BIG BREAKING NEWS
ಸತ್ಯನಾರಾಯಣ ರಾಜು ( ಮೊಟ್ಟೆ ಸತೀಶ್ ) ಹತ್ಯೆಗೆ ಸಂಚು ವಿಫಲ. ಮೆಗ್ಗಾನ್ ಆಸ್ಪತ್ರೆಗೆ ದಾಖಲು..
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಸತ್ಯನಾರಾಯಣ ರಾಜು ( ಮೊಟ್ಟೆ ಸತೀಶ್ ) ಅವರ ಮೇಲೆ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ನೆಡೆದಿದ್ದು ಅದೃಷ್ಟವಶಾತ್ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಸತೀಶ್ ಅವರನ್ನು ಟಾರ್ಗೆಟ್ ಮಾಡಿದ ಹಂತಕರು ಅವರ ಕಾರನ್ನು ಜಖಂ ಗೊಳಿಸಿದ್ದಾರೆ ಎನ್ನಲಾಗಿದ್ದು ಪೋಲಿಸರ ತನಿಖೆಯಿಂದ ಸತ್ಯ ಸತ್ಯತೆ ಹೊರಬರಬೇಕಿದೆ.ತನ್ನ ಮೇಲಾಗುವ ಅಟ್ಯಾಕನ್ನು ಅರಿತ ಸತೀಶ್ ಸ್ಥಳದಿಂದ ಓಡಿ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ ಎನ್ನಲಾಗಿದ್ದು ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕುಸ್ಕೂರಿನಲ್ಲಿರುವ ಸತೀಶ್ ಅವರ ಜಮೀನು ವಿವಾದಕ್ಕೆ ಸಂಭಂಧಿಸಿದಂತೆ ಈ ಅಟ್ಯಾಕ್ ನೆಡೆದಿದ್ದು ನಿನ್ನೆ ರಾತ್ರಿ ಶಿವಮೊಗ್ಗ ದಿಂದ ನಶೆಯ ಮತ್ತಿನಲ್ಲಿದ್ದ ಸತೀಶ್ ಕುಸ್ಕೂರು ಸಮೀಪದ ತಮ್ಮ ಜಮೀನಿಗೆ ಕಾರಿನಲ್ಲಿ ತೆರಳಿದ್ದಾರೆ. ಇನ್ನೇನು ಜಮೀನು ಸಮೀಪ ಇಳಿದು ಮನೆಗೆ ಹೋಗಬೇಕೆನ್ನುವ ಹೊತ್ತಿಗೇ ನಾಲ್ಕೈದು ಜನರ ಗ್ಯಾಂಗ್ ಇತನ ಮೇಲೆ ದೊಣ್ಣೆಗಳಿಂದ ಅಟ್ಯಾಕ್ ಮಾಡಿದ್ದಾರೆಂದು ಎನ್ನಲಾಗುತ್ತಿದೆ.ಸತೀಶ್ ಅವರ ಕಾರನ್ನು ಜಖಂ ಗೋಳಿಸಿದ್ದಾರೆ. ದೊಣ್ಣೆಯ ಬಲವಾದ ಹೋಡೆತಗಳು ಸತೀಶ್ ಅವರ ಭುಜಕ್ಕೆ ಬೆನ್ನಿಗೆ ಬಿದ್ದಿದೆ ಎನ್ನಲಾಗಿದ್ದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ
ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರಾದ ಸತ್ಯನಾರಾಯಣ ರಾಜು ( ಮೊಟ್ಟೆ ಸತೀಶ)
ತನ್ನ ಮೇಲೆ ಅಟ್ಯಾಕ್ ಆಗುವ ಮುನ್ಸೂಚನೆ ಇದ್ದ ಕಾರಣಕ್ಕೆ ಸತೀಶ್ ತುಂಗಾನಗರ ಠಾಣೆಯಲ್ಲಿ ನಿನ್ನೆ ರಾತ್ರಿ ರಕ್ಷಣೆ ಕೋರಿ ದೂರು ದಾಖಲಿಸಿದ್ದರಂತೆ.! ದೂರು ದಾಖಲಿಸಿದ ಕೆಲವೇ ಗಂಟಗಳ ಅಂತರದಲ್ಲಿ ಸತೀಶ್ ಅವರ ಮೇಲೆ ಹಲ್ಲೆ ಯಾಗಿದೆ. ಹಲ್ಲೆ ಮಾಡಿದವರು ಯಾರು ಎಂದು ಪೋಲಿಸ್ ತನಿಖೆಯಿಂದ ತಿಳಿಯ ಬೇಕಿದೆ.? ನಾಲ್ಕೈದು ಜನರ ಗ್ಯಾಂಗ್ ಕಟ್ಟಿಕೊಂಡು ಸತ್ಯನಾರಾಯಣ ರಾಜ್ ( ಮೊಟ್ಟೆ ಸತೀಶ್) ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆಂದುದು ತಿಳಿದಿದ್ದು. ಸತೀಶ್ ಅವರ ಜಮೀನಿಗೆ ಸಂಭಂಧಿಸಿದಂತೆ ಈ ಘಟನೆ ನೆಡೆದಿರಬಹುದಾಗಿದೆ!?