ಶಿವಮೊಗ್ಗ ಮೂಲದ ಬ್ರಹ್ಮಾವರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಧು ಅವರಿಗೆ ಮುಖ್ಯಮಂತ್ರಿ ಪದಕ
ಅಶ್ವಸೂರ್ಯ/ಶಿವಮೊಗ್ಗ: ಉಡುಪಿ ಜಿಲ್ಲೆಯ ಸರಹದ್ದಿನಲ್ಲಿ ನಡೆದ ಸಾಕಷ್ಟು ಡೆಂಜರಸ್ ಕ್ರೈಮ್ ಪ್ರಕರಣಗಳ ತನಿಖೆಯ ಜಾಡು ಹಿಡಿದು ಆರೋಪಿಗಳ ಪತ್ತೆ ಮಾಡುವಲ್ಲಿ ಚಾಣಾಕ್ಷ ಎಂದೇ ಬಿಂಬಿತರಾಗಿರುವ ಮಧು ಕರಾವಳಿ ಭಾಗದಲ್ಲಿ ಜನಪ್ರಿಯತೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುವ ಬಿ.ಇ. ಮಧು ಅವರು 2023ನೇ ಸಾಲಿನ ಮುಖ್ಯಮಂತ್ರಿ ಪದಕದ ಗೌರವಕ್ಕೆ ಭಾಜನರಾಗಿದ್ದಾರೆ.
ಮೂಲತಃ ನಮ್ಮೂರು ಶಿವಮೊಗ್ಗದವರಾದ ಮಧು ಅವರು ಇಂಜಿನಿಯರಿಂಗ್ ಪದವಿಧರರಾಗಿದ್ದು 2014 ಬ್ಯಾಚ್‌ನಲ್ಲಿ . 2017 ರಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಪೋಲಿಸ್ ಇಲಾಖೆಯಲ್ಲಿ ನೇಮಕಾತಿ ಹೊಂದಿದ್ದರು.
ಇಲಾಖೆಗೆ ಸೇರಿ ಉಡುಪಿ ಜಿಲ್ಲೆಯ ಮಲ್ಪೆ, ಕಾರ್ಕಳ, ಕೋಟ, ಶಂಕರನಾರಾಯಣ ಸಹಿತ ಇದೀಗಾ ಬ್ರಹ್ಮಾವರದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ 126 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ 2023ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಿಸಲಾಗಿದ್ದು, ಇವರಲ್ಲಿ ಮಧು ಬಿ.ಇ. ಕೂಡ ಒಬ್ಬರಾಗಿದ್ದಾರೆ.
ಇಡೀ ರಾಜ್ಯಕ್ಕೆ ತಲೆನೋವಾಗಿದ್ದ ಶಾಲೆಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಜ್ಯ ಕಳ್ಳರನ್ನು ಬಂಧಿಸಿದ ಕೇಸಿನಲ್ಲಿ ಪಿಎಸ್ಐ ಮಧು ಅವರು ಪ್ರಮುಖ ಪಾತ್ರ ವಹಿಸಿದ್ದರು. ಬ್ರಹ್ಮಾವರದಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣ, ಉಡುಪಿ ಮಲ್ಪೆ ಠಾಣಾ ವ್ಯಾಪ್ತಿಯ ಸಾಕಷ್ಟು ಕ್ಲಿಷ್ಟಕರ ಪ್ರಕರಣವನ್ನು ಭೇದಿಸಿ ಆರೋಪಿಗಳ ಪತ್ತೆ ಮಾಡುವಲ್ಲಿ ಮಧು ಅವರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಮೂಲದ
ಮಧು ಅವರಿಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ ಸಿಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ .
ಇವರ ಚಾಣಾಕ್ಷ ತನದ ತನಿಖಾ ಪ್ರಕರಣದಲ್ಲಿ ವಿಶಾಲ ಗಾಣಿಕ ಹತ್ಯೆ ಪ್ರಕರಣದ ನಾಲ್ಕನೇ ಆರೋಪಿ ಧರ್ಮೇಂದ್ರ ಕುಮಾರ್ ಸುಹಾನಿ ಬಂಧನ……
ಘಟನೆಯ ಹಿನ್ನಲೆ…
ಸುಮಾರು ಮೂರು ವರ್ಷಗಳ ಹಿಂದೆ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿಶಾಲ ಗಾಣಿಗ (35) ಕೊಲೆ ಪ್ರಕರಣ ಕರಾವಳಿ ಭಾಗದಲ್ಲಿ ತಲ್ಲಣ ಮೂಡಿಸಿತ್ತು ಈ ಹತ್ಯೆ ಜುಲೈ 12, 2021ರಲ್ಲಿ ನಡೆದಿತ್ತು. ವಿದೇಶದಲ್ಲಿ ಕೂತು ಆಕೆಯ ಪತಿ ರಾಮಕೃಷ್ಣ ಗಾಣಿಗ (42) ಹತ್ಯೆಗೆ ಹಂತಕರಿಗೆ ಸುಪಾರಿ ನೀಡಿದ್ದ.
ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಮ್ರಗೋಡುವಿನಲ್ಲಿನ ಮಿಲನ ರೆಸಿಡೆನ್ಸ್ ನಲ್ಲಿ ಈ ಕೊಲೆ ನಡೆದಿತ್ತು.
ಕೊಲೆಗೆ ಸಂಬಂಧಿಸಿದಂತೆ ವಿಶಾಲ ಗಾಣಿಗೆ ಅವರ ಪತಿ ರಾಮಕೃಷ್ಣ ಗಾಣಿಗ, ಸ್ವಾಮಿನಾಥನ್ ನಿಷಾದ್, ರೋಹಿತ್ ರಾಣಾ ಪ್ರತಾಪ್ ಎನ್ನುವ ಹೆಸರಿನ ಆರೋಪಿಗಳನ್ನು ಬಂಧಿಸಲಾಗಿತ್ತು. ನಾಲ್ಕನೇ ಆರೋಪಿ ತಲೆಮರೆಸಿಕೊಂಡಿದ್ದ.
ವಿಶಾಲ ಗಾಣಿಗೆ ಕೊಲೆಗಡುಕ ಪತಿ ರಾಮಕೃಷ್ಣ ಗಾಣಿಗ ಜೊತೆಯಲ್ಲಿ
ಪಿಎಸ್ಐ ಮಧು ಅವರು ಬ್ರಹ್ಮಾವರ ಪೋಲಿಸ್ ಠಾಣೆಗೆ ವರ್ಗಾವಾಗಿ ಬರುತ್ತಿದ್ದಂತೆ ವಿಶಾಲ ಗಾಣಿಗ ಪ್ರಕರಣದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಧರ್ಮೇಂದ್ರ ಕುಮಾರ್ ಸುಹಾನಿಯ ಬಂಧನಕ್ಕೆ ಮುಂದಾಗಿದ್ದರು. ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ದುಬೈನಲ್ಲಿ ತಲೆಮೆರೆಸಿಕೊಂಡಿದ್ದ ಧರ್ಮೇಂದ್ರ ಕುಮಾರ್ ಸುಹಾನಿ ಈತ ವಿದೇಶದಿಂದ ಲಕ್ನೋಗೆ ಬರುತ್ತಿದ್ದಾನೆ ಎನ್ನುವ ಖಚಿತ ಮಾಹಿತಿ ಆಧಾರದ ಮೇಲೆ ಬ್ರಹ್ಮಾವರ ಠಾಣೆಯ ಪಿಎಸ್ಐ ಮಧು & ಟೀಮ್ ನಾಲ್ಕನೇ ಆರೋಪಿಯ ಬಂಧನಕ್ಕೆ ಲಕ್ನೋಗೆ ತೆರಳಿದ್ದರು.
ಪಿಎಸ್ಐ ಮಧು ಬಿ.ಇ ನೇತೃತ್ವದ ತಂಡ ಆರೋಪಿಯನ್ನು ಮೂರು ವರ್ಷದ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ನಾಲ್ಕನೇ ಆರೋಪಿ ಉತ್ತರ ಪ್ರದೇಶದ ಗೋರಖಪುರ ನಿವಾಸಿ. ಆರೋಪಿ ಬಂಧನಕ್ಕೆ ಲಕ್ನೋಗೆ ಹೋಗಿದ್ದ ಮಧು ನೇತೃತ್ವದ ತಂಡದಲ್ಲಿ ಠಾಣಾ ಸಿಬ್ಬಂದಿಗಳಾದ ಶಾಂತರಾಜ್, ಸುರೇಶ್ ಬಾಬು ಕೂಡಾ ಇದ್ದರು