ಮಂಗಳೂರು ವ್ಯಾಪಾರಿಗೆ ಜೀವಬೆದರಿಕೆ ಆರೋಪ: ಕಲಿ ಯೋಗೀಶ್‌ ಸಹಚರರ ಬಂಧನ.ಆರೋಪಿತರಿಂದ ರಿವಲ್ವಾರ್ ವಶಕ್ಕೆ.!

ಮಂಗಳೂರು ವ್ಯಾಪಾರಿಗೆ ಜೀವಬೆದರಿಕೆ ಆರೋಪ: ಕಲಿ ಯೋಗೀಶ್‌ ಸಹಚರರ ಬಂಧನ.ಆರೋಪಿತರಿಂದ ರಿವಲ್ವಾರ್ ವಶಕ್ಕೆ.!

ಅಶ್ವಸೂರ್ಯ/ಶಿವಮೊಗ್ಗ: 50 ಲಕ್ಷ ಹಣಕ್ಕೆ ಜವಳಿ ವ್ಯಾಪಾರಿಗೆ ಬೇಡಿಕೆ ಇಟ್ಟು ಆತನಿಗೆ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಿದ ಪೋಲಿಸರು ಅವರ ಬಳಿಇದ್ದ ಪಿಸ್ತೂಲ್‌ ಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ನಗರದ ಜವಳಿ ವ್ಯಾಪಾರಿಯೊಬ್ಬರಿಗೆ ಕರೆ ಮಾಡಿದ ಆರೋಪಿಗಳು 50ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟೋರಿಯಸ್ ಭೂಗತ ಪಾತಕಿ ಕಲಿ ಯೋಗೀಶನ ಸಹಚರರು ಎನ್ನಲಾದ ಇಬ್ಬರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಪಿಸ್ತೂಲ್ ಗಳ ಜೋತೆಗೆ ಸಜೀವ ಗುಂಡುಗಳು ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌, ‘ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಮೊಹಮ್ಮದ್ ಹನೀಫ್ ಅಲಿಯಾಸ್‌ ಅಲಿ ಮುನ್ನಾ (40) ಹಾಗೂ ಮುಡಿಪುವಿನ ಮೊಹಮ್ಮದ್ ರಫೀಕ್ ಅಲಿಯಾಸ್‌ ಮುಡಿಪು ರಫೀಕ್ (36) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾಗಿದ್ದು,

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ವಾಸವಿದ್ದಾರೆ. ಫಳ್ನೀರ್‌ನ ರಸ್ತೆಯಲ್ಲಿ ಇನ್ನೋವಾ ಕಾರಿನಲ್ಲಿ ತಿರುಗಾಡಿಕೊಂಡು ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪಿಗಳ ಬಗ್ಗೆ ಸುಳಿವು ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರ ತಂಡ ಆರೋಪಗಳನ್ನು ಖೆಡ್ಡಕ್ಕೆ ಕೆಡವಿಕೊಂಡಿದ್ದಾರೆ.

ಆರೋಪಿಗಳಿಂದ ಒಂದು ಪಿಸ್ತೂಲ್, ಒಂದು ರಿವಾಲ್ವರ್, 12 ಸಜೀವ ಮದ್ದುಗುಂಡುಗಳು, 42 ಗ್ರಾಂ  ಎಂಡಿಎಂಎ ಮಾದಕ ವಸ್ತು, ಕೃತ್ಯಕ್ಕೆ ಬಳಸಿದ  ಇನ್ನೋವಾ ಕಾರಿನ ಜೋತೆಗೆ 3 ಮೊಬೈಲ್ ಫೋನ್‌, ಡಿಜಿಟಲ್ ತೂಕ ಮಾಪಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸ್ವತ್ತುಗಳ  ಅಂದಾಜು ಮೌಲ್ಯ ₹ 10 ಲಕ್ಷ. ಬಂಧಿತರು ಕಳೆದ 16 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದರು.   
‘ಆರೋಪಿಗಳು ಈಚೆಗೆ ನಗರದ ಸೌರಾಷ್ಟ್ರ ಮಳಿಗೆಗೆ  ತೆರಳಿ, ಮಾಲೀಕರಿಗೆ ಫೋನ್‌ ನೀಡಿ ಮಾತನಾಡುವಂತೆ ಸೂಚಿಸಿದ್ದರು. ಭೂಗತ ಪಾತಕಿ ಕಲಿ ಯೋಗೀಶ್‌ ಇಂಟರ್ನೆಟ್ ಕರೆ ಮೂಲಕ ಫೋನ್‌ನಲ್ಲಿ ಮಾತನಾಡಿ ₹ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಬಂದರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆರೋಪಿಗಳು ಕಾರ್ಕಳದ ಉದ್ಯಮಿ ದಿನೇಶ್ ಶೆಟ್ಟಿ ಹತ್ಯೆ ನಡೆಸಲು ಸಂಚು ರೂಪಿಸಿದ್ದು, ಈ ಸಲುವಾಗಿ ರಿವಾಲ್ವರ್‌ ಹಾಗೂ ಪಿಸ್ತೂಲ್‌ ಖರೀದಿಸಿದ್ದರು’ ಎಂದು ಮಾಹಿತಿ ನೀಡಿದರು.

