ಬೆಂಗಳೂರು ಭೂಗತ ಲೋಕಕ್ಕೆ ಇನ್ನೂ ನೆತ್ತರದಾಹ ತೀರಿದಂತೆ ಕಾಣುತ್ತಿಲ್ಲ ನಿತ್ಯ ಬೆಳಗಾದರೆ ಸಾಕು ಒಂದಲ್ಲ ಒಂದು ಏರಿಯಾದಲ್ಲಿ ರಿವೆಂಜಿನ ನಂಜಿಗೆ ತಲೆ ಉರುಳುತ್ತಿದೆ. ಇಲ್ಲಿ ನಾನು ಎನ್ನುವ ಹುಂಬತನಕ್ಕೆ. ಅಧಿಪತ್ಯ ಸಾಧಿಸುವ ನಿಟ್ಟಿನಲ್ಲಿ ರಾಡಿಗಳು ಹತ್ಯೆಯಾಗಿ ಉಸಿರು ಚಲ್ಲುತ್ತಿದ್ದಾರೆ. ಭೂಗತ ಲೋಕದ ನಿಲ್ಲದ ನೆತ್ತರದಾಹಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಬೆಚ್ಚಿಬಿದ್ದಿ ಹೋಗಿದೆ. ಪೋಲಿಸ್ ಇಲಾಖೆ ಕೂಡ ಎಷ್ಟೇ ಆಲರ್ಟ್ ಆಗಿದ್ದರು. ರೌಡಿಗಳಿಂದ ರೌಡಿಗಳ ಹತ್ಯೆ ನಿರಂತರವಾಗಿ ನೆಡೆಯುತ್ತಿದೆ…. ಇವರನ್ನೆ ನಂಬಿದ ಒಂದಷ್ಟು ಜೀವಗಳ ನೋವು ಹೇಳ ತೀರದಾಗಿದೆ…..
ಬೆಂಗಳೂರು ಶೇಷಾದ್ರಿಪುರಂ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಅಜಿತ್ ಬರ್ಬರ ಹತ್ತೆ.!
ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಜಿತ್ !
ಬೆಂಗಳೂರಿನ ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್, 2022ರಲ್ಲಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ. ಸಂಜೆ 4:15ರ ವೇಳೆಗೆ ಮನೆಯಿಂದ ಊಟ ಮುಗಿಸಿಕೊಂಡು ಹೊರಬಂದಿದ್ದ ಅಜಿತ್ ಮೇಲೆ ಮೊದಲೇ ಸ್ಕೆಚ್ ಹಾಕಿಕುಳಿತಿದ್ದ ಹಂತಕರು ಗ್ಯಾಂಗ್ ಅಜಿತನ ಮೇಲೆ ಏಕಾಏಕಿ ಅಟ್ಯಾಕ್ ಮಾಡಿದ್ದಾರೆ. ಲಾಂಗ್ ಬೀಸಿದ ರಭಸಕ್ಕೆ ಅಜಿತ್ ಸ್ಥಳದಲ್ಲೇ ಉಸಿರು ಚಲ್ಲಿದ್ದಾನೆ.! ಶೇಷಾದ್ರಿಪುರಂ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಜಿತ್ ಹಾಗೂ ಸೋದರ ಕಾರ್ತಿಕ್ ಇಬ್ಬರು ಗಣೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಏರಿಯಾದಲ್ಲಿ ನಾನೇ ಡಾನ್ ಎಂದು ಮೆರೆಯುತ್ತಿದ್ದ ಅಜಿತ್.ಇತನ ಬೆನ್ನಿಗೆ ಬಿದ್ದಿದ್ದ ಗ್ಯಾಂಗ್ ಒಂದು ಸಮಯಕ್ಕಾಗಿ ಕಾದಿದ್ದು ಅಜಿತ್ ನನ್ನು ಹತ್ಯೆಮಾಡಿ ರಿವೆಂಜ್ ತೀರಿಸಿಕೊಂಡಿದೆ
ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಯುವಕನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಮಾಡಲಾಗಿದೆ.ಈ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣಾವ್ಯಾಪ್ತಿಯ ಕೂಗಳೆತೆ ದೂರದಲ್ಲಿರುವ ರಸೆಲ್ದಾರ್ ಸ್ಟ್ರೀಟ್ ರಸ್ತೆಯಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ್ ರೌಡಿಗಳ ಗ್ಯಾಂಗ್ ರೌಡಿ ಅಜಿತ್ ನನ್ನು ಮನಬಂದಂತೆ ಲಾಂಗು ಮಚ್ಚುಗಳಿಂದ ದಾಳಿ ಮಾಡಿ ಬರ್ಬರವಾಗಿ ಹತ್ಯೆಮಾಡಿ ಎಸ್ಕೇಪ್ ಆಗಿದ್ದರು!
