುಂದಾಗಿದ್ದಾರೆ.
ಡಿಚ್ಚಿ ಮುಬಾರಕ್ ಹಾಗೂ ಭದ್ರಾವತಿಯ ಟಿಪ್ಪು ಆಂಡ್ ಟೀಂನೊಂದಿಗೆ ಸೇರಿಕೊಂಡು ಬಸವನನ್ನು ಹತ್ಯೆಮಾಡಲು ಹಂತಕರು ಸ್ಕೆಚ್ ರೂಪಿಸಿದ್ದರು ಎಂದು ಆರೋಪ ಮಾಡಲಾಗಿದೆ.
ಹಾಗಾದರೆ ದಾಖಲಾದ ಎಫ್.ಐ.ಆರ್. ನಲ್ಲಿ ಏನಿದೆ.?
ಉಕ್ಕಿನ ನಗರಿ ಭದ್ರಾವತಿಯ ಜಟ್ ಪಟ್ ನಗರದ ನಿವಾಸಿಯಾದ ಮುಬಾರಕ್ ಅಲಿಯಾಸ್ ಮುಬ್ಬು ಕಳೆದ ಆಗಸ್ಟ್ 17 ರಂದು ಒಬ್ಬ ವ್ಯಕ್ತಿಯ ಹತ್ತಿರ ಬಂದು ಬಸವಣ್ಣ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಆ ಬಳಿಕ ಆತನಿಗೆ ಡಿಚ್ಚಿ ಮುಬಾರಕ್ ಜೈಲಿನಿಂದ ಎರಡು ಪ್ರತ್ಯೇಕ ಫೋನ್ ನಂಬರ್‌ನಿಂದ ಕರೆ ಮಾಡಿ, ಬಸವನನ್ನು ಮುಗಿಸುವ ಡೀಲ್ ನಡೆದಿರುವ ಬಗ್ಗೆ ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ವ್ಯಕ್ತಿಯು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಬ್ಬು ಹೇಳಿದಂತೆ ಜೈಲಿನಿಂದಲೇ ಡಿಚ್ಚಿ ಮುಬಾರಕ್ ಬಸವನ ಹತ್ಯೆಗೆ ಸ್ಕೆಚ್ ಹಾಕಿ ಸೀಗೆಬಾಗಿ ನಿವಾಸಿ ಟಿಪ್ಪುಗೆ ಡೀಲ್ ಕೊಟ್ಟಿದ್ದಾನೆ ಎನ್ನುವುದು ತಿಳಿದುಬಂದಿದೆ.? ಗಾಂಧಿ ಸರ್ಕಲ್‌ನಲ್ಲಿ ಬಸವನನ್ನು ಹೊಡೆದು ಹಾಕಿ ಎಂದು ಟಿಪ್ಪು ಆಂಡ್ ಟೀಂಗೆ ಹೇಳಿದ್ದ ಎಂದು ಮುಬ್ಬು ತಿಳಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇಷ್ಟೇ ಅಲ್ಲದೆ ಆ.17 ರಂದು ರಂಗಪ್ಪ ಸರ್ಕಲ್ ಬಳಿ ಸಿಕ್ಕ ಟಿಪ್ಪು ಬಾರ್‌ವೊಂದರಲ್ಲಿ ಕುಳಿತು ಡಿಚ್ಚಿ ಮುಬಾರಕ್ ಡೀಲ್ ಕೊಟ್ಟಿದ್ದು, ಅದರಂತೆ ಚಾಕು ತಂದಿದ್ದೇನೆ ಎಂದು ಮುಬ್ಬುಗೆ ತೋರಿಸಿರುವ ಬಗ್ಗೆ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಸಂಗಮೇಶ್ ಆಪ್ತರೊಬ್ಬರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.