ಕಡಪ್ಪರ ಸಮೀರ್ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳು ಅಂದರ್
ಅಶ್ವಸೂರ್ಯ/ಶಿವಮೊಗ್ಗ : ಮಂಗಳೂರಿನಲ್ಲಿ ಇತ್ತೀಚೆಗೆ ನಗರದ ಹೊರವಲಯದ ಕಲ್ಲಾಪಿನಲ್ಲಿ ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಯಾದ ರೌಡಿಶೀಟರ್ ಕಡಪ್ಪರ್ ಸಮೀರ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ತನ್ವೀರ್ ಬಜಾಲ್ (27), ಕಾಪುವಿನ ಮುಹಮ್ಮದ್ ಇಕ್ಬಾಲ್ (28), ಕೃಷ್ಣಾಪುರದ
ಮುಹಮ್ಮದ್ ನೌಶಾದ್ (26), ಕಿನ್ಯದ ನಿಯಾಝ್ (23), ಬಂಧಿತರಾದ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಕಡಪ್ಪರ ಸಮೀರ್ ರವಿವಾರ ರಾತ್ರಿ ತಾಯಿ ಹಾಗೂ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಕಲ್ಲಾಪುವಿನಲ್ಲಿರುವ ಫಾಸ್ಟ್ ಫುಡ್‌ವೊಂದಕ್ಕೆ ಉಟಕ್ಕೆಂದು ಕಾರಿನಲ್ಲಿ ತೆರಳಿದ್ದನು.ಮೊದಲೆ ಸ್ಕೆಚ್ ಹಾಕಿ ಸಮೀರ್ ಬೆನ್ನಿಗೆ ಬಿದ್ದಿದ್ದ ಹಂತಕರು ಆತನ ಕಾರನ್ನು ಹಿಂಬಾಲಿಸಿಕೊಂಡು ಹೊದ ಹಂತಕರ ತಂಡವೊಂದು ಸಮೀರ್ ಕಾರಿನಿಂದ ಇಳಿಯುತ್ತಿದ್ದಂತೆ ಮಾರಕಾಸ್ತ್ರಗಳನ್ನು ಹಿಡಿದು ಎದುರಾಗಿದ್ದಾರೆ. ಅಪಾಯವನ್ನು ಅರಿತ ಸಮೀರ್ ಅಲ್ಲಿಂದ ದಿಕ್ಕೆಟ್ಟು ಓಡಿದ್ದಾನೆ ಅ ಸಮಯದಲ್ಲಿ ಹಂತಕರು ಅವನ ಬೆನ್ನಿಗೆ ಬಿದ್ದು ಓಡಿದ್ದಾರೆ ಸುಮಾರು 500 ಮೀಟರ್ ದೂರವಿರುವ ವಿ.ಕೆ.ಫರ್ನಿಚರ್ ವರೆಗೂ ಓಡಿದ್ದಾನೆ ಅಷ್ಟೋತ್ತಿಗಾಗಲೆ ಹಂತಕರು ಅಟ್ಟಾಡಿಸಿಕೊಂಡು ಬಂದು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಹತ್ಯೆಮಾಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿ ಉಳ್ಳಾಲ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿ ಕಾರನ್ನು ವಶಕ್ಕೆ ತೆಗೆದುಕೊಂಡು ತನಿಖೆಗೆ ಮುಂದಾಗಿದ್ದಾರೆ.
ನಾಲ್ವರು ಆರೋಪಿಗಳು ಪೋಲಿಸರ ವಶಕ್ಕೆ
ಮಂಗಳೂರಿನ ರೌಡಿ ಶೀಟರ್ ಉಳ್ಳಾಲದ ಕಡಪ್ಪರ ಸಮೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಕಿನ್ಯ ನಿವಾಸಿ ನಿಯಾಝ್, ಸುರತ್ಕಲ್ ಕೃಷ್ಣಾಪುರದ ಮುಹಮ್ಮದ್ ನೌಶಾದ್, ಬಜಾಲ್ ಶಾಂತಿನಗರದ ತನ್ವೀರ್ ಯಾನೆ ತನ್ನು ಮತ್ತು ಕಾಪು ಮಜೂರಿನ ಮುಹಮ್ಮದ್ ಇಕ್ಬಾಲ್ ಯಾನೆ ಇಕ್ಕು ಬಂಧಿತ ಆರೋಪಿಗಳಾಗಿದ್ದಾರೆ. ಮೇಲ್ನೋಟಕ್ಕೆ ಇದು ರಿವೆಂಜಿಗೆ ಬಿದ್ದ ಹೆಣವಾಗಿದ್ದರು.ತನಿಖೆ ಇಂದಷ್ಟೇ ಹತ್ಯೆ ಹಿಂದಿನ ಸತ್ಯ ಬಯಲಾಗಬೇಕಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ ಸಮೀರ್ ನನ್ನು ಆ.11ರಂದು ರಾತ್ರಿ ತಂಡವೊಂದು ತೊಕ್ಕೊಟ್ಟು ಕಲ್ಲಾಪುವಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದರು.!
ಈ ಹತ್ಯೆಯ ದೂರು ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ತನಿಖೆ ಚುರುಕುಗೊಳಿಸಿ ಹಂತಕರಿಗಾಗಿ ಭಲೇ ಬಿಸಿದ್ದರು.ಕೊನೆಗೂ ನಾಲ್ವರು ಹಂತಕರನ್ನು ಹೆಡೆಮುರಿಕಟ್ಟುವಲ್ಲಿ ಉಳ್ಳಾಲ ಪೋಲಿಸರ ತಂಡ ಯಶಸ್ವಿಯಾಗಿದ್ದಾರೆ.