ಅಜಿತ್ ಕುಮಾರ್ (27) ಕೊಲೆಯಾದ ಯುವಕ. ಅಜಿತ್ ಕುಮಾರ್ 2022 ರಲ್ಲಿ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಕೇಸಿನ ಪ್ರಕರಣವೊಂದಕ್ಕೆ ಸಂಭಂಧಿಸಿದಂತೆ ಜೈಲಿಗೆ ಹೋಗಿದ್ದ. ಇತ್ತೀಚಿಗಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದವನು ಬದಲಾದವನಂತೆ ಕಂಡುಬಂದಿದ್ದ.
ಈ ಕಾರಣದಿಂದಲೆ ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಜಿತ್ ಕುಮಾರ್ ಊಟ ಮುಗಿಸಿಕೊಂಡು ರಸೆಲ್ದಾರ್ ಸ್ಟ್ರೀಟ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಹಂತಕರ ಗ್ಯಾಂಗ್ ಬೈಕಿನಲ್ಲಿ ಬಂದು ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.ರಸ್ತೆ ಅಟ್ಯಾಕ್ ಮಾಡಲು ಬಂದಿದ್ದಾರೆ ಎಂದು ಸುಳಿವರಿತ ಅಜಿತ್ ತಪ್ಪಿಸಿಕೊಂಡು ಓಡಲು ಮುಂದಾಗಿದ್ದಾನೆ ಆದರೆ ಮೊದಲೇ ಸ್ಕೇಚ್ ಹಾಕಿಬಂದಿದ್ದ ಹಂತಕರ ಗ್ಯಾಂಗ್ ಅಜಿತ್ ನನ್ನು ಮುಗಿಸಲೆ ಬೇಕು ಎಂದು ತೀರ್ಮಾನಿಸಿರಬೇಕು ಈ ಕಾರಣದಿಂದಲೆ ಓಡಲು ಮುಂದಾಗಿದ್ದ ಅಜಿತನ ಬೆನ್ನಿಗೆ ಬಿದ್ದು ಹಂತಕರು ಕೂಡ ಓಡಲು ಶುರುಮಾಡಿದ್ದಾರೆ ಸುಮಾರು
ನೂರು ಮೀಟರ್ ಅಷ್ಟು ದೂರ ಅಟ್ಟಾಡಿಸಿಕೊಂಡು ಹೊದ ಹಂತಕರು ಅಜಿತನ ದೇಹದ ತಲೆ ಭಾಗ ಸೇರಿದಂತೆ ಹಲವು ಕಡೆ ಲಾಂಗು ಮಚ್ಚಿನಿಂದ ದಾಳಿ ಮಾಡಿ ಕೊಲೆಮಾಡಿದ ಹಂತಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.! ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲಾಗಿದೆ.
ಕೊಲೆಯಾಗಿರುವ ಅಜಿತ್ ಕೂಡ ಹತ್ಯೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಇತ್ತೀಚೆಗಷ್ಟೇ ಹೊರ ಬಂದಿದ್ದ.! ಹಾಗಾಗಿ ಹಳೆ ದ್ವೇಷ ಇಟ್ಟುಕೊಂಡವರೇ ಅಜಿತ್ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಿರಿಯ ಪೋಲಿಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.