ಪೋಲಿಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಅರ್ಜುನ್ ಲಿಂಗರೆಡ್ಡಿ ಅವರಿಗೆ 2023ನೇ ಸಾಲಿನ ಮುಖ್ಯಮಂತ್ರಿಗಳ ಪದಕ
ಅಶ್ವಸೂರ್ಯ/ಶಿವಮೊಗ್ಗ: 2023ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪುರಸ್ಕೃತರಾದ ಮಂಜುನಾಥ್ ಅರ್ಜುನ್ ಲಿಂಗರೆಡ್ಡಿ ಅವರು ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಚಿತ್ರದುರ್ಗ,ಕೋಲಾರ ಜಿಲ್ಲೆಗಳಲ್ಲಿ ನಿಷ್ಠಾವಂತ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಹಾಲಿ ಕೆಜಿಎಫ್ ನಲ್ಲಿ ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆಯ ಕೆಲವೊಂದು ವಿಷಯಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇನೆ…..
ತಂದೆ ಅರ್ಜುನ್, ತಾಯಿ ಮಹಾದೇವಿ ಅವರ ಪುತ್ರರಾದ ಮಂಜುನಾಥ್ ಲಿಂಗರೆಡ್ಡಿ ಅವರ ಜನನವಾಗಿದ್ದು ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಯರಝರ್ವಿ ಗ್ರಾಮದಲ್ಲಿ. ತಂದೆ KSRTC ಯಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದಂತವರು. ತಾಯಿ ಶಿಕ್ಷಕಿಯಾಗಿದ್ದರು.
ಮಂಜುನಾಥ್ ಲಿಂಗರೆಡ್ಡಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯರಝರ್ವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತರೆ.ಪ್ರೌಡ ಶಿಕ್ಷಣವನ್ನು ಗೋಕಾಕಿನ NSFR ಪ್ರೌಢಶಾಲೆಯಲ್ಲಿ ಓದಿ. ಪಿಯುಸಿಯನ್ನು ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಕಾಲೇಜಿನಲ್ಲಿ ಪೂರೈಸಿದ್ದರು.ನಂತರ ಗೋಕಾಕ ನ JSS ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಮುಗಿಸಿದ ಮಂಜುನಾಥ್ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಮುಗಿಸಿದರು. ಓದಿನಲ್ಲಿ ಎಂದು ಹಿಂದೆ ಬಿಳದ ಮಂಜುನಾಥ್ ಅರ್ಜುನ್ ಲಿಂಗರೆಡ್ಡಿ ವಿಧ್ಯಾರ್ಥಿ ಜೀವನವನ್ನು ಯಶಸ್ವಿಯಾಗಿ ಪೂರೈಸಿ. ಒಳ್ಳೆಯ ವಿಧ್ಯಾರ್ಥಿಯಾಗಿ ಹೆತ್ತವರಿಗೂ ಓದಿದ ಶಾಲೆಗೂ ಕೀರ್ತಿ ತಂದಂತವರು.
10.10.2011ರಲ್ಲಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಪೋಲಿಸ್ ಇಲಾಖೆಗೆ ಸೇರಿ ಕರ್ನಾಟಕ ಪೋಲಿಸ್ ಅಕಾಡೆಮಿ ಮೈಸೂರಿನಲ್ಲಿ ತರಬೇತಿಯನ್ನು ಮುಗಿಸಿದ ಮಂಜುನಾಥ್ ಕರ್ತವ್ಯಕ್ಕೆ ಮೊದಲ ಹೆಜ್ಜೆ ಇಟ್ಟಿದ್ದು ಪರಶುರಾಮಪುರ ಪೋಲಿಸ್ ಠಾಣೆಗೆ. ಖಾಕಿ ತೊಟ್ಟ ಕ್ಷಣದಿಂದಲೆ ನಿಷ್ಠಾವಂತ ಅಧಿಕಾರಿಯಾಗಿ ಸೇವೆಸಲ್ಲಿಸಿದ ಮಂಜುನಾಥ್ ನಂತರ ವರ್ಗಾವಣೆಯಾಗಿದ್ದು ಮಲೆನಾಡ ತವರು ನಗರಿ ಶಿವಮೊಗ್ಗ ಜಿಲ್ಲೆಗೆ.ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಂಚಾರಿ ಠಾಣೆ,ಭದ್ರಾವತಿ ಗ್ರಾಮಾಂತರ ಠಾಣೆ ಮತ್ತು ಸೊರಬ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಸೈ ಎನ್ನಿಸಿಕೊಂಡ ಮಂಜುನಾಥ್ ಮಲೆನಾಡ ಮಂದಿಯ ಪ್ರೀತಿಗೆ ಪಾತ್ರರಾಗಿದ್ದಾರು. ಇವರು ನಂತರ ದಾವಣಗೆರೆ ದಕ್ಷಿಣ ಸಂಚಾರಿ ಠಾಣೆ ಮತ್ತು ಚಳ್ಳಕೆರೆಯ ಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ಅಧಿಕಾರಿಗಳು , ಸಾರ್ವಜನಿಕರಿಂದಲು ಸೈ ಎನ್ನಿಸಿಕೊಂಡ ಮಂಜುನಾಥ್ ಲಿಂಗರೆಡ್ಡಿ ಅವರು ಪೋಲಿಸ್ ಇಲಾಖೆಯಲ್ಲಿ ಹಂತ ಹಂತವಾಗಿ ಯಶಸ್ಸಿನೆಡೆಗೆ ಹೆಜ್ಜೆ ಹಾಕಿದಂತವರು. ಮಂಜುನಾಥ್ ಅರ್ಜುನ್ ಲಿಂಗರೆಡ್ಡಿ ಅವರ ಯಶಸ್ಸಿನ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತವರು ಇವರ ತಂದೆ ತಾಯಿಯವರ ಜೋತೆಗೆ ಮಡದಿ ಗೌರಿ ಅವರು.ಇನ್ನೂ ಸುಖವಿರಲಿ ದುಃಖವಿರಲಿ ತಮ್ಮದೆ ಸುಂದರ ಲೋಕಕ್ಕೆ ಕರೆದುಕೊಂಡು ಹೋಗುವಂತಹ ಇಬ್ಬರು ಮುದ್ದಾದ ಮಕ್ಕಳು ಸೌರಭ ಮತ್ತು ಚಂದನ
ಮಂಜುನಾಥ್ ಲಿಂಗರೆಡ್ಡಿ ಅವರು ಕರ್ತವ್ಯ ನಿರ್ವಹಿಸಿದ ಕಡೆಯೆಲ್ಲ ಸ್ಥಳೀಯ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಮಂಜುನಾಥ್ ಅರ್ಜುನ್ ಲಿಂಗರೆಡ್ಡಿ ಅವರಿಗೆ ಪರಿಶ್ರಮಕ್ಕೆ ತಕ್ಕ ಫಲ ಎಂಬಂತೆ 2023ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಸಿಕ್ಕಿದೆ.
ಕರ್ತವ್ಯಕ್ಕೆ ಸೇರಿ ಹದಿನೆಂಟು ವರ್ಷಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಠಾಣೆಗಳಲೇಲ್ಲ ಒಂದಲ್ಲ ಒಂದು ರೀತಿಯ ಮೆಚ್ಚುಗೆಯ ಪ್ರಾಮಾಣಿಕ ಕೆಲಸವನ್ನು ಮಾಡಿ ಸ್ಥಳೀಯ ನಾಗರಿಕರ ಮತ್ತು ಇಲಾಖೆಯ ಸಿಬ್ಬಂದಿಗಳ ಮತ್ತು ಹಿರಿಯ ಅಧಿಕಾರಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಚಳ್ಳಕೆರೆಯಲ್ಲಿ ತ್ರಿವಳಿ ಹತ್ಯೆಯ ಆರೋಪಿಗಳನ್ನು ಹೆಡೆಮುರಿಕಟ್ಟಿದ ಪಿಎಸ್ಐ ಮಂಜುನಾಥ್ ಲಿಂಗರೆಡ್ಡಿ & ಟಿಮ್
ಚಳ್ಳಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಧರ್ಭದಲ್ಲಿ ತ್ರಿವಳಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಹಂತಕರನ್ನು ಹೆಡೆಮುರಿ ಕಟ್ಟಿದ. ಮಂಜುನಾಥ್ ಲಿಂಗಾರೆಡ್ಡಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಂದ ಪ್ರಶಂಸನಾ ಪತ್ರ ದೊರೆತಿತ್ತು.
ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಭಂಜಾಯತಿಯ ಸಮುದಾಯದ ಆರೋಗ್ಯ ಕೇಂದ್ರದ ಸಮೀಪ ಕೆಲವರು ಶೆಡ್ ನಲ್ಲಿ ಹಂದಿ ಸಾಕಾಣಿಕೆ ಮಾಡಕೊಂಡಿದ್ದರು ಒಂದು ದಿನ ರಾತ್ರಿ ಹಂದಿಕಳ್ಳತನ ಮಾಡಲು ಬಂದವರು ಆಂಜನೇಯ ಬಡಾವಣೆಯ ಹಂದಿ ಕಾವಲಿಗಿದ್ದ, ಸೀನಪ್ಪ, ಸೀನಪ್ಪನ ಮಗನಾದ ಯಲ್ಲೇಶ, ಸೀನಪ್ಪನ ತಮ್ಮನ ಮಗ ಮಾರೇಶ ಎನ್ನುವವರನ್ನು ಮಲಗಿದ್ದಲ್ಲಿಯೇ ಕಣ್ಣಿಗೆ ಕಾರದಪುಡಿ ಎರಚಿ ಬರ್ಬರವಾಗಿ ಕೊಲೆ ಮಾಡಿ ಶೇಡ್‌ನಲ್ಲಿದ್ದ ಸುಮಾರು 50 ರಿಂದ 60 ಹಂದಿಗಳನ್ನು ಕಳ್ಳತನ ಮಾಡಿ ಕೊಂಡು ಹೋಗಿದ್ದರು, ದೂರು ದಾಖಲಾಗುತ್ತಿದ್ದಂತೆ ಈ ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಲು ಮುಂದಾದ ಪಿಎಸ್ಐ ಮಂಜುನಾಥ್ ಲಿಂಗರೆಡ್ಡಿ ಅವರ ಪೋಲಿಸರ ತಂಡ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಒಂದು ಕಾರ್ಯಚರಣೆಯನ್ನು ಮೆಚ್ಚಿ ಸ್ಥಳಿಯ ನಾಗರಿಕರು ಮತ್ತು ಇಲಾಖೆ ಹಿರಿಯ ಅಧಿಕಾರಿಗಳು ಪ್ರಶಂಸಿದ್ದರು. ಜೊತೆಗೆ ಚಿತ್ರದುರ್ಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮಂಜುನಾಥ್ ಲಿಂಗರೆಡ್ಡಿ & ಟಿಮ್ ಗೆ ಪ್ರಶಂಸನಾಪತ್ರ ನೀಡಿ ಗೌರವಿಸಿದ್ದರು.
ಪೋಲಿಸ್ ಇನ್ಸ್‌ಪೆಕ್ಟರ್ ಶ್ರೀ ಮಂಜುನಾಥ್ ಅರ್ಜುನ್ ಲಿಂಗರೆಡ್ಡಿ ಅವರನ್ನು ಕೆಲವು ಸಂಧರ್ಭದಲ್ಲಿ ಗೌರವಿಸಿದ ಕ್ಷಣ..