ಪುತ್ತೂರಿನ ರಾಜಧಾನಿ ಜ್ಯುವೆಲ್ಲರಿಯಲ್ಲಿ ನಡೆದಿದ್ದ ಶೂಟೌಟ್, ಸಂಜೀವ ಶೆಟ್ಟಿ ಜವಳಿ ಅಂಗಡಿಯಲ್ಲಿ ನಡೆದಿದ್ದ ಶೂಟೌಟ್, ಕಾಸರಗೋಡು ಜಿಲ್ಲೆಯ ಬೇವಿಂಜೆಯ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರನ ಮನೆಯಲ್ಲಿ ನಡೆದಿದ್ದ ಶೂಟೌಟ್ ಸಹಿತ ಒಟ್ಟು 14 ಪ್ರಕರಣಗಳಲ್ಲಿ  ಮೊಹಮ್ಮದ್ ಹನೀಫ್ ಆರೋಪಿ. ಆತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ನಗರ ಪೊಲೀಸ್ ಠಾಣೆಗಳಲ್ಲಿ ವಾರೆಂಟ್ ಜಾರಿಯಲ್ಲಿದೆ.  ಮೂಲ್ಕಿ ಠಾಣೆಯಲ್ಲಿ ದಾಖಲಾಗಿದ್ದ ಕಳವು, ಬರ್ಕೆ  ಠಾಣೆಯಲ್ಲಿ ದಾಖಲಾಗಿದ್ದ  ಕೊಲೆ ಯತ್ನ, ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಪೊಕ್ಸೊ ಪ್ರಕರಣ, ನಗರ ಪೂರ್ವ ಠಾಣೆಯಲ್ಲಿ ದಾಖಲಾಗಿದ್ದ ದರೋಡೆಗೆ ಸಂಚು ಪ್ರಕರಣ, ಕೊಣಾಜೆ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ, ದೇವಸ್ಥಾನದಲ್ಲಿ ಕಳವು ಹಾಗೂ ಹಲ್ಲೆ ಪ್ರಕರಗಳು, ಬಂಟ್ವಾಳ ಗ್ರಾಮಾಂತರ  ಠಾಣೆಯಲ್ಲಿ ದಾಖಲಾಗಿದ್ದ ಕಳವು ಹಾಗೂ ಮಂಜೇಶ್ವರದ ಕಣ್ಣೂರು ನಗರ  ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 9 ಪ್ರಕರಣಗಳಲ್ಲಿ ಮೊಹಮ್ಮದ್ ರಫೀಕ್ ಆರೊಪಿಯಾಗಿದ್ದ’ ಎಂದು ಮಾಹಿತಿ ನೀಡಿದ್ದರು.

ಸಿಸಿಬಿ ಎಸಿಪಿ ಗೀತಾ ಡಿ. ಕುಲಕರ್ಣಿ, ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್ ಎಚ್.ಎಂ, ಸಿಸಿಬಿ ಪಿಎಸ್ಐಗಳಾದ ನರೇಂದ್ರ, ಶರಣಪ್ಪ ಭಂಡಾರಿ, ಹರೀಶ್ ಪದವಿನಂಗಡಿ, ಎಎಸ್ಐ ಮೋಹನ್ ಕೆ.ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು  ಸಿಬ್ಬಂದಿಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ‌ಇದ್ದರು ಎಂದರು.

Leave a Reply

Your email address will not be published. Required fields are marked *

Optimized by Optimole
error: Content is protected